alex Certify ಕಾರಿನ ಇಂಜಿನ್‌ ನಲ್ಲಿ ಸಿಲುಕಿ ಪರದಾಡುತ್ತಿದ್ದ ಬೆಕ್ಕಿನ ಮರಿಯ ರಕ್ಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರಿನ ಇಂಜಿನ್‌ ನಲ್ಲಿ ಸಿಲುಕಿ ಪರದಾಡುತ್ತಿದ್ದ ಬೆಕ್ಕಿನ ಮರಿಯ ರಕ್ಷಣೆ

ಈ ಬೆಕ್ಕಿನ ಮರಿಗಳೇ ಹಾಗೆ. ಎಲ್ಲೆಂದರಲ್ಲಿ ಸಿಕ್ಕ ಸಿಕ್ಕ ಕಡೆಯೆಲ್ಲಾ ಹೋಗಿ ಮಲಗಿಬಿಡುತ್ತವೆ. ಕಾರಿನ ಇಂಜಿನ್‌ ಒಂದರಲ್ಲಿ ಸಿಲುಕಿದ್ದ ಬೆಕ್ಕಿನ ಮರಿಯೊಂದನ್ನು ಮಹಿಳೆಯೊಬ್ಬರು ರಕ್ಷಿಸಿದ್ದಾರೆ.

ಕಾರಿನ ಇಂಜಿನ್‌ನಿಂದ ಹೊರಗೆ ಬರಲು ಪರದಾಡುತ್ತಿದ್ದ ಬೆಕ್ಕಿನ ಮರಿ ಸದ್ದು ಮಾಡುತ್ತಿದ್ದದ್ದನ್ನು ಕೇಳಿಸಿಕೊಂಡ ಮಹಿಳೆ, ಇಡಿಯ ಪ್ರಹಸನವನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಆಕೆಯೊಂದಿಗೆ ಇನ್ನಷ್ಟು ಜನ ಸೇರಿಕೊಂಡು ಬೆಕ್ಕಿನ ಮರಿಯನ್ನು ಅಲ್ಲಿಂದ ಹೊರ ತರಲು ಪ್ರಯತ್ನಿಸಿದ್ದಾರೆ.

ಬಹಳ ಪ್ರಯಾಸದ ಬಳಿಕ ಆ ತುಂಟ ಬೆಕ್ಕಿನ ಮರಿಯನ್ನು ರಕ್ಷಿಸಲಾಗಿದೆ. ಬಳಿಕ ಬೆಕ್ಕನ್ನು ಇದೇ ಮಹಿಳೆ ಸಾಕಿಕೊಳ್ಳಲು ನಿರ್ಧರಿಸಿ, ಅದಕ್ಕೆ ’ಮುಸ್ತಾಂಗ್’ ಎಂದು ಹೆಸರಿಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...