alex Certify BIG NEWS: ಏಷ್ಯಾ-ಪೆಸಿಫಿಕ್‌ ನ ನಾ‌ಲ್ಕನೇ ಬಲಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದ ಭಾರತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಏಷ್ಯಾ-ಪೆಸಿಫಿಕ್‌ ನ ನಾ‌ಲ್ಕನೇ ಬಲಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದ ಭಾರತ

ಭಾರತವು ಏಷ್ಯಾ-ಪೆಸಿಫಿಕ್‌ ಪ್ರದೇಶದ ನಾಲ್ಕನೇ ಅತ್ಯಂತ ಬಲಶಾಲಿ ದೇಶ ಎಂಬುದು ಲೋವಿ ಸಂಸ್ಥೆಯ ಏಷ್ಯಾ ಪವರ್‌ ಇಂಡೆಕ್ಸ್ 2021ರ ಸಮೀಕ್ಷೆಯಲ್ಲಿ ನೀಡಲಾದ ರ‍್ಯಾಂಕಿಂಗ್‌ನಲ್ಲಿ ತಿಳಿದುಬಂದಿದೆ.

ವಾರ್ಷಿಕ ಏಷ್ಯಾ-ಪೆಸಿಫಿಕ್‌ ಪ್ರದೇಶದ ಪವರ್‌ ಇಂಡೆಕ್ಸ್‌ಗೆ ಲೋವಿ ಸಂಸ್ಥೆ 2018ರಲ್ಲಿ ಚಾಲನೆ ನೀಡಿದೆ. ಏಷ್ಯಾ ಪೆಸಿಫಿಕ್ ಪ್ರದೇಶದ ದೇಶಗಳ ಪೈಕಿ ಲೋವಿ ನೀಡಿರುವ ರ‍್ಯಾಂಕಿಂಗ್‌ನ ಅಗ್ರ 10 ಸ್ಥಾನಗಳಲ್ಲಿ ಅಮೆರಿಕ, ಚೀನಾ, ಜಪಾನ್, ಭಾರತ, ರಷ್ಯಾ, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ, ಸಿಂಗಪುರ, ಇಂಡೋನೇಷ್ಯಾ ಹಾಗೂ ಥಾಯ್ಲೆಂಡ್‌ಗಳಿವೆ ಎಂದು ಲೋವಿ ತಿಳಿಸಿದೆ.

ಆರ್ಥಿಕ ಸಾಮರ್ಥ್ಯ, ಮಿಲಿಟರಿ ಸಾಮರ್ಥ್ಯ, ಮೇಲೇಳಬಲ್ಲ ಕ್ಷಮತೆ ಹಾಗೂ ಸಾಂಸ್ಕೃತಿಕ ಪ್ರಭಾವಗಳ ವಿಷಯದಲ್ಲಿ ಭಾರತ ಈ ಪ್ರದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿರುವುದಾಗಿ ಈ ಸೂಚ್ಯಂಕ ತಿಳಿಸುತ್ತಿದೆ.

ಸಹೋದರನ ಮದುವೆ ಸಮಾರಂಭದಲ್ಲಿ ಮಿಕ್ಕ ಊಟವನ್ನು ಅಗತ್ಯವಿದ್ದ ಮಂದಿಗೆ ಹಂಚಿದ ಮಹಿಳೆ

ಈ ರ‍್ಯಾಂಕಿಂಗ್‌ ಗಳನ್ನು ಸಂಪನ್ಮೂಲಗಳು ಹಾಗೂ ರ‍್ಯಾಂಕ್ ಮೇಲೆ ಪ್ರಭಾವ ಬೀರಲು ಇರುವ ಶಕ್ತಿಯ ಆಧಾರದ ಮೇಲೆ ನೀಡಲಾಗಿದೆ. ಕಾಲಕಾಲಕ್ಕೆ ರಾಜಕೀಯ ಬಲದ ಸ್ಥಳಾಂತರದ ಅಂದಾಜನ್ನೂ ಸಹ ಈ ರ‍್ಯಾಂಕಿಂಗ್ ನೀಡುತ್ತದೆ.

ಏಷ್ಯಾದಲ್ಲಿ ಮಧ್ಯಮ ವರ್ಗದ ಬಲವಾಗಿ ರ‍್ಯಾಂಕ್ ಪಡೆದಿರುವ ಭಾರತ ಏಷ್ಯಾದ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿದ್ದು, ಕೊರೋನಾ ವೈರಸ್‌ನ ಹೊಡೆತದಿಂದಾಗಿ 2020ಕ್ಕೆ ಹೋಲಿಸಿದಲ್ಲಿ ರ‍್ಯಾಂಕಿಂಗ್‌ ಅಂಕಗಳಲ್ಲಿ ಎರಡು ಅಂಕಗಳನ್ನು ಕಳೆದುಕೊಂಡಿದೆ. 2021ರಲ್ಲಿ ರ‍್ಯಾಂಕಿಂಗ್ ಸೂಚ್ಯಂಕದಲ್ಲಿ ಹೀಗೆ ಅಂಕ ಕಳೆದುಕೊಂಡ ಏಷ್ಯಾದ 18 ದೇಶಗಳಲ್ಲಿ ಭಾರತವೂ ಒಂದಾಗಿದೆ.

ಮತ್ತೊಂದೆಡೆ, ರಕ್ಷಣಾ ಜಾಲದ ವಿಚಾರದಲ್ಲಿ ಭಾರತವು ಏಳನೇ ಸ್ಥಾನದಲ್ಲಿದ್ದು, ಪ್ರಾದೇಶಿಕ ಮಟ್ಟದಲ್ಲಿ ತನ್ನ ಭದ್ರತಾ ರಾಯಭಾರದಲ್ಲಿ ಪ್ರಗತಿ ಸಾಧಿಸುತ್ತಿದೆ — ಆಸ್ಟ್ರೇಲಿಯಾ, ಜಪಾನ್ ಮತ್ತು ಅಮೆರಿಕಗಳೊಂದಿಗೆ ಚತುಷ್ಕೋನ ಭದ್ರತಾ ಒಪ್ಪಂದ ಇದರಲ್ಲಿ ಮಹತ್ವದ ಹೆಜ್ಜೆ. ಇದೇ ವೇಳೆ, ಆರ್ಥಿಕ ಪಾಲುದಾರಿಕೆಯ ವಿಚಾರದಲ್ಲಿ ಭಾರತ ಎಂಟನೇ ಸ್ಥಾನಕ್ಕೆ ಕುಸಿದಿದೆ ಎಂದು ಲೋವಿ ಸಂಸ್ಥೆ ತಿಳಿಸಿದ್ದು, ಪ್ರಾದೇಶಿಕ ವಹಿವಾಟು ಹಾಗೂ ಸಮಗ್ರತೆಯ ಯತ್ನಗಳಲ್ಲಿ ದೆಹಲಿ ಹಿಂದೆ ಉಳಿದಿರುವುದೇ ಇದಕ್ಕೆ ಕಾರಣವೆಂದು ಹೇಳಿದೆ.

ಕೋವಿಡ್ ಪೂರ್ವದ ಕಾಲಕ್ಕಿಂತ ಈಗಿನ ದಿನಮಾನದಲ್ಲಿ, ಅಭಿವೃದ್ಧಿಶೀಲ ದೇಶಗಳಲ್ಲಿ ಆರ್ಥಿಕ ಚೇತರಿಕೆಯು ಅಭಿವೃದ್ಧಿ ಹೊಂದಿರುವ ದೇಶಗಳಿಗಿಂತಲೂ ಕಡಿಮೆ ಪ್ರಮಾಣದಲ್ಲಿ ಇದೆ ಎಂದು ಸಮೀಕ್ಷೆಯ ವರದಿ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...