alex Certify ಕಿಚ್ಚ ಸುದೀಪ್ ಅನುಪಸ್ಥಿತಿಯಲ್ಲಿ ಪ್ರಸಾರವಾಗಲಿದೆ ಈ ವಾರದ ‌ʼಬಿಗ್‌ ಬಾಸ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿಚ್ಚ ಸುದೀಪ್ ಅನುಪಸ್ಥಿತಿಯಲ್ಲಿ ಪ್ರಸಾರವಾಗಲಿದೆ ಈ ವಾರದ ‌ʼಬಿಗ್‌ ಬಾಸ್ʼ

ಬೆಂಗಳೂರು: ಪ್ರತಿ ವೀಕೆಂಡ್ ಬಂತೆಂದರೆ ಸಾಕು ಬಿಗ್ ಬಾಸ್ ಸ್ಪರ್ಧಿಗಳ ಜೊತೆಗೆ ಪ್ರೇಕ್ಷಕರಿಗೂ ಕೂಡ ಒಂದು ರೀತಿಯ ಸಡಗರ. ಬಿಗ್ ಮನೆಯಲ್ಲಿ ಒಂದು ವಾರದಲ್ಲಾದ ಘಟನಾವಳಿಗಳ ಸುತ್ತ ಮಾತುಕತೆ……ವಾರದ ಕಥೆ ಕಿಚ್ಚನ ಜೊತೆ ಮೂಲಕ ಕಿಚ್ಚ ಸುದೀಪ್ ಎಂಟ್ರಿಗಾಗಿ ಕಾಯುತ್ತಿರುತ್ತಾರೆ. ಆದರೆ ಈ ವಾರ ಕಿಚ್ಚ ಸುದೀಪ್ ಬಿಗ್ ಬಾಸ್ ಸ್ಪರ್ಧಿಗಳಿಗೆ ಶಾಕ್ ನೀಡುತ್ತಿದ್ದಾರೆ.

ಹೌದು. ಈ ವಾರ ಕಿಚ್ಚ ಸುದೀಪ್ ಬಿಗ್ ಬಾಸ್ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿಲ್ಲ. ಅನಾರೋಗ್ಯದ ಕಾರಣದಿಂದಾಗಿ ಸುದೀಪ್ ಈ ವಾರ ಬಿಗ್ ಬಾಸ್ ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿಲ್ಲ. ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿಯಲ್ಲಿರಲಿದ್ದಾರೆ ಎಂದು ತಿಳಿದುಬಂದಿದೆ.

233 ಮಿಲಿಯನ್ ವೀಕ್ಷಣೆ ಪಡೆದ ‘ಪೊಗರು’ ಚಿತ್ರದ ಖರಾಬು ಹಾಡು

ಈ ಕುರಿತು ಕಲರ್ಸ್ ಕನ್ನಡ ಪ್ರೊಗ್ರಾಮಿಂಗ್ ಹೆಡ್ ಪರಮೇಶ್ವರ್ ಗುಂಡ್ಕಲ್ ತಮ್ಮ ಫೇಸ್ ಬುಕ್ ನಲ್ಲಿ ಮಾಹಿತಿ ನೀಡಿದ್ದು, ಇಷ್ಟು ಸೀಸನ್ನುಗಳಲ್ಲಿ ಇಂಥ ಸಂದರ್ಭ ಎದುರಾಗುತ್ತಿರುವುದು ಇದೇ ಮೊದಲು. ಆರೋಗ್ಯದ ತೊಂದರೆ ಇರುವುದರಿಂದ ಕಿಚ್ಚ ಸುದೀಪ್ ಅವರು ಈ ವಾರ ಬಿಗ್ ಬಾಸ್ ಚಿತ್ರೀಕರಣದಲ್ಲಿ ಭಾಗವಹಿಸುತ್ತಿಲ್ಲ. ಆದರೆ ನಾಳೆ ಮತ್ತು ರವಿವಾರ ಬಿಗ್ ಬಾಸ್ ಎಪಿಸೋಡುಗಳು ರಾತ್ರಿ ಒಂಬತ್ತು ಗಂಟೆಗೆ ಎಂದಿನಂತೆ ಪ್ರಸಾರ ಆಗಲಿವೆ. ಜೊತೆಯಲ್ಲಿ ಈ ವಾರ ಅತಿಕಡಿಮೆ ಮತಗಳನ್ನು ಪಡೆದ ಒಬ್ಬರು ಕಂಟೆಸ್ಟೆಂಟ್ ಮನೆಯಿಂದ ಹೊರಹೋಗಲಿದ್ದಾರೆ. ಈ ಎಲಿಮಿನೇಷನ್ ಹೇಗೆ ನಡೆಯುತ್ತದೆ ಎನ್ನುವ ಕುತೂಹಲ ನಿಮಗಿದ್ದರೆ ಹೇಗೆಲ್ಲಾ ಮಾಡಬಹುದು ಎಂಬ ಆಯ್ಕೆಗಳನ್ನು ಎದುರಿಗೆ ಇಟ್ಟುಕೊಂಡು ಬಿಗ್ ಬಾಸ್ ತಂಡ ಕೆಲಸ ಮಾಡುತ್ತಿದೆ. ನಿಮ್ಮ ಕುತೂಹಲಕ್ಕೆ, ಪ್ರೀತಿಗೆ ಮತ್ತು ಶುಭಹಾರೈಕೆಗಳಿಗೆ ಧನ್ಯವಾದಗಳು ! ಎಂದು ತಿಳಿಸಿದ್ದಾರೆ.

ಇಷ್ಟು ಸೀಸನ್ನುಗಳಲ್ಲಿ ಇಂಥ ಸಂದರ್ಭ ಎದುರಾಗುತ್ತಿರುವುದು ಇದೇ ಮೊದಲು. ಆರೋಗ್ಯದ ತೊಂದರೆ ಇರುವುದರಿಂದ ಕಿಚ್ಚ ಸುದೀಪ್ ಅವರು ಈ ವಾರ ಬಿಗ್ ಬಾಸ್…

Posted by Parameshwar Gundkal on Friday, April 16, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...