alex Certify ಇದು ವಿಚಿತ್ರ ಮದುವೆ: ವಿವಾಹಕ್ಕೂ ಮುನ್ನವೇ ನಡೆಯುತ್ತೆ ವಧುವಿನ ಅಪಹರಣ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದು ವಿಚಿತ್ರ ಮದುವೆ: ವಿವಾಹಕ್ಕೂ ಮುನ್ನವೇ ನಡೆಯುತ್ತೆ ವಧುವಿನ ಅಪಹರಣ….!

Bride's Kidnapping To Spending Night With A Guest, Strange Wedding Rituals Of Himba Tribe

ನಮೀಬಿಯಾದ ಕೊನೆಯ ಅರೆ ಅಲೆಮಾರಿ ಬುಡಕಟ್ಟು ಎಂದು ಪರಿಗಣಿಸಿರುವ ‘ಹಿಂಬಾ’ ದಲ್ಲಿ ವಿಚಿತ್ರ ಮದುವೆ ಪದ್ಧತಿಗಳಿವೆ. ಸುಮಾರು 50,000 ಜನಸಂಖ್ಯೆಯನ್ನು ಹೊಂದಿರುವ ಸ್ಥಳೀಯ ಜನರು ಸ್ವಂತ ಮನೆಗಳಿದ್ದರೂ ಮಳೆ ಅಥವಾ ನೀರಿನ ಲಭ್ಯತೆಯ ಕೊರತೆಯಿಂದಾಗಿ ಸ್ಥಳಾಂತರಗೊಳ್ಳಬೇಕಾಗಿರುವುದರಿಂದ ಅವರನ್ನು ಅರೆ ಅಲೆಮಾರಿಗಳೆಂದು ಕರೆಯಲಾಗುತ್ತದೆ.

ಈ ಬುಡಕಟ್ಟು ತನ್ನ ವಿಚಿತ್ರ ವಿವಾಹ ಪದ್ಧತಿಗಳಿಂದಾಗಿ ಸಾಮಾನ್ಯವಾಗಿ ಗಮನ ಸೆಳೆಯುತ್ತದೆ. ಹಿಂಬಾ ಬುಡಕಟ್ಟಿನಲ್ಲಿ, ಮದುವೆಗೆ ಮೊದಲು ವಧುವನ್ನು ಅಪಹರಿಸಲಾಗುತ್ತದೆ. ಆಕೆಯನ್ನು 100 ದಿನಗಳ ಕಾಲ ಹೆಚ್ಚಿನ ಭದ್ರತೆಯಲ್ಲಿ ಕೋಣೆಯಲ್ಲಿ ಇರಿಸಲಾಗುತ್ತೆ. ಆ ಸಮಯದಲ್ಲಿ ಕೆಂಪು ಮಣ್ಣನ್ನು ಅವಳ ದೇಹಕ್ಕೆ ಹಚ್ಚಲಾಗುತ್ತದೆ. ಅಂತಹದ್ದೇ ವಿಡಿಯೋ ಇದೀಗ ವೈರಲ್ ಆಗಿದೆ.

ಹಿಂಬಾ ಬುಡಕಟ್ಟಿನ ವಧುವಿನ ಸಂಪ್ರದಾಯಗಳು ವಧುವಿನ ಅಪಹರಣ ಮತ್ತು ಅವಳಿಗೆ ಕೆಂಪು ಮಣ್ಣನ್ನು ಹಚ್ಚುವುದನ್ನು ಒಳಗೊಂಡಿರುತ್ತದೆ. ಈ ಸಮಯದಲ್ಲಿ ವಧು ಹೊಸ ಬಟ್ಟೆ ಮತ್ತು ದುಬಾರಿ ಆಭರಣಗಳೊಂದಿಗೆ ಕಾಣಿಸಿಕೊಳ್ಳುತ್ತಾಳೆ. ಅವಳು ಧರಿಸುವ ಕೆಲವು ವಿಶೇಷ ಉಡುಪುಗಳಲ್ಲಿ ಒಕೋರಿ ಎಂದು ಕರೆಯಲ್ಪಡುವ ಚರ್ಮದ ಶಿರಸ್ತ್ರಾಣವಾಗಿದೆ. ಇದು ಸಾಮಾನ್ಯವಾಗಿ ವಧುವಿನ ತಾಯಿ ನೀಡುವ ಉಡುಗೊರೆಯಾಗಿದೆ.

ವೈರಲ್ ವೀಡಿಯೊದಲ್ಲಿ ಹಿಂಬಾ ಬುಡಕಟ್ಟಿನ ಹುಡುಗಿಯೊಬ್ಬಳು ತನ್ನ ದೇಹದಾದ್ಯಂತ ಕೆಂಪು ಮಣ್ಣನ್ನು ಹಚ್ಚಿಕೊಂಡು ಮುಚ್ಚಿದ ಶೆಡ್‌ನಲ್ಲಿ ಕುಳಿತಿದ್ದಾಳೆ. ಕಾಲ್ಬೆರಳಿನಿಂದ ಕೂದಲಿನವರೆಗೆ ಹುಡುಗಿಗೆ ಕೆಂಪು ಮಣ್ಣು ಹಚ್ಚಲಾಗಿದೆ. ಘಾನಾದ ಫ್ರಾಫಾ ಬುಡಕಟ್ಟು ಕೂಡ ಈ ಪದ್ಧತಿಯನ್ನು ಅನುಸರಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...