alex Certify ಕಾಫಿ ಚರಟದಿಂದ ಇದೆ ಇಷ್ಟೆಲ್ಲಾ ‘ಪ್ರಯೋಜನ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಫಿ ಚರಟದಿಂದ ಇದೆ ಇಷ್ಟೆಲ್ಲಾ ‘ಪ್ರಯೋಜನ’

ಬಿಸಿ ಬಿಸಿ ಕಾಫಿ ಸೋಸಿದ ಬಳಿಕ ಉಳಿಯುವ ಚರಟವನ್ನು ಬಹುತೇಕ ಜನರು ಕಸದ ಬುಟ್ಟಿಗೆ ಎಸೆದು ಬಿಡುತ್ತಾರೆ. ಆದರೆ ಇದನ್ನು ಸಂಗ್ರಹಿಸಿಟ್ಟರೆ ಅನೇಕ ಪ್ರಯೋಜನಗಳಿವೆ.

* ಫ್ರಿಡ್ಜ್ ವಾಸನೆ ಬರುತ್ತಿದ್ದರೆ ಅದರೊಳಗೆ ಒಂದು ಕಪ್ ಕಾಫಿ ಚರಟ ಇಡಿ. ಇದರಿಂದ ವಾಸನೆ ಹೋಗಿ ನೈಸರ್ಗಿಕ ಪರಿಮಳ ಹೊರಹೊಮ್ಮುತ್ತದೆ.

* ಕಾಫಿಯಲ್ಲಿರುವ ಆಮ್ಲೀಯತೆ ಚರ್ಮದ ಕೊಳೆ ತೆಗೆಯಲು ತುಂಬಾ ಸಹಕಾರಿಯಾಗಿದೆ. ಆದ್ದರಿಂದ ಕಾಫಿ ಚರಟಕ್ಕೆ ಸ್ವಲ್ಪ ನೀರು, ತೆಂಗಿನ ಎಣ್ಣೆ ಹಾಕಿ ಬಾಡಿ ಸ್ಕ್ರಬ್ ಮಾಡಿ ದೇಹವನ್ನು ಉಜ್ಜಿ ಸ್ನಾನ ಮಾಡಿದರೆ ಕೊಳೆಯೆಲ್ಲಾ ಹೋಗುತ್ತದೆ.

* ಕಾಫಿಯಲ್ಲಿರುವ ಕೆಫೇನ್ ಮತ್ತು ಡಿಟರ್ಪೆನ್ಸ್ ಕೆಲವು ಕೀಟಗಳಿಗೆ ವಿಷಕಾರಿಯಾಗಿದೆ. ಆದ್ದರಿಂದ ಮನೆಯ ಸುತ್ತಮುತ್ತ ಕಾಫಿ ಚರಟವನ್ನು ಸಿಂಪಡಿಸಿದರೆ ಸೊಳ್ಳೆ, ಜಿಗಣೆ ಮುಂತಾದ ಕೀಟಗಳನ್ನು ದೂರವಿಡಬಹುದು.

* ಸಸ್ಯಗಳಿಗೆ ಹಾಕುವ ಗೊಬ್ಬರಕ್ಕೆ ಕಾಫಿ ಚರಟ ಬೆರೆಸಿದರೆ ಸಸ್ಯಗಳಿಗೆ ಹೆಚ್ಚಿನ ಪೋಷಣೆ ಸಿಗುತ್ತದೆ.

* ಪಾತ್ರೆಗಳಲ್ಲಿ ಗಟ್ಟಿ ಕಲೆಗಳು ಅಂಟಿಕೊಂಡಿದ್ದರೆ, ಅದನ್ನು ಕಾಫಿ ಚರಟ ಬೆರೆಸಿದ ಸೋಪ್ ದ್ರಾವಣದಿಂದ ತಿಕ್ಕಿ ತೊಳೆದರೆ ಸ್ವಚ್ಛವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...