alex Certify ಪ್ರಧಾನಿ ಮೋದಿಗೆ ನಾನು ಹೆದರಲ್ಲ: ರಾಹುಲ್​ ಗಾಂಧಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿ ಮೋದಿಗೆ ನಾನು ಹೆದರಲ್ಲ: ರಾಹುಲ್​ ಗಾಂಧಿ

ಮೋದಿಯ ಮತ ಯಂತ್ರ (ಇವಿಎಂ) ಹಾಗೂ ಮೋದಿ ಪರವಾಗಿ ಇರುವ ಕೆಲ ಮಾಧ್ಯಮಗಳಿಗೆ ನಾನು ಹೆದರುವುದಿಲ್ಲ ಅಂತಾ ಎಐಸಿಸಿ ಮಾಜಿ ಅಧ್ಯಕ್ಷ ಹಾಗೂ ಸಂಸದ ರಾಹುಲ್​ ಗಾಂಧಿ ಕಿಡಿಕಾರಿದ್ದಾರೆ.

ಸತ್ಯ ಎಂದಿದ್ದರೂ ಅದು ಸತ್ಯವೇ. ನ್ಯಾಯ ಯಾವತ್ತಿದ್ದರೂ ನ್ಯಾಯವೇ. ನಾನು ಮೋದಿಯ ಸಿದ್ಧಾಂತಗಳ ವಿರುದ್ಧ ಹೋರಾಡುತ್ತಿದ್ದೇನೆ. ಪ್ರಧಾನಿ ಮೋದಿ ಆಲೋಚನೆಗಳಿಗೆ ನಾನು ವಿರೋಧಿಯಾಗಿದ್ದೇನೆ. ಅಲ್ಲದೇ ಮುಂದಿನ ದಿನಗಳಲ್ಲಿ ಅವರ ಆಲೋಚನೆ ಹಾಗೂ ಸಿದ್ಧಾಂತಗಳನ್ನ ನಾನು ಸೋಲಿಸುತ್ತೇನೆ ಎಂದು ಬಿಹಾರದಲ್ಲಿ ಇಂದು (ಗುರುವಾರ) ನಡೆದ ಅರೇರಿಯಾ ಚುನಾವಣಾ ರ್ಯಾಲಿಯಲ್ಲಿ ರಾಹುಲ್​ ಗಾಂಧಿ ಗುಡುಗಿದ್ದಾರೆ.

2019ರಲ್ಲಿ ಇವಿಎಂಗಳಿಗೆ ಮೊರೆ ಹೋಗುವ ಮೂಲಕ ಚುನಾವಣಾ ಆಯೋಗ ಕೂಡ ಮೋದಿ ಮತ್ತವರ ಗ್ಯಾಂಗ್ ಎದುರು ಶರಣಾಗಿದೆ ಅಂತಾ ವ್ಯಂಗ್ಯವಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...