alex Certify ಕೊರಿಯೋಗ್ರಾಫರ್​ ಗೆ ಚಿನ್ನದ ಹುಡುಗ ನೀರಜ್​ ಚೋಪ್ರಾ ಪ್ರೇಮ ನಿವೇದನೆ…! ನೆಟ್ಟಿಗರಿಂದ ಫನ್ನಿ ರಿಯಾಕ್ಷನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರಿಯೋಗ್ರಾಫರ್​ ಗೆ ಚಿನ್ನದ ಹುಡುಗ ನೀರಜ್​ ಚೋಪ್ರಾ ಪ್ರೇಮ ನಿವೇದನೆ…! ನೆಟ್ಟಿಗರಿಂದ ಫನ್ನಿ ರಿಯಾಕ್ಷನ್

ಭಾರತದ ಚಿನ್ನದ ಹುಡುಗ ನೀರಜ್​ ಚೋಪ್ರಾ ಯಾವುದಾದರೊಂದು ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಲೇ ಇರ್ತಾರೆ.

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಸಂಪಾದಿಸಿದ ಬಳಿಕ ನೀರಜ್​ ಚೋಪ್ರಾ ಸಾಕಷ್ಟು ಕಾರ್ಯಕ್ರಮಗಳಲ್ಲಿ, ಸಂದರ್ಶನದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಸಾಕಷ್ಟು ಟೆಲಿವಿಷನ್​ ಶೋಗಳಲ್ಲಿಯೂ ಅತಿಥಿಯಾಗಿ ನೀರಜ್​ ಆಗಮಿಸಿದ್ದಾರೆ.

ಸ್ವರ್ಣ ಪದಕ ವಿಜೇತ ನೀರಜ್​ ಸದ್ಯ ಹಿಂದಿ ರಿಯಾಲಿಟಿ ಶೋಗಳಲ್ಲಿ ಒಂದಾದ ಡ್ಯಾನ್ಸ್​ ಪ್ಲಸ್​ ಸೀಸನ್​ 6ರಲ್ಲಿ ಕಾಣಿಸಿಕೊಂಡ್ರು. ವಿಶೇಷ ಅಂದ್ರೆ ಈ ಕಾರ್ಯಕ್ರಮದಲ್ಲಿ ಕೊರಿಯಾಗ್ರಾಫರ್​ ಶಕ್ತಿ ಮೋಹನ್​ ಎದುರು ಪ್ರೇಮ ನಿವೇದನೆ ಮಾಡುವ ಮೂಲಕ ನಿರೂಪಕ ರಾಘವ್​ ಜುಯಲ್​ಗೆ ಚಮಕ್​ ನೀಡಿದ್ದಾರೆ.

ಈ ಕಾರ್ಯಕ್ರಮ ಇನ್ನೂ ಪ್ರಸಾರ ಕಂಡಿಲ್ಲ.ಆದರೆ ಕಾರ್ಯಕ್ರಮದ ಪ್ರೋಮೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಇದು ಮಾತ್ರವಲ್ಲದೇ ನೀರಜ್​ ಈ ಕಾರ್ಯಕ್ರಮದ ಮೂಲಕ ತಮ್ಮ ನೃತ್ಯ ಕೌಶಲ್ಯವನ್ನೂ ಪ್ರದರ್ಶಿಸಿದ್ದಾರೆ.

ನನ್ನ ಜೀವನದಲ್ಲಿ ನನಗೆ ಎಲ್ಲಾ ಅವಶ್ಯವಾದದ್ದು ಜಾವೆಲಿನ್​ ಆಗಿದೆ. ಇದನ್ನು ಹೊರತುಪಡಿಸಿ ನನಗೆ ಒಳ್ಳೆಯ ಅಡುಗೆ ಮಾಡಲು ಬರುವುದಿಲ್ಲ ಹಾಗೂ ಸಮಯ ನೀಡಲೂ ಸಾಧ್ಯವಾಗುವುದಿಲ್ಲ ಎಂದು ಶಕ್ತಿಗೆ ನೀರಜ್​ ಹೇಳೋದನ್ನು ಪ್ರೋಮೋದಲ್ಲಿ ಕಾಣಬಹುದಾಗಿದೆ.

ಇದಕ್ಕೆ ಪ್ರತಿಯಾಗಿ ರಾಘವ್​, ನೀವ್ಯಾಕೋ ತಪ್ಪು ಜಾಗದಲ್ಲಿ ಜಾವೆಲಿನ್​ ಎಸೆದಂತೆ ಕಾಣ್ತಿದೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...