alex Certify BIG NEWS: ಹಿಂದೂ ಸಂಪ್ರದಾಯದಂತೆ ವಿವಾಹ ನಡೆಯದಿದ್ದರೆ ಮಾನ್ಯವಾಗುವುದಿಲ್ಲ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹಿಂದೂ ಸಂಪ್ರದಾಯದಂತೆ ವಿವಾಹ ನಡೆಯದಿದ್ದರೆ ಮಾನ್ಯವಾಗುವುದಿಲ್ಲ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಹಿಂದೂ ವಿವಾಹ ಕಾಯ್ದೆಯಡಿ ಮದುವೆ ಮಾನ್ಯವಾಗಬೇಕಾದರೆ ಅಥವಾ ವಿಚ್ಛೇದನವಾಗಬೇಕಾದರೆ ಹಿಂದೂ ಸಂಪ್ರದಾಯಗಳು, ಸೂಕ್ತ ವಿಧಿವಿಧಾನಗಳಂತೆ ಮದುವೆ ನಡೆದಿರಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ತೀರ್ಪಿನಲ್ಲಿ ಹಿಂದೂ ವಿವಾಹ ಕಾಯಿದೆ 1955 ರ ಅಡಿಯಲ್ಲಿ ಹಿಂದೂ ವಿವಾಹಗಳ ಕಾನೂನು ಅವಶ್ಯಕತೆಗಳು ಮತ್ತು ಪಾವಿತ್ರ್ಯತೆಯನ್ನು ಸ್ಪಷ್ಟಪಡಿಸಿದ ನ್ಯಾಯಾಲಯ, ಹಿಂದೂ ವಿವಾಹವು ಮಾನ್ಯವಾಗಬೇಕಾದರೆ ಅದನ್ನು ಸೂಕ್ತವಾದ ವಿಧಿವಿಧಾನ, ಕ್ರಮಗಳೊಂದಿಗೆ ಮದುವೆ ಸಮಾರಂಭವನ್ನು ನಡೆಸಬೇಕು ಎಂದು ಒತ್ತಿಹೇಳಿತು.

ಮದುವೆ ಸಮಾರಂಭದ ವೇಳೆ ಸಪ್ತಪದಿ, ಮಾಂಗಲ್ಯ ಧಾರಣೆ ಸೇರಿದಂತೆ ಹಿಂದೂ ಸಂಪ್ರದಾಯಗಳಲ್ಲಿರುವ ವಿಧಿವಿಧಾನಗಳನ್ನು ಒಳಗೊಂಡಿದ್ದರೆ ಅವುಗಳನ್ನು ವಿವಾಹ ನೋಂದಣಿ ಮತ್ತು ವಿವಾದಗಳ ಸಂದರ್ಭಗಳಲ್ಲಿ ಸಾಕ್ಷಿ/ ಪುರಾವೆಗಳಾಗಿ ಪರಿಗಣಿಸಲಾಗುತ್ತದೆ ಎಂದಿದೆ.

ನ್ಯಾಯಮೂರ್ತಿ ಬಿ.ವಿ. ನಾಗರತ್ನ ನೇತೃತ್ವದ ಪೀಠವು ಹಿಂದೂ ವಿವಾಹವು ಸಂಸ್ಕಾರವಾಗಿದೆ. ಅದೊಂದು ಹಾಡು ಕುಣಿತ, ಭೂರಿ ಭೋಜನ ವ್ಯವಸ್ಥೆಯ, ವರದಕ್ಷಿಣೆ ಮತ್ತು ಉಡುಗೊರೆಗಳಿಗೆ ಬೇಡಿಕೆಯಿಡುವ ಅಥವಾ ವಿನಿಮಯ ಮಾಡಿಕೊಳ್ಳುವ ಕಾರ್ಯಕ್ರಮವಲ್ಲ ಎಂದಿದೆ.

“ಹಿಂದೂ ವಿವಾಹವು ಉತ್ತಮ ಸಂಸ್ಕಾರವಾಗಿದ್ದು, ಭಾರತೀಯ ಸಮಾಜದಲ್ಲಿ ಅದಕ್ಕೆ ಹೆಚ್ಚಿನ ಸ್ಥಾನಮಾನವನ್ನು ನೀಡಬೇಕಾಗಿದೆ. ಆದ್ದರಿಂದ ಇಂದಿನ ಕಾಲದ ಯುವಕ ಮತ್ತು ಯುವತಿಯರು ವೈವಾಹಿಕ ಜೀವನ ಪ್ರವೇಶಿಸುವ ಮೊದಲು ಅದರ ಬಗ್ಗೆ ಆಳವಾಗಿ ಯೋಚಿಸಬೇಕೆಂದು ಪೀಠ ಹೇಳಿದೆ.

ಮದುವೆಯು ವಾಣಿಜ್ಯ ವಹಿವಾಟು ನಡೆಸುವ ವ್ಯಾಪಾರದಂತಲ್ಲ. ಅದು ಪುರುಷ ಮತ್ತು ಮಹಿಳೆಯ ನಡುವಿನ ಸಂಬಂಧವನ್ನು ಸ್ಥಾಪಿಸಲು ಆಚರಿಸಲಾಗುವ ಗಂಭೀರವಾದ ಉತ್ತಮ ವ್ಯವಸ್ಥೆಯಾಗಿದೆ. ಭವಿಷ್ಯದಲ್ಲಿ ವಿಕಸನಗೊಳ್ಳುವ ಕುಟುಂಬಕ್ಕೆ ಪತಿ ಮತ್ತು ಹೆಂಡತಿಯ ಸ್ಥಾನಮಾನವನ್ನು ನೀಡುತ್ತದೆ ಎಂದು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠವು ಹೇಳಿದೆ.

ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 8 ರ ಅಡಿಯಲ್ಲಿ ಹಿಂದೂ ವಿವಾಹದ ನೋಂದಣಿಯು ಮದುವೆಯ ಪುರಾವೆಯನ್ನು ಸುಗಮಗೊಳಿಸುತ್ತದೆ, ಆದರೆ ಕಾಯಿದೆಯ ಸೆಕ್ಷನ್ 7 ರ ಪ್ರಕಾರ ವಿವಾಹ ಹಿಂದೂ ಸಂಪ್ರದಾಯಗಳಂತೆ ನಡೆಯದಿದ್ದರೆ ಅದಕ್ಕೆ ಕಾನೂನು ಸಮ್ಮತಿ ಸಿಗುವುದಿಲ್ಲ ಎಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...