alex Certify BPL ಕುಟುಂಬಕ್ಕೆ ಭರ್ಜರಿ ಗಿಫ್ಟ್, ಪ್ರತಿ ತಿಂಗಳು 5 ಸಾವಿರ ರೂ., ಕೋವಿಡ್ ನಿಂದ ಮೃತಪಟ್ಟ ಕುಟುಂಬಕ್ಕೆ 3 ವರ್ಷ ನೆರವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BPL ಕುಟುಂಬಕ್ಕೆ ಭರ್ಜರಿ ಗಿಫ್ಟ್, ಪ್ರತಿ ತಿಂಗಳು 5 ಸಾವಿರ ರೂ., ಕೋವಿಡ್ ನಿಂದ ಮೃತಪಟ್ಟ ಕುಟುಂಬಕ್ಕೆ 3 ವರ್ಷ ನೆರವು

ತಿರುವನಂತಪುರಂ: ಕೇರಳ ಸರ್ಕಾರವು ಮೂರು ವರ್ಷಗಳ ಕಾಲ ಬಿಪಿಎಲ್ ಕುಟುಂಬಗಳಿಗೆ ತಿಂಗಳಿಗೆ 5,000 ರೂ. ಹೆಚ್ಚುವರಿ ಆರ್ಥಿಕ ನೆರವು ನೀಡಲಿದೆ. ಕೋವಿಡ್ ನಿಂದ ಮೃತಪಟ್ಟವರಿಗೆ ನೆರವು ನೀಡಲಾಗುವುದು.

ಕೇರಳ ರಾಜ್ಯದಲ್ಲಿ ಕೋವಿಡ್ -19 ನಿಂದ ಸಾವನ್ನಪ್ಪಿದ ವ್ಯಕ್ತಿಗಳ ಕುಟುಂಬಗಳಿಗೆ ಕೇರಳ ಸರ್ಕಾರವು ತಿಂಗಳಿಗೆ 5,000 ರೂಪಾಯಿಗಳ ಹೆಚ್ಚುವರಿ ಆರ್ಥಿಕ ಪರಿಹಾರವನ್ನು ನೀಡಲು ನಿರ್ಧರಿಸಿದೆ. ಈ ಸಹಾಯವನ್ನು ಮೂರು ವರ್ಷಗಳವರೆಗೆ ನೀಡಲಾಗುವುದು ಮತ್ತು ಇದು ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಮಾತ್ರ ಅನ್ವಯವಾಗುತ್ತದೆ.

ಕೇರಳದಲ್ಲಿ ಕೋವಿಡ್ ಸಂತ್ರಸ್ತರ ಬಿಪಿಎಲ್ ಕುಟುಂಬಗಳು 3 ವರ್ಷಗಳವರೆಗೆ ತಿಂಗಳಿಗೆ 5000 ರೂ.ಪಡೆಯಲಿವೆ. ವಿಶೇಷ ಹಣಕಾಸಿನ ನೆರವಿನೊಂದಿಗೆ 50,000 ರೂ. ಒಂದು ಬಾರಿ ನೀಡಲಾಗುವುದು ಎಂದು ಕೇರಳ ಸಚಿವ ಥಾಮಸ್ ಐಸಾಕ್ ಟ್ವೀಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...