alex Certify ನಿರೀಕ್ಷೆಗಿಂತಲೂ ಮೊದಲೇ ರಸ್ತೆಗಿಳಿಯಲಿದೆ ಚೊಚ್ಚಲ ಸೋನಿ ಎಲೆಕ್ಟ್ರಿಕ್‌ ಕಾರ್‌.…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿರೀಕ್ಷೆಗಿಂತಲೂ ಮೊದಲೇ ರಸ್ತೆಗಿಳಿಯಲಿದೆ ಚೊಚ್ಚಲ ಸೋನಿ ಎಲೆಕ್ಟ್ರಿಕ್‌ ಕಾರ್‌.…!

ಮೊಟ್ಟ ಮೊದಲ ಸೋನಿ-ಹೋಂಡಾ ಎಲೆಕ್ಟ್ರಿಕ್‌ ವೆಹಿಕಲ್‌ ರಸ್ತೆಗಿಳಿಯಲು ಸಜ್ಜಾಗಿದೆ. ಇನ್ನೂ ಹೆಸರಿಡದ ಈ ಪ್ರೀಮಿಯಂ ಕಾರ್‌, ಅದ್ಭುತ ಫೀಚರ್‌ಗಳೊಂದಿಗೆ ಇತರ ಹೆಸರುವಾಸಿ ಬ್ರಾಂಡ್‌ಗಳಿಗೆ ಪೈಪೋಟಿ ನೀಡುವ ಭರವಸೆಯಲ್ಲಿದೆ. ಸದ್ಯ ಜಗತ್ತಿನಾದ್ಯಂತ ಎಲೆಕ್ಟ್ರಿಕ್‌ ವೆಹಿಕಲ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹಾಗಾಗಿ ಸೋನಿ ಗ್ರೂಪ್ ಕಾರ್ಪ್ ಮತ್ತು ಹೋಂಡಾ ಮೋಟಾರ್ ಜಂಟಿಯಾಗಿ ಈ ಪ್ರೀಮಿಯಂ ಎಲೆಕ್ಟಿಕ್‌ ಕಾರನ್ನು ಸಿದ್ಧಪಡಿಸಿವೆ.

2026 ರ ವೇಳೆಗೆ ಮೊದಲ ಹಂತದ ಎಲೆಕ್ಟ್ರಿಕ್ ವಾಹನಗಳನ್ನು ಕಂಪನಿ ಲಾಂಚ್‌ ಮಾಡಲಿದೆ. ಮಾಹಿತಿ ಪ್ರಕಾರ ಸೋನಿ ಹೋಂಡಾ ಮೊಬಿಲಿಟಿಯ EV ಗಳನ್ನು ಆನ್‌ಲೈನ್ ಮಾರಾಟ ಮಾದರಿಯ ಮೂಲಕ ಅಮೆರಿಕ ಮತ್ತು ಯುರೋಪ್‌ನಲ್ಲಿ ಸಂಭಾವ್ಯ ಗ್ರಾಹಕರಿಗೆ ನೀಡಲಾಗುತ್ತದೆ.

ಸೋನಿ ಮತ್ತು ಹೋಂಡಾ ಈ ವರ್ಷದ ಜೂನ್‌ನಲ್ಲಿ ಸೋನಿ ಹೋಂಡಾ ಮೊಬಿಲಿಟಿಯನ್ನು ರಚಿಸಲು ಜಂಟಿಯಾಗಿವೆ. ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ಜೊತೆಯಾಗಿ ಕೆಲಸ ಮಾಡುತ್ತಿವೆ. ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ದಶಕಗಳಿಂದ ಸೋನಿ ಪ್ರಬಲ ಶಕ್ತಿಯಾಗಿದ್ದರೂ, ಹೋಂಡಾ ಕಂಪನಿ ಕೂಡ ಚಲನಶೀಲತೆಯಲ್ಲಿ ಪರಿಣತಿಯನ್ನು ಹೊಂದಿದೆ. ಎರಡೂ ಕಂಪನಿಗಳು ಜೊತೆಯಾಗಿರುವುದರಿಂದ ಇವು ಹೊರತರಲಿರುವ ಎಲೆಕ್ಟ್ರಿಕ್‌ ವಾಹನಗಳು ಪ್ರೇಕ್ಷಕರ ನಿರೀಕ್ಷೆಗಳಿಗಿಂತಲೂ ಹೆಚ್ಚು ಉತ್ತಮವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಸೋನಿ ಹೋಂಡಾ ಮೊಬಿಲಿಟಿ ಪ್ರೀಮಿಯಂ EV ವಿಭಾಗದಲ್ಲಿ ವಾಹನಗಳನ್ನು ಹೊರತರಲಿದೆ. ಅಂದರೆ ಇವುಗಳು ಮಧ್ಯಮ ವರ್ಗ ಮತ್ತು ಬಡವರಿಗೆ ಕೈಗೆಟುಕುವಂತಿರುವುದಿಲ್ಲ. ಆದರೆ ಐಷಾರಾಮಿ ಬ್ರಾಂಡ್‌ಗಳಿಗೆ ಸರಿಸಾಠಿಯಾಗಿರಬಹುದು ಅನ್ನೋ ನಿರೀಕ್ಷೆಯಿದೆ. EV ಗಳ ಒಳಗೆ ಸಾಫ್ಟ್‌ವೇರ್ ವ್ಯವಸ್ಥೆಯನ್ನು ಒದಗಿಸುವ ಜವಾಬ್ಧಾರಿ ಸೋನಿ ಕಂಪನಿಯದ್ದು. ಇತರ ಕ್ಲೌಡ್-ಆಧಾರಿತ ಸೇವೆಗಳು ಮತ್ತು ಇನ್-ಕ್ಯಾಬಿನ್ ಮನರಂಜನಾ ಆಯ್ಕೆಗಳು ಕೂಡ ಅದೇ ಕಂಪನಿಗೆ ಸೇರಿದ್ದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...