alex Certify ಹಬ್ಬಕ್ಕೆ ಊರಿಗೆ ಹೋಗುವ ಮೊದಲು ತಿಳಿದಿರಲಿ ಈ ನಿಯಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಬ್ಬಕ್ಕೆ ಊರಿಗೆ ಹೋಗುವ ಮೊದಲು ತಿಳಿದಿರಲಿ ಈ ನಿಯಮ

From Sunday, No Hotel Quarantine for Indian Travellers in UK as Rules Ease

ಭಾರತದಲ್ಲಿ ಕೊರೊನಾ ವೈರಸ್ 3ನೇ ಅಲೆ ಆಗಸ್ಟ್ ತಿಂಗಳಿನಿಂದ ಶುರುವಾಗುತ್ತೆ ಎಂಬ ಭಯವಿದೆ. ಆಗಸ್ಟ್, ಸೆಪ್ಟೆಂಬರ್ ತಿಂಗಳಿನಲ್ಲಿ ಹಬ್ಬಗಳ ಸಾಲಿದೆ. ಗಣೇಶ ಚತುರ್ಥಿ, ರಕ್ಷಾ ಬಂಧನ ಹಬ್ಬಗಳ ತಯಾರಿ ಈಗಲೇ ಶುರುವಾಗಿದೆ. ಹಬ್ಬದ ರಜೆಗೆ ಕೆಲವರು ಊರಿಗೆ ತೆರಳಿದ್ರೆ ಮತ್ತೆ ಕೆಲವರು ಪ್ರವಾಸ ಕೈಗೊಳ್ಳುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ವಿವಿಧ ರಾಜ್ಯಗಳು ತಮ್ಮ ಗಡಿಗಳನ್ನು ಪ್ರವೇಶಿಸಲು ಕೆಲವು ನಿಯಮಗಳನ್ನು ನಿಗದಿಪಡಿಸಿವೆ. ಬೇರೆ ರಾಜ್ಯಕ್ಕೆ ಪ್ರಯಾಣ ಬೆಳೆಸುವ ಮೊದಲು ಅಲ್ಲಿನ ನಿಯಮಗಳನ್ನು ತಿಳಿದುಕೊಳ್ಳಿ.

ಛತ್ತೀಸ್ಗಢ ಸರ್ಕಾರ,. ಆರ್‌ಟಿ-ಪಿಸಿಆರ್ ನಕಾರಾತ್ಮಕ ವರದಿ ಕಡ್ಡಾಯಗೊಳಿಸಿದೆ. ವಿಮಾನದಲ್ಲಿ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರು ಆರ್‌ಟಿ-ಪಿಸಿಆರ್ ನಕಾರಾತ್ಮಕ ವರದಿ ಹೊಂದಿರಬೇಕೆಂದು ಸೂಚನೆ ನೀಡಿದೆ.

ಕರ್ನಾಟಕ ಸರ್ಕಾರವು ಕೇರಳ ಮತ್ತು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಜನರಿಗೆ ಆರ್ಟಿ-ಪಿಸಿಆರ್ ನಕಾರಾತ್ಮಕ ವರದಿಗಳನ್ನು ಕಡ್ಡಾಯಗೊಳಿಸಿದೆ.

ಹಿಮಾಚಲ ಪ್ರದೇಶವು ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯಕ್ಕೆ ಪ್ರವೇಶಿಸುವ ಪ್ರವಾಸಿಗರಿಗೆ 72 ಗಂಟೆ ಒಳಗಿನ ಆರ್‌ಟಿ-ಪಿಸಿಆರ್ ವರದಿಯನ್ನು ಕಡ್ಡಾಯಗೊಳಿಸಿದೆ. ಲಸಿಕೆ ಪಡೆದಿದ್ದವರು ಪ್ರಮಾಣ ಪತ್ರ ತೋರಿಸಬೇಕು.

ಆಗಸ್ಟ್ 5 ರಿಂದ ಕೇರಳದಿಂದ ತಮಿಳುನಾಡಿಗೆ ಪ್ರಯಾಣಿಸುವ ಪ್ರಯಾಣಿಕರು, ಆರ್‌ಟಿ-ಪಿಸಿಆರ್ ಪರೀಕ್ಷೆಯ ಋಣಾತ್ಮಕ ಪ್ರಮಾಣಪತ್ರವನ್ನು ಸಲ್ಲಿಸಿದರೆ ಮಾತ್ರ ಚೆನ್ನೈಗೆ ಬರಬಹುದು.

ಕೇರಳದಿಂದ ಬರುವ ಪ್ರಯಾಣಿಕರಿಗೆ ಗೋವಾ ಆರ್‌ಟಿ-ಪಿಸಿಆರ್ ವರದಿಯನ್ನು ಕಡ್ಡಾಯ ಮಾಡಿದೆ.

ಪಶ್ಚಿಮ ಬಂಗಾಳ ಸರ್ಕಾರ ಪುಣೆ, ಮುಂಬೈ ಮತ್ತು ಚೆನ್ನೈನಿಂದ ಬರುವ ಪ್ರಯಾಣಿಕರಿಗೆ ಆರ್‌ಟಿ-ಪಿಸಿಆರ್ ವರದಿಯನ್ನು ಕಡ್ಡಾಯಗೊಳಿಸಿದೆ.

ಆಂಧ್ರಪ್ರದೇಶ, ಮಧ್ಯಪ್ರದೇಶ, ಪಂಜಾಬ್, ಚಂಡೀಗಢ, ಹರಿಯಾಣದಲ್ಲಿ ನಕಾರಾತ್ಮಕ ವರದಿ ಅಗತ್ಯವಿಲ್ಲ.

ಲಸಿಕೆಯ ಒಂದೇ ಡೋಸ್ ಪಡೆದ ಜನರಿಗೆ ರಾಜಸ್ಥಾನ ಮತ್ತು ನಾಗಾಲ್ಯಾಂಡ್‌ನಲ್ಲಿ ನಕಾರಾತ್ಮಕ ವರದಿ ಅಗತ್ಯವಿಲ್ಲ.

ಛತ್ತೀಸ್‌ಗಢ, ಮಣಿಪುರ, ಒಡಿಶಾ, ತ್ರಿಪುರಾ, ಉತ್ತರಾಖಂಡ, ಮಹಾರಾಷ್ಟ್ರ ಮತ್ತು ಮೇಘಾಲಯದಲ್ಲಿ ಲಸಿಕೆಯ ಎರಡು ಡೋಸ್‌ಗಳನ್ನು ಪಡೆದ ಜನರಿಗೆ ನಕಾರಾತ್ಮಕ ವರದಿ ಅಗತ್ಯವಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...