alex Certify ‌ʼಪೇಟಿಎಂʼ ಬಳಕೆದಾರರಿಗೆ ಮತ್ತೊಂದು ಗುಡ್‌ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಪೇಟಿಎಂʼ ಬಳಕೆದಾರರಿಗೆ ಮತ್ತೊಂದು ಗುಡ್‌ ನ್ಯೂಸ್

ಪೇಟಿಎಂ ಈಗ ಕೇವಲ ಹಣಕಾಸು ವ್ಯವಹಾರ ನಡೆಸುವುದು, ಶಾಪಿಂಗ್​ ಮಾಡುವುದಕ್ಕೆ, ಬಿಲ್​ ಪಾವತಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಹೊಸ ಹೊಸ ಉಪಕ್ರಮಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಇದೀಗ ಯಾವುದೇ ರೈಲಿನ ಲೈವ್​ ರನ್ನಿಂಗ್​ ಸ್ಥಿತಿಯನ್ನು ಪರಿಶೀಲಿಸಲು ಅವಕಾಶ ಮಾಡಿಕೊಟ್ಟಿದೆ.

ರೈಲು ಪ್ರಯಾಣಿಕರಿಗೆ ತಮ್ಮ ರೈಲುಗಳ ರಿಯಲ್​ ಟೈಮ್​ ತಿಳಿಯಲು ಸಹಾಯ ಮಾಡಲು ಹಲವಾರು ಅಪ್ಲಿಕೇಶನ್​ಗಳು ಇವೆ. ಪೇಟಿಎಂ ಕೂಡ ತನ್ನ ಬಳಕೆದಾರರಿಗೆ ಅಪ್ಲಿಕೇಶನ್​ ಮೂಲಕ ರೈಲು ಟಿಕೆಟ್​ಗಳನ್ನು ಬುಕ್​ ಮಾಡಲು ಸಹಾಯ ಮಾಡುತ್ತಿದೆ. ಇತ್ತೀಚೆಗೆ, ರಿಯಲ್​ ಟೈಮ್​ ಮಾಹಿತಿ ಒದಗಿಸುವ ಸೇವೆ ಆರಂಭಿಸಿದೆ.

ಹಂತ 1: ರೈಲು ಸಂಖ್ಯೆ ಅಥವಾ ರೈಲಿನ ಹೆಸರನ್ನು ನಮೂದಿಸುವುದು.

ಹಂತ 2: ಬೋರ್ಡಿಂಗ್ ಸ್ಟೇಷನ್​ ಆಯ್ಕೆಮಾಡುವುದು.

ಹಂತ 3: ನಮೂದಿಸಿದ ದಿನಾಂಕಗಳಿಂದ ಬೋರ್ಡಿಂಗ್ ದಿನಾಂಕವನ್ನು ಆಯ್ಕೆ ಮಾಡಿ ಮತ್ತು ʼಲೈವ್​ ಸ್ಥಿತಿಯನ್ನು ಪರಿಶೀಲಿಸಿ’ ಕ್ಲಿಕ್​ ಮಾಡಿ.

ಹಂತ 4: ನೀವು ಈಗ ನಿಮ್ಮ ರೈಲು ಎಲ್ಲಿದೆ ಎಂದು ಗುರುತಿಸಬಹುದು.

ನೀವು ಅದೇ ಅಪ್ಲಿಕೇಶನ್ ​ನಲ್ಲಿ ರೈಲನ್ನು ಬುಕ್​ ಮಾಡಬಹುದು, ಇದು ಭಾರತೀಯ ರೈಲ್ವೆ ಕ್ಯಾಟರಿಂಗ್​ ಮತ್ತು ಪ್ರವಾಸೋದ್ಯಮ ನಿಗಮದಿಂದ ಸೀಟುಗಳ ಲಭ್ಯತೆಯ ಬಗ್ಗೆ ರಿಯಲ್​ ಟೈಮ್​ ಅಪ್ಡೇಟ್‌ಗಳನ್ನು ಪಡೆಯುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...