alex Certify ಮಕ್ಕಳನ್ನು ಮಾನಸಿಕ ಅಸ್ವಸ್ಥತೆಗೆ ದೂಡುತ್ತಿದೆ ಈ ಚಟ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳನ್ನು ಮಾನಸಿಕ ಅಸ್ವಸ್ಥತೆಗೆ ದೂಡುತ್ತಿದೆ ಈ ಚಟ…!

ಇಂದಿನ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ವೀಡಿಯೋ ಗೇಮ್‌ಗಳು ಮಕ್ಕಳ ಜೀವನದ ಪ್ರಮುಖ ಭಾಗವಾಗಿದೆ. ಮನರಂಜನೆ, ಶಿಕ್ಷಣ ಮತ್ತು ಸಂಪರ್ಕದ ಸಾಧನವಾಗಿ ಅವುಗಳ ಬಳಕೆ ಹೆಚ್ಚುತ್ತಿದೆ.  ಆದರೆ ಈ ಡಿಜಿಟಲ್ ಗೀಳು ಸಹ ಕರಾಳ ಮುಖವನ್ನು ಹೊಂದಿದೆ. ಅತಿಯಾದ ಸ್ಕ್ರೀನ್‌ ಟೈಮ್‌ ಮಕ್ಕಳಲ್ಲಿ ಆತಂಕ, ಖಿನ್ನತೆ, ಏಕಾಗ್ರತೆಯ ಕೊರತೆ ಮತ್ತು ಆತ್ಮಹತ್ಯಾ ಪ್ರವೃತ್ತಿಗಳು ಸೇರಿದಂತೆ ಅನೇಕ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಕೆನಡಾದ ಮೆಕ್‌ಗಿಲ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಹೊಸ ಅಧ್ಯಯನವು ಈ ಕುರಿತಂತೆ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದೆ. ವೀಡಿಯೋ ಗೇಮ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಸಮಯ ಕಳೆಯುವ ಮಕ್ಕಳು ಬೆಳೆದಾಗ ಸೈಕೋಸಿಸ್‌ನ ಅಪಾಯ ಹೆಚ್ಚಾಗಬಹುದು ಎಂದು ಅಧ್ಯಯನವು ಕಂಡುಹಿಡಿದಿದೆ. ಇದು ಗಂಭೀರವಾದ ಮಾನಸಿಕ ಅಸ್ವಸ್ಥತೆಯಾಗಿದ್ದು, ಇದರಲ್ಲಿ ವ್ಯಕ್ತಿಯು ವಾಸ್ತವದೊಂದಿಗೆ ಸಂಪರ್ಕವನ್ನು ಕಳೆದುಕೊಳ್ಳುತ್ತಾನೆ ಮತ್ತು ಭ್ರಮೆಗಳಲ್ಲೇ ಬದುಕುತ್ತಾನೆ.

1997 ಮತ್ತು 1998ರಲ್ಲಿ ಜನಿಸಿದ 1,226 ಮಕ್ಕಳ ಮಾಧ್ಯಮ ಅಭ್ಯಾಸಗಳನ್ನು ಸಂಶೋಧಕರು ಟ್ರ್ಯಾಕ್ ಮಾಡಿದ್ದಾರೆ. ನಂತರ 23 ನೇ ವಯಸ್ಸಿನಲ್ಲಿ ಅವರ ಮಾನಸಿಕ ಆರೋಗ್ಯವನ್ನು ಮೌಲ್ಯಮಾಪನ ಮಾಡಿದರು. ಅವರ ಬಾಲ್ಯ, ಹದಿಹರೆಯ ಅಥವಾ ಸಾಮಾಜಿಕ ಆರ್ಥಿಕ ಹಿನ್ನೆಲೆಯಂತಹ ಇತರ ಅಂಶಗಳನ್ನು ಗಣನೆಗೆ ತೆಗೆದುಕೊಂಡಾಗಲೂ ಹದಿಹರೆಯದಲ್ಲಿ ಕಂಪ್ಯೂಟರ್‌ಗಳನ್ನು ಹೆಚ್ಚು ಬಳಸುವ ಜನರು ವಯಸ್ಕರಂತೆ ಮನೋವಿಕೃತ ರೋಗಲಕ್ಷಣಗಳನ್ನು ಅನುಭವಿಸುವ ಸಾಧ್ಯತೆಯಿದೆ ಎಂದು ಅಧ್ಯಯನವು ಕಂಡುಹಿಡಿದಿದೆ.

ಒಂಟಿತನ, ಒತ್ತಡ ಅಥವಾ ನಿದ್ರೆಯ ಸಮಸ್ಯೆ

ಅತಿಯಾದ ಸಾಮಾಜಿಕ ಮಾಧ್ಯಮ ಬಳಕೆಯು ಮಾನಸಿಕ ಆರೋಗ್ಯ ಸಮಸ್ಯೆಗಳಾದ ಒಂಟಿತನ, ಒತ್ತಡ ಅಥವಾ ನಿದ್ರೆಯ ಸಮಸ್ಯೆಗಳಂತಹ ಅಪಾಯಕಾರಿ ಅಂಶಗಳಿಗೆ ಕಾರಣವಾಗುತ್ತದೆ. ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ಮಕ್ಕಳು ಹೆಚ್ಹೆಚ್ಚು ವಿಡಿಯೋ ಗೇಮ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಿಗೆ ಆಕರ್ಷಿತರಾಗುವ ಸಾಧ್ಯತೆಯಿದೆ.

ಮೆದುಳಿನ ಬೆಳವಣಿಗೆಯ ಮೇಲೆ ಪರಿಣಾಮ!

ವೀಡಿಯೊ ಗೇಮ್‌ಗಳು ಅಥವಾ ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆಯು ಮೆದುಳಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ, ಇದು ಸೈಕೋಸಿಸ್ ಅಪಾಯವನ್ನು ಹೆಚ್ಚಿಸುತ್ತದೆ. ಪೋಷಕರು ತಮ್ಮ ಮಕ್ಕಳ ಮಾಧ್ಯಮ ಬಳಕೆಯ ಮೇಲೆ ನಿಗಾ ಇಡಬೇಕು ಮತ್ತು ಅವರು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಬೇಕು.

ಅಧ್ಯಯನದ ಫಲಿತಾಂಶಗಳು, ಪೋಷಕರು ಮತ್ತು ಆರೋಗ್ಯ-ಆರೈಕೆ ತಜ್ಞರನ್ನು ಅಲರ್ಟ್‌ ಮಾಡುವಂತಿವೆ. ಡಿಜಿಟಲ್ ಪ್ರಪಂಚದಲ್ಲಿ ಮಕ್ಕಳ ಸಮತೋಲಿತ ಜೀವನವನ್ನು ಉತ್ತೇಜಿಸುವುದು ಮತ್ತು ಸ್ಕ್ರೀನ್‌ ಟೈಂ ಮಿತಿಗೊಳಿಸುವುದು ಕೂಡ ಮುಖ್ಯವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...