alex Certify ಪದೇ ಪದೇ ಬಾಯಿ-ಗಂಟಲು ಒಣಗುತ್ತಿದ್ದರೆ ಲಘುವಾಗಿ ತೆಗೆದುಕೊಳ್ಳಬೇಡಿ, ಇದು ಅಪಾಯಕಾರಿ ಕಾಯಿಲೆಯ ಲಕ್ಷಣ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪದೇ ಪದೇ ಬಾಯಿ-ಗಂಟಲು ಒಣಗುತ್ತಿದ್ದರೆ ಲಘುವಾಗಿ ತೆಗೆದುಕೊಳ್ಳಬೇಡಿ, ಇದು ಅಪಾಯಕಾರಿ ಕಾಯಿಲೆಯ ಲಕ್ಷಣ !

ಬಿರು ಬೇಸಿಗೆಯಿಂದ ಜನರು ತತ್ತರಿಸಿದ್ದಾರೆ. ಸೆಖೆಯಲ್ಲಿ ಬಾಯಾರಿಕೆ ಸಹಜ. ಪದೇ ಪದೇ ನೀರು ಕುಡಿದರೂ ಬಾಯಿ ಒಣಗುತ್ತದೆ. ಆದರೆ ಈ ರೀತಿ ಬಾಯಿ-ಗಂಟಲು ಒಣಗುವಿಕೆ ಸಹಜವಲ್ಲ. ಏಕೆಂದರೆ ಇದು ಅನೇಕ ಕಾಯಿಲೆಗಳಿಂದ ಕೂಡ ಸಂಭವಿಸಬಹುದು. ಕಡಿಮೆ ನೀರು ಕುಡಿಯುವುದರಿಂದ ಬಾಯಿಯಲ್ಲಿ ಇರುವ ಲಾಲಾರಸ ಗ್ರಂಥಿಯು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ಅದು ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದನ್ನು ಜೆರೊಸ್ಟೊಮಿಯಾ ಎಂದೂ ಕರೆಯುತ್ತಾರೆ.

ಇದೊಂದು ಗ್ರಂಥಿ, ಬಾಯಿಯಲ್ಲಿ ಲಾಲಾರಸವನ್ನು ಉತ್ಪಾದಿಸಲು ಮತ್ತು ಬಾಯಿಯನ್ನು ತೇವವಾಗಿಡಲು ಕೆಲಸ ಮಾಡುತ್ತದೆ. ಬಾಯಿ ಒಣಗುವಿಕೆ ವಯಸ್ಸಾದಂತೆ ಹೆಚ್ಚಾಗಿ ಕಂಡುಬರುತ್ತದೆ. ಈ ಸಮಸ್ಯೆಯು ಕೆಲವು ಔಷಧಿಗಳ ಅಡ್ಡ ಪರಿಣಾಮಗಳಿಂದಲೂ ಅಥವಾ ಕ್ಯಾನ್ಸರ್ ವಿಕಿರಣ ಚಿಕಿತ್ಸೆಯಿಂದಲೂ ಉಂಟಾಗಬಹುದು.

ಗಂಟಲಿನಲ್ಲಿ ನೋವು, ಬಾಯಿಯೊಳಗೆ ಶುಷ್ಕತೆ, ಕೆಟ್ಟ ವಾಸನೆ, ಅಗಿಯಲು ಅಥವಾ ನುಂಗಲು ತೊಂದರೆ, ಲಿಪ್‌ಸ್ಟಿಕ್‌ ಹಲ್ಲುಗಳಿಗೆ ಅಂಟಿಕೊಳ್ಳುವುದು ಇವೆಲ್ಲವೂ ಈ ಕಾಯಿಲೆಯ ಲಕ್ಷಣಗಳು. ಇದಕ್ಕೆ ಕಾರಣಗಳು ಸಹ ಸಾಕಷ್ಟಿವೆ.

ಈ ಸಮಸ್ಯೆಯು ಅನೇಕ ವೃದ್ಧರಲ್ಲಿ ಸಾಮಾನ್ಯವಾಗಿದೆ. ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಮತ್ತು ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಇದು ಸಂಭವಿಸಬಹುದು. ಪೌಷ್ಟಿಕಾಂಶದ ಕೊರತೆ ಮತ್ತು ಸಾಕಷ್ಟು ನೀರು ಕುಡಿಯದಿರುವುದು ಕೂಡ ಬಾಯಿ ಒಣಗಲು ಕಾರಣವಾಗಬಹುದು.

ಕೆಲವೊಮ್ಮೆ ಇದು ತಲೆ ಅಥವಾ ಕುತ್ತಿಗೆಯಲ್ಲಿ ಯಾವುದೇ ಗಾಯ ಅಥವಾ ಶಸ್ತ್ರಚಿಕಿತ್ಸೆಯಿಂದಾಗಿ ಸಂಭವಿಸಬಹುದು. ಏಕೆಂದರೆ ಶಸ್ತ್ರಚಿಕಿತ್ಸೆ ಅಥವಾ ಗಾಯದಿಂದಾಗಿ ನರವು ಹಾನಿಗೊಳಗಾಗುತ್ತದೆ ಮತ್ತು ಲಾಲಾರಸ ಗ್ರಂಥಿಯು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ.

ಡಯಾಬಿಟೀಸ್ ರೋಗಿಗಳಿಗೆ ಬಾಯಿ ಒಣಗುವ ಸಮಸ್ಯೆಯೂ ಇರುತ್ತದೆ. ಹಾಗಾಗಿ ಈ ಸಮಸ್ಯೆ ಕಂಡುಬಂದಲ್ಲಿ ಸಕ್ಕರೆ ಪರೀಕ್ಷೆಯನ್ನು ಮಾಡಬೇಕು. ಡ್ರೈ ಮೌತ್‌ ಕೂಡ ಮಾನಸಿಕ ಆರೋಗ್ಯ ಕಾಯಿಲೆ ಆಲ್ಝೈಮರ್‌ನ ಲಕ್ಷಣವಾಗಿರಬಹುದು.

ಪಾರ್ಶ್ವವಾಯು, ಮೌಖಿಕ ಯೀಸ್ಟ್ ಸೋಂಕು ಅಥವಾ ಸ್ವಯಂ ನಿರೋಧಕ ಕಾಯಿಲೆಗಳಲ್ಲೂ ಡ್ರೈ ಮೌತ್‌ ತೊಂದರೆ ಕಂಡುಬರುತ್ತದೆ.ಅಷ್ಟೇ ಅಲ್ಲ ಇದು ಎಚ್‌ಐವಿ ಏಡ್ಸ್‌ನ ಲಕ್ಷಣವಾಗಿದೆ. ಎಚ್‌ಐವಿ ಪೀಡಿತರಲ್ಲಿ ಪದೇ ಪದೇ ಬಾಯಿ ಒಣಗುತ್ತದೆ.

ಧೂಮಪಾನ ಅಥವಾ ಹೆಚ್ಚು ಮದ್ಯಪಾನ ಮಾಡುವುದು ಕೂಡ ಬಾಯಿ ಒಣಗುವಿಕೆಗೆ ಕಾರಣವಾಗುತ್ತದೆ. ಬಾಯಿ ತೆರೆದು ಮಲಗುವ ಅಭ್ಯಾಸವಿದ್ದರೆ ಡ್ರೈ ಮೌತ್‌ ಉಂಟಾಗಬಹುದು. ಈ ಸಮಸ್ಯೆ ತೀವ್ರವಾಗಿದ್ದರೆ ವೈದ್ಯರನ್ನು ಸಂಪರ್ಕಿಸಿ. ಅವರ ಸಲಹೆಯನ್ನು ಸರಿಯಾಗಿ ಅನುಸರಿಸಿ ಮತ್ತು ಜೀವನಶೈಲಿ-ಆಹಾರದಲ್ಲಿ ಬದಲಾವಣೆಗಳನ್ನು ಮಾಡಿ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...