alex Certify ತರಬೇತಿ ವೇಳೆ ಆಯತಪ್ಪಿ ಬಿದ್ದ ಜಿಮ್ನಾಸ್ಟ್​ ಬೆನ್ನುಹುರಿಗೆ ಗಂಭೀರ ಹಾನಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತರಬೇತಿ ವೇಳೆ ಆಯತಪ್ಪಿ ಬಿದ್ದ ಜಿಮ್ನಾಸ್ಟ್​ ಬೆನ್ನುಹುರಿಗೆ ಗಂಭೀರ ಹಾನಿ..!

ಜಪಾನ್​ನ ಜಿಮ್ನಾಸ್ಟ್​ ಹಿತೋಮಿ ಹಟಕೇಡಾ ಎಂಬವರು ತರಬೇತಿ ಪಡೆಯುತ್ತಿದ್ದ ವೇಳೆ ಬಾರ್​ಗಳಿಂದ ಆಯತಪ್ಪಿ ಬಿದ್ದ ಪರಿಣಾಮ ಅವರ ಬೆನ್ನುಮೂಳೆಗೆ ಗಂಭೀರ ಗಾಯ ಉಂಟಾಗಿದೆ ಎಂದು ಜಪಾನ್​ ಜಿಮ್ನಾಸ್ಟಿಕ್ಸ್​​ ಅಸೋಸಿಯೇಷನ್​ ಮಾಹಿತಿ ನೀಡಿದೆ.

ಟೋಕಿಯೋ ಒಲಿಂಪಿಕ್ಸ್​ನಲ್ಲೂ ಭಾಗವಹಿಸಿ ಗಮನ ಸೆಳೆದಿದ್ದ ಹಿತೋಮಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ವೇಳೆ ವೈದ್ಯರು ಹಿತೋಮಿಯ ಬೆನ್ನು ಮೂಳೆಗೆ ಗಂಭೀರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ ಎಂದು ಹೇಳಿದ್ದಾರೆ.

21 ವರ್ಷದ ಹಿತೋಮಿ ಇಂದು ನಡೆಯಲಿರುವ ವರ್ಲ್ಡ್​​ ಚಾಂಪಿಯನ್​ಶಿಪ್​ ಆಲ್​ ಅರೌಂಡ್​ ಫೈನಲ್​ ಪಂದ್ಯದಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಅರ್ಹತೆ ಪಡೆದಿದ್ದರು. ಆದರೆ ಇದೀಗ ಅನಿವಾರ್ಯವಾಗಿ ಪಂದ್ಯದಿಂದ ಹಿಂದೆ ಸರಿದಿದ್ದಾರೆ.

ಹಿತೋಮಿಗೆ ಆಕೆಯ ತಾಯಿ ಯುಕಿಕೊ ತರಬೇತಿ ನೀಡುತ್ತಿದ್ದರು. ಹಿತೋಮಿ ತಂದೆ ಯೋಶೈಕಿ ಕೂಡ ಮಾಜಿ ಜಿಮ್ನಾಸ್ಟ್​ ಆಗಿದ್ದು, 1992ರ ಜಪಾನ್​​ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಸಂಪಾದಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...