alex Certify ಈ ಕಾರಣಕ್ಕೆ ಮೀನಿನ ಹೆಸರನ್ನ ಇಟ್ಟುಕೊಳ್ತಿದ್ದಾರೆ ಜನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಮೀನಿನ ಹೆಸರನ್ನ ಇಟ್ಟುಕೊಳ್ತಿದ್ದಾರೆ ಜನ…!

ಸುಶಿ ಅನ್ನೋದು ಜಪಾನ್​ ದೇಶದ ಸಾಂಪ್ರದಾಯಿಕ ಖಾದ್ಯಗಳಲ್ಲಿ ಒಂದು. ಅಕ್ಕಿ, ಸಕ್ಕರೆ, ಉಪ್ಪು ಹಾಗೂ ಇನ್ನಿತರ ಆಹಾರ ಪದಾರ್ಥಗಳನ್ನ ಬಳಸಿ ಈ ಖಾದ್ಯವನ್ನ ತಯಾರು ಮಾಡಲಾಗುತ್ತೆ. ಈ ಖಾದ್ಯಗಳ ಬಗ್ಗೆ ಇಲ್ಲಿ ಹೇಳೋಕೂ ಪ್ರಮುಖ ಕಾರಣವಿದೆ.

ಥೈವಾನ್​ನಲ್ಲಿ ಸುಶಿ ಖಾದ್ಯ ಉಚಿತವಾಗಿ ಸಿಗುತ್ತೆ ಎಂಬ ಒಂದೇ ಕಾರಣಕ್ಕೆ ತಮ್ಮ ಹೆಸರಿನ ಜೊತೆ ಮೀನಿನ ಹೆಸರನ್ನ ಸೇರಿಸಿಕೊಳ್ಳೋಕೆ ಸರ್ಕಾರಿ ಕಚೇರಿಗೆ ಧಾವಿಸುತ್ತಿದ್ದಾರೆ.

ತಮ್ಮ ಹೆಸರುಗಳನ್ನ ತಾತ್ಕಾಲಿಕವಾಗಿ ಬದಲಾವಣೆ ಮಾಡಿಕೊಳ್ಳಲು ಮುಂದಾಗಿರುವ ಥೈವಾನ್​ನ ಜನತೆ ಗುರುತಿನ ಚೀಟಿಗಳಲ್ಲಿ ಹೆಸರಿನ ಜೊತೆ ಸಾಲ್ಮನ್​ ಎಂಬ ಪದವನ್ನ ಸೇರಿಸಿಕೊಳ್ಳೋಕೆ ನೋಂದಣಿ ಕಚೇರಿಗೆ ಬರ್ತಿದ್ದಾರೆ. ಇವರೆಲ್ಲ ರೆಸ್ಟಾರೆಂಟ್​ನಲ್ಲಿ ತಮಗೆ ಉಚಿತ ಸುಶಿ ಸಿಗಬಹುದು ಎಂಬ ನಂಬಿಕೆಯಲ್ಲಿದ್ದಾರೆ.

ಸುಶಿ ರೆಸ್ಟಾರೆಂಟ್​ ಒಂದು ಯಾವ ವ್ಯಕ್ತಿ ಮೀನಿನ ಹೆಸರನ್ನ ಹೊಂದಿರುತ್ತಾರೆ ಅಂತವರಿಗೆ ಉಚಿತ ಖಾದ್ಯ ನೀಡೋದಾಗಿ ಹೇಳಿದೆ. ಮೀನಿನ ಹೆಸರನ್ನು ಹೊಂದಿರುವ ವ್ಯಕ್ತಿಯು ತನ್ನ ಐವರು ಸ್ನೇಹಿತರೊಂದಿಗೆ ಈ ಉಚಿತ ಆಫರ್​ನ್ನು ಬಳಸಿಕೊಳ್ಳಬಹುದು ಎಂದು ಹೇಳಿದೆ.

ವಿಶ್ವದ ಅತಿ ‘ಡೇಂಜರ್​ ರೋಡ್’​ ಪಟ್ಟಿಯಲ್ಲಿ ಇಷ್ಟನೇ ಸ್ಥಾನದಲ್ಲಿದೆ ಭಾರತ..!

ಈ ಆಫರ್​ನ್ನು ಪಡೆಯಬೇಕು ಅಂತಾ ಈವರೆಗೆ 150ಕ್ಕೂ ಹೆಚ್ಚು ಮಂದಿ ತಮ್ಮ ಹೆಸರಿನ ಜೊತೆ ಮೀನಿನ ಹೆಸರನ್ನ ಸೇರಿಸಿಕೊಳ್ಳೋಕೆ ಸರ್ಕಾರಿ ಕಚೇರಿಗೆ ಧಾವಿಸುತ್ತಿದ್ದಾರೆ. ಥೈವಾನ್​​ ಪ್ರಜೆಗೆ ಆತನ ಜೀವಿತಾವಧಿಯಲ್ಲಿ ಮೂರು ಭಾರಿ ಅಧಿಕೃತವಾಗಿ ಹೆಸರನ್ನ ಬದಲಾವಣೆ ಮಾಡಿಕೊಳ್ಳಲು ಅವಕಾಶ ಇದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...