alex Certify ನಗು ತರಿಸುತ್ತೆ ನೇರ ಪ್ರಸಾರದ ಈ ವಿಡಿಯೋ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಗು ತರಿಸುತ್ತೆ ನೇರ ಪ್ರಸಾರದ ಈ ವಿಡಿಯೋ….!

ಲೈವ್​​ನಲ್ಲಿದ್ದ ಪತ್ರಕರ್ತನ ಮೊಬೈಲ್​​ ಫೋನ್ ​ನ್ನ ಕಳ್ಳ ಎಗರಿಸಿದ ಘಟನೆ ಅರ್ಜೇಂಟೀನಾದಲ್ಲಿ ನಡೆದಿದೆ. ಖಾಸಗಿ ವಾಹಿನಿಯ ಪತ್ರಕರ್ತ ಡಿಯಾಗೋ ಡೆರ್ಮಾಕೋ ಎಂಬವರ ಮೊಬೈಲ್​ ಹಾಡಹಗಲೇ ಕಳ್ಳತನಾಗಿದೆ.

ಕಳ್ಳ, ಪತ್ರಕರ್ತನ ಮೊಬೈಲ್​ನ್ನ ಎಗರಿಸಿಕೊಂಡು ಹೋಗ್ತಿರುವ ಸಂಪೂರ್ಣ ದೃಶ್ಯ ಟಿವಿಯಲ್ಲಿ ವರದಿಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ಸದ್ದು ಮಾಡ್ತಿದೆ.

ಅಕ್ಟೋಬರ್​ 20ರಂದು ಈ ಘಟನೆ ನಡೆದಿದೆ. ಲೈವ್​ ನೀಡಲು ತಯಾರಾಗ್ತಿದ್ದ ಪತ್ರಕರ್ತ ತನ್ನ ಮಾಸ್ಕ್​​ನ್ನ ಸರಿಮಾಡಿಕೊಳ್ಳೋಕೆ ಹೋಗಿದ್ದಾರೆ. ಈ ವೇಳೆ ಎಲ್ಲಿಂದಲೋ ಓಡಿ ಬಂದ ಕಳ್ಳ ಮೊಬೈಲ್​ ಎಗರಿಸಿ ಪರಾರಿಯಾಗಿದ್ದಾನೆ.

ಆದರೆ ಕೂಡಲೇ ಅಲ್ಲಿ ನೆರೆದಿದ್ದವರೆಲ್ಲ ಕಳ್ಳನ ಹಿಂದೆ ಓಡಿದ್ದು ಪತ್ರಕರ್ತನ ಮೊಬೈಲ್​ ಕಳ್ಳನ ಕೈಯಿಂದ ತೆಗೆದುಕೊಳ್ಳವಲ್ಲಿ ಯಶಸ್ವಿಯಾಗಿದ್ದಾರೆ .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...