alex Certify ಬೇಸಿಗೆ ರಜೆ ಕಳೆಯಲು ಜನಸಂದಣಿಯಿಲ್ಲದ ತಂಪಾದ ತಾಣಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆ ರಜೆ ಕಳೆಯಲು ಜನಸಂದಣಿಯಿಲ್ಲದ ತಂಪಾದ ತಾಣಗಳು

ಬೇಸಿಗೆಯಲ್ಲೂ ತಂಪಾಗಿರುವ ಸ್ಥಳಗಳಿಗೆ ಪ್ರವಾಸ ಹೋಗಲು ಎಲ್ಲರೂ ಇಷ್ಟಪಡುತ್ತಾರೆ. ಹಾಗಾಗಿ  ಹಿಮಾಚಲ, ಉತ್ತರಾಖಂಡದಂತಹ ತಂಪಾದ ಗಿರಿಧಾಮಗಳಲ್ಲಿ ಸಾಕಷ್ಟು ಜನಸಂದಣಿ ಇರುತ್ತದೆ. ಆದರೆ ಬೇಸಿಗೆ ರಜೆಯನ್ನು ಜನಸಂದಣಿಯಿಲ್ಲದ ಸ್ಥಳಗಳಲ್ಲಿ ಕಳೆಯಲು ಬಯಸುವವರಿಗೆ ಕೆಲವೊಂದು ಸುಂದರ ಆಯ್ಕೆಗಳಿವೆ.

ಅರುಣಾಚಲ

ಅರುಣಾಚಲದ ತವಾಂಗ್, ಝೀರೋ ಬೊಮ್ಡಿಲಾ, ಭಾಲುಕ್‌ಪಾಂಗ್‌ನಂತಹ ನಗರಗಳು ಬೇಸಿಗೆಯಲ್ಲಿ ಭೇಟಿ ನೀಡಲು ಉತ್ತಮ ಆಯ್ಕೆಗಳಾಗಿವೆ. ಚಳಿಗಾಲದಲ್ಲಿ ಈ ಸ್ಥಳಗಳಲ್ಲಿ  ತಾಪಮಾನವು -15 ಡಿಗ್ರಿಗಿಂತ ಕೆಳಗಿಳಿಯುತ್ತದೆ. ಆದರೆ ಬೇಸಿಗೆಯಲ್ಲಿ ಉಷ್ಣಾಂಶ 15-20ರ ನಡುವೆ ಇರುತ್ತದೆ.

ಮಹಾರಾಷ್ಟ್ರ

ಕಾಮ್ಶೆಟ್ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿರುವ ಒಂದು ಗಿರಿಧಾಮ. ಬೇಸಿಗೆಯಲ್ಲಿ ಇಲ್ಲಿಗೆ ಹೋಗಬಹುದು. ಇಲ್ಲಿ ಮಂಜುಗಡ್ಡೆಯ ಚಳಿಯಿರುವುದಿಲ್ಲ, ಆದರೆ ಸೆಖೆಯ ಅನುಭವ ಕೂಡ ಆಗುವುದಿಲ್ಲ. ಈ ತಾಣವು ಫ್ಯಾಮಿಲಿ ಟ್ರಿಪ್‌ಗೆ ಹೇಳಿ ಮಾಡಿಸಿದಂತಿದೆ.

ಸಿಕ್ಕಿಂ

ಬೇಸಿಗೆಯಲ್ಲಿ ಸಿಕ್ಕಿಂಗೆ ಪ್ರವಾಸ ಹೋಗಬಹುದು. ಇಲ್ಲಿನ ಲಾಚುಂಗ್, ಖೆಸಿಯೋಪಲ್ರಿ, ಗೊಯಿಚಾ ಲಾ ನಗರಗಳು ಸಾಕಷ್ಟು ತಂಪಾಗಿವೆ. ಇಲ್ಲಿ ನೀವು ಹಿಮಪಾತವನ್ನು ಸಹ ಆನಂದಿಸಬಹುದು.

ಕರ್ನಾಟಕ

ಕರ್ನಾಟಕದ ಗಿರಿಧಾಮವಾಗಿರುವ ಕುದುರೆಮುಖ ತನ್ನ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇದು ಭಾರತದ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಬೇಸಿಗೆಯಲ್ಲಿ ಇಲ್ಲಿ ತಾಪಮಾನವು 24-29 ಡಿಗ್ರಿಗಳಿಗೆ ಏರುತ್ತದೆ. ಇದಲ್ಲದೆ ಸಮೀಪದ ಚಿಕ್ಕಮಗಳೂರಿಗೆ ಸಹ ಭೇಟಿ ನೀಡಬಹುದು.

ನಾಗಾಲ್ಯಾಂಡ್

ನಾಗಾಲ್ಯಾಂಡ್‌ನ ಜುಕು ಕಣಿವೆ ಬೇಸಿಗೆಯಲ್ಲಿ ಭೇಟಿ ನೀಡಲು ಉತ್ತಮ ಸ್ಥಳವಾಗಿದೆ. ಇಲ್ಲಿ ಎಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಪ್ರಕೃತಿ ಸೌಂದರ್ಯದ ಸುಂದರ ನೋಟಗಳನ್ನು ನೋಡಬಹುದು. ಮಳೆಯನ್ನು ಇಷ್ಟಪಡುವವರಿಗಂತೂ ಇದು ಹೇಳಿ ಮಾಡಿಸಿದಂತಹ ಜಾಗ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...