alex Certify ಟೋಕಿಯೋ ಒಲಿಂಪಿಕ್ಸ್ ನಲ್ಲಿ ‘ಆಜಾ ನಾಚ್ಲೆ’ ಕಲರವ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೋಕಿಯೋ ಒಲಿಂಪಿಕ್ಸ್ ನಲ್ಲಿ ‘ಆಜಾ ನಾಚ್ಲೆ’ ಕಲರವ….!

Madhuri Dixit's Aaja Nachle takes centre stage in Tokyo as Israeli duo perform to it, watch | Bollywood - Hindustan Times

ಟೋಕಿಯೋ: ಬಾಲಿವುಡ್ ಗೆ ನಮ್ಮ ದೇಶದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಅಪಾರ ಅಭಿಮಾನಿ ಬಳಗವಿದೆ. ಅದು ಎಷ್ಟರಮಟ್ಟಿಗೆ ಇದೆಯೆಂದರೆ ಒಲಿಂಪಿಕ್ಸ್ ನಲ್ಲೂ ಕೂಡ ಪ್ರೂವ್ ಆಗಿದೆ.

ಹೌದು, ಇಸ್ರೇಲ್ ಈಜುಗಾರರಾದ ಈಡನ್ ಬ್ಲೆಚರ್ ಹಾಗೂ ಶೆಲ್ಲಿ ಬೊಬ್ರಿಟ್ಸ್ಕಿ ಒಲಿಂಪಿಕ್ಸ್ ನಲ್ಲಿ ತಮ್ಮ ಪ್ರದರ್ಶನ ನೀಡಿದ್ರು. ಈ ವೇಳೆ ಅವರು ಆಯ್ಕೆ ಮಾಡಿಕೊಂಡಂತಹ ಹಾಡು ಮಾಧುರಿ ಧೀಕ್ಷಿತ್ ಅಭಿನಯದ ‘ಆಜಾ ನಾಚ್ಲೆ’ ಹಾಡಿಗೆ ಈಜಿನ ಮುಖಾಂತರ ಜನರನ್ನು ರಂಜಿಸಿದ್ದಾರೆ.

ಹಬ್ಬಕ್ಕೆ ಊರಿಗೆ ಹೋಗುವ ಮೊದಲು ತಿಳಿದಿರಲಿ ಈ ನಿಯಮ

‘ಇಸ್ರೇಲ್ ಇನ್ ಇಂಡಿಯಾ’ ಎಂಬ ಟ್ವಿಟ್ಟರ್ ಖಾತೆಯು ಈ ವಿಡಿಯೋ ಹಂಚಿಕೊಂಡಿದ್ದು, ‘’ಇಸ್ರೇಲ್ ಬಾಲಿವುಡ್ ನ್ನು ಪ್ರೀತಿಸುತ್ತದೆ ಹಾಗೂ ಈಡನ್ ಬ್ಲೆಚರ್ ಮತ್ತು ಶೆಲ್ಲಿ ಬೊಬ್ರಿಟ್ಸ್ಕಿ ಅವರು ಮಾಧುರಿ ದೀಕ್ಷಿತ್ ಅವರ ಆಜಾ ನಾಚ್ಲೆ ಹಾಡಿಗೆ ಟೋಕಿಯೋ ಒಲಿಂಪಿಕ್ಸ್ ನಲ್ಲಿ ನೀಡಿರುವ ಪ್ರದರ್ಶನವು ಅತ್ಯುತ್ತಮ ಉದಾಹರಣೆಯಾಗಿದೆ’’ ಎಂದು ಬರೆದಿದ್ದಾರೆ.

ಇನ್ನು ಈ ಜೋಡಿಯ ಪ್ರದರ್ಶನವು ಭಾರತೀಯ ಮನಗೆದ್ದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...