alex Certify ಲೈವ್ ವಿಡಿಯೋ ಮಾಡುತ್ತಿರುವಾಗಲೇ ಫುಡ್ ಬ್ಲಾಗರ್ ಕೊಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೈವ್ ವಿಡಿಯೋ ಮಾಡುತ್ತಿರುವಾಗಲೇ ಫುಡ್ ಬ್ಲಾಗರ್ ಕೊಲೆ

ಕಠ್ಮಂಡು: “ಫ್ಯಾಟಿ ಗೋಸ್ ಟು ಆಫ್ರಿಕಾ” ಎಂಬ ಆನ್‌ಲೈನ್ ಫುಡ್ ಬ್ಲಾಗರ್ ನೇಪಾಳದಲ್ಲಿ ತನ್ನ ಲೈವ್ ಸ್ಟ್ರೀಮ್‌ನಲ್ಲಿಯೇ ಕೊಲ್ಲಲ್ಪಟ್ಟಿರುವ ಭಯಾನಕ ಘಟನೆ ನಡೆದಿದೆ.

ಕಠ್ಮಂಡುವಿನ ಬೀದಿಗಳಲ್ಲಿ ಪ್ರತಿಸ್ಪರ್ಧಿಗಳಿಂದ ಈ ಕೊಲೆ ನಡೆದಿದೆ ಎನ್ನಲಾಗಿದೆ. ಮಾರಣಾಂತಿಕ ದಾಳಿಯನ್ನು ಬ್ಲಾಗರ್​ ಅವರ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.

29 ವರ್ಷದ ಬ್ಲಾಗರ್ ಅವರನ್ನು ಗ್ಯಾನ್ ಸೌಜಿಯೋಂಗ್ ಎಂದು ಗುರುತಿಸಲಾಗಿದೆ. ನೇಪಾಳದ ಇಂದ್ರ ಚೌಕ್‌ನ ಬೀದಿಗಳಲ್ಲಿ ತಮ್ಮ ಯೂಟ್ಯೂಬ್​ಗೆ ಸಂಬಂಧಿಸಿದಂತೆ ನೇರ ಪ್ರಸಾರ ಮಾಡುತ್ತಿದ್ದರು. ಈ ಸಮಯದಲ್ಲಿ ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಾ ನಗುತ್ತಿದ್ದರು.

ಇದ್ದಕ್ಕಿದ್ದಂತೆಯೇ ಕಿರುಚಾಟ ಕೇಳಿಬಂದಿದೆ. ನಂತರ ನೋಡನೋಡುತ್ತಿದ್ದಂತೆಯೇ ಕೊಲೆಯಾಗಿದೆ. ಫುಡ್​ ಬ್ಲಾಗ್​ಗೆ ಸಂಬಂಧಿಸಿದಂತೆ ವಿಡಿಯೋ ಮಾಡುತ್ತಿದ್ದ ಕ್ಯಾಮೆರಾಮನ್​ನ ಕ್ಯಾಮೆರಾದಲ್ಲಿ ಇವೆಲ್ಲಾ ಸೆರೆಯಾಗಿದೆ. ಫುಡ್​ ಬ್ಲಾಗರ್​ ಪ್ರತಿಸ್ಪರ್ಧಿಗಳು ಹೀಗೆ ಮಾಡಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...