alex Certify ಮಾದಕ ವಸ್ತು ಸೇವನೆ ಪ್ರಕರಣದಲ್ಲಿ ‘ಬಿಗ್ ಬಾಸ್’ ರನ್ನರ್ ಅಪ್ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾದಕ ವಸ್ತು ಸೇವನೆ ಪ್ರಕರಣದಲ್ಲಿ ‘ಬಿಗ್ ಬಾಸ್’ ರನ್ನರ್ ಅಪ್ ಅರೆಸ್ಟ್

ಹೈದರಾಬಾದ್: ಮಾದಕ ವಸ್ತು ಸೇವನೆ ಪ್ರಕರಣದಲ್ಲಿ ತೆಲುಗು ‘ಬಿಗ್ ಬಾಸ್’ ಸೀಸನ್ 5ರ ರನ್ನರ್ ಅಪ್ ಷಣ್ಮುಖ್ ಜಸ್ವಂತ್ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

ಯೂಟ್ಯೂಬ್ ವಿಡಿಯೋಗಳ ಮೂಲಕ ಜನಪ್ರಿಯತೆ ಗಳಿಸಿದ್ದ ಷಣ್ಮುಖ್ ಜಸ್ವಂತ್ ನಂತರ ತೆಲುಗು ‘ಬಿಗ್ ಬಾಸ್’ ಗೆ ಹೋಗಿದ್ದರು. ರನ್ನರ್ ಅಪ್ ಆಗಿದ್ದರು. ದಿಢೀರ್ ಜನಪ್ರಿಯತೆಯಿಂದ ‘ಬಿಗ್ ಬಾಸ್’ ಗೆ ಹೋಗಿ ಬಂದಿದ್ದ ಅವರೀಗ ಮಾದಕ ವಸ್ತು ಪ್ರಕರಣದಲ್ಲಿ ಬಂಧಿತರಾಗಿದ್ದಾರೆ.

ಷಣ್ಮುಖ್ ಸಹೋದರ ಸಂಪತ್ ವಿನಯ್ ವೈದ್ಯೆಯೊಬ್ಬರಿಗೆ ಮೋಸ ಮಾಡಿ ಮತ್ತೊಂದು ಮದುವೆಗೆ ಸಜ್ಜಾಗಿದ್ದ. ವೈದ್ಯೆಯ ದೂರು ಸ್ವೀಕರಿಸಿದ ಪೊಲೀಸರು ಆರೋಪಿ ಸಂಪತ್ ನನ್ನು ವಿಚಾರಣೆ ಮಾಡಲು ನಿವಾಸಕ್ಕೆ ತೆರಳಿದ್ದಾಗ ಅವರ ಸಹೋದರ ಷಣ್ಮುಖ್ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಬಂಧಿಸಲಾಗಿದೆ. ಸಂಪತ್ ವಿನಯ್ ನನ್ನು ಕೂಡ ಬಂಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...