alex Certify ಪ್ಲೇ ಸ್ಟೇಷನ್‌-5 ಗಾಗಿ ಯುವತಿಯರಿಬ್ಬರ ಮಾರಾಮಾರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ಲೇ ಸ್ಟೇಷನ್‌-5 ಗಾಗಿ ಯುವತಿಯರಿಬ್ಬರ ಮಾರಾಮಾರಿ…!

ಸೋನಿಯ ಪ್ಲೇ ಸ್ಟೇಷನ್-5ಕ್ಕೆ ಅದ್ಯಾವ ಮಟ್ಟಿಗೆ ಡಿಮ್ಯಾಂಡ್ ಇದೆ ಅಂದ್ರೆ, ಜಗತ್ತಿನ ಅನೇಕ ಕಡೆ ಈ ಗೇಮ್ ಬಿಡುಗಡೆ ಆದ ಕೆಲವೇ ಕ್ಷಣಗಳಲ್ಲಿ ಸೋಲ್ಡ್ ಔಟ್ ಆಗಿಬಿಟ್ಟಿದೆ.

ನವೆಂಬರ್‌ 12ರಂದು ಬಿಡುಗಡೆಯಾದ ಈ ಗೇಮ್‌ ಎಕ್ಸ್‌ಬಾಕ್ಸ್‌ನ ಸೀರೀಸ್‌ ಎಕ್ಸ್ ಹಾಗೂ ಎಸ್‌ ಯುನಿಟ್‌ಗಳಿಗಿಂತ ಹೆಚ್ಚು ಸೇಲ್ ಆಗಿವೆ. ಉತ್ಸಾಹೀ ಗೇಮರ್‌ಗಳು ಈ ಗೇಮ್‌ ಖರೀದಿ ಮಾಡಲು ತಮ್ಮ ಕೈಯಲ್ಲಿ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ಕೆಲವರಂತೂ ವಿದೇಶಗಳಿಂದ ಈ ಗೇಮ್ ‌ಅನ್ನು ಆಮದು ಮಾಡಿಕೊಳ್ಳಲು ದುಪ್ಪಟ್ಟು ಹಣವನ್ನು ಪೀಕುತ್ತಿದ್ದಾರೆ.

ವಾಲ್ಮಾರ್ಟ್ ಸ್ಟೋರ್‌ ಒಂದರಲ್ಲಿ ಈ ಪ್ಲೇಸ್ಟೇಷನ್ ಖರೀದಿ ಮಾಡಲು ಯುವತಿಯರಿಬ್ಬರ ನಡುವೆ ಫೈಟ್ ನಡೆಯುತ್ತಿರುವ ದೃಶ್ಯಾವಳಿಯೊಂದನ್ನು ವಿಡಿಯೋ ರೆಕಾರ್ಡಿಂಗ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಡಿಸೆಂಬರ್‌ 13ರಂದು ರೆಕಾರ್ಡ್ ಮಾಡಲಾದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...