alex Certify ಕೂದಲುದುರುವ ಸಮಸ್ಯೆ ನಿವಾರಿಸಲು ಪ್ರತಿದಿನ ಮಾಡಿ ಈ ʼಯೋಗʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೂದಲುದುರುವ ಸಮಸ್ಯೆ ನಿವಾರಿಸಲು ಪ್ರತಿದಿನ ಮಾಡಿ ಈ ʼಯೋಗʼ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಕೂದಲುದುರುವ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದಕ್ಕೆ ವಾತಾವರಣದ ಧೂಳು, ಮಾಲಿನ್ಯ, ಬಿಸಿಲು ಕಾರಣವಾಗಿರುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಪ್ರತಿದಿನ 15 ನಿಮಿಷಗಳ ಕಾಲ ಬಾಲಾಯಂ ಯೋಗ ಮಾಡಿ.

ಬಾಲಾಯಂ ಯೋಗ ಕೂದಲುದುರುವ ಸಮಸ್ಯೆಯನ್ನು ನಿವಾರಿಸುತ್ತದೆ. ಒಂದು ಸ್ಥಳದಲ್ಲಿ ಕುಳಿತುಕೊಂಡು ನಿಮ್ಮ ಎರಡೂ ಕೈಗಳನ್ನು ಹತ್ತಿರಕ್ಕೆ ತಂದು ಎರಡೂ ಕೈಗಳ ಉಗುರುಗಳನ್ನು ಒಟ್ಟಿಗೆ ಉಜ್ಜಿಕೊಳ್ಳಿ. ಇದನ್ನು 15 ನಿಮಿಷಗಳ ಕಾಲ ಮಾಡಿ. ನೀವು 3-4 ತಿಂಗಳುಗಳ ಕಾಲ ಪ್ರತಿದಿನ ನಿರಂತರವಾಗಿ ಮಾಡಿದರೆ ಇದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.

ಇದು ದೇಹದಲ್ಲಿನ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ. ಇದರಿಂದ ದೇಹದಲ್ಲಿ ಶಾಖದ ಅಂಶ ಉತ್ಪತ್ತಿಯಾಗುತ್ತದೆ. ಇದು ನೆತ್ತಿಯ ಕಂಪನವನ್ನು ಉಂಟುಮಾಡಿ ಕೂದಲುದುರುವುದನ್ನು ಕಡಿಮೆ ಮಾಡಿ ಹೊಸ ಕೂದಲು ಬೆಳೆಯಲು ಪ್ರಾರಂಭಿಸುತ್ತದೆ. ಆದರೆ ಗರ್ಭಿಣಿಯರು ಹಾಗೂ ಅಧಿಕ ಬಿಪಿ ಇರುವವರು ಇದನ್ನು ಮಾಡಬಾರದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...