alex Certify ಜೀವನದಲ್ಲಿ ಸಂತೋಷ ಮತ್ತು ಆರೋಗ್ಯವಾಗಿರಲು ಈ 5 ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವನದಲ್ಲಿ ಸಂತೋಷ ಮತ್ತು ಆರೋಗ್ಯವಾಗಿರಲು ಈ 5 ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ

ಬಿಡುವಿಲ್ಲದ ಜೀವನಶೈಲಿಯಿಂದಾಗಿ ಇತ್ತೀಚಿನ ದಿನಗಳಲ್ಲಿ  ಪ್ರತಿಯೊಬ್ಬರೂ ಒತ್ತಡದಲ್ಲಿಯೇ ಇರುತ್ತಾರೆ. ಆಧುನಿಕತೆಯಿಂದಾಗಿ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ತುಂಬಾ ಕಷ್ಟ. ಜನರಿಗೆ ತಮ್ಮ ಬಗ್ಗೆ ಕಾಳಜಿ ವಹಿಸಲು ಸಮಯವಿಲ್ಲ. ಇಂತಹ ಸಂದರ್ಭದಲ್ಲಿಯೂ ಸಂತೋಷ ಮತ್ತು ಆರೋಗ್ಯಕರವಾಗಿ ಬದುಕಲು ಕೆಲವೊಂದು ಸರಳ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು.

ವ್ಯಾಯಾಮ

ದೈಹಿಕವಾಗಿ ಆರೋಗ್ಯವಾಗಿರಲು ಸ್ವಯಂ ಗಮನ ಬಹಳ ಅವಶ್ಯಕ. ಯಾವಾಗಲೂ ಆರೋಗ್ಯಕರ ವಸ್ತುಗಳನ್ನು ಸೇವಿಸಬೇಕು, ಜೊತೆಗೆ ಜೀವನಶೈಲಿಯ ಮೇಲೆ ಕಣ್ಣಿಡಬೇಕು. ಪ್ರತಿದಿನ ವ್ಯಾಯಾಮ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು. ಪ್ರತಿದಿನ ಯೋಗ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ ಮತ್ತು ಮನಸ್ಸು ಕೂಡ ಹೆಚ್ಚು ಶಾಂತವಾಗುತ್ತದೆ. ರನ್ನಿಂಗ್‌, ಸೈಕ್ಲಿಂಗ್, ಜಿಮ್ ಅಥವಾ ಸ್ವಿಮ್ಮಿಂಗ್‌ನಲ್ಲಿ ಕೂಡ ತೊಡಗಿಕೊಳ್ಳಬಹುದು.

ಆರೋಗ್ಯಕರ ಆಹಾರ

ಆರೋಗ್ಯಕರ ಪದಾರ್ಥಗಳ ಸೇವನೆಯಿಂದ ದೇಹ ಮತ್ತು ಮನಸ್ಸು ಎರಡೂ ಆರೋಗ್ಯಕರವಾಗಿರುತ್ತವೆ. ಒತ್ತಡ ಕೂಡ ನಿವಾರಣೆಯಾಗುತ್ತವೆ. ದೇಹಕ್ಕೆ ಉತ್ತಮ ಪೋಷಣೆಯನ್ನು ಒದಗಿಸುವ ಆಹಾರದ ಅಗತ್ಯವಿದೆ. ಪ್ರತಿದಿನ ಹಣ್ಣು, ತರಕಾರಿ, ಕಾಳುಗಳು ಮತ್ತು ಧಾನ್ಯಗಳನ್ನು ಸೇರಿಸಿಕೊಳ್ಳಬೇಕು. ದೇಹವನ್ನು ರೋಗಗಳಿಂದ ದೂರವಿಡಲು ಇದು ಸಹಾಯ ಮಾಡುತ್ತದೆ.

7-8 ಗಂಟೆಗಳ ನಿದ್ರೆ

ನಿದ್ರೆಯ ಕೊರತೆಯಿಂದ ಅನೇಕ ಜನರು ಮಾನಸಿಕ ಒತ್ತಡ ಮತ್ತು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಉತ್ತಮ ಆರೋಗ್ಯಕ್ಕಾಗಿ ಸಾಕಷ್ಟು ನಿದ್ರೆ ಮಾಡುವುದು ಬಹಳ ಮುಖ್ಯ. ಪ್ರತಿದಿನ 7-8 ಗಂಟೆಗಳ ಕಾಲ ನಿದ್ದೆ ಮಾಡಬೇಕು. ಇದು ಮನಸ್ಸು ಮತ್ತು ದೇಹ ಎರಡಕ್ಕೂ ಸಾಕಷ್ಟು ವಿಶ್ರಾಂತಿ ನೀಡುತ್ತದೆ. ನಿದ್ರೆಯ ಕೊರತೆಯು ಒತ್ತಡ ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತದೆ.

ನೀರು

ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು. ನೀರಿನ ಕೊರತೆಯಿಂದಾಗಿ ದೇಹವು ನಿರ್ಜಲೀಕರಣಗೊಳ್ಳುತ್ತದೆ, ಅನೇಕ ಕಾಯಿಲೆಗಳು ಕೂಡ ಬರುತ್ತವೆ. ದಿನಕ್ಕೆ ಕನಿಷ್ಠ 8-10 ಗ್ಲಾಸ್ ನೀರು ಕುಡಿಯಬೇಕು.ಇದು ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ.

ಸ್ನೇಹಿತರು ಮತ್ತು ಕುಟುಂಬ ಸಮಯ ಕಳೆಯಿರಿ

ಸಾಮಾನ್ಯವಾಗಿ ಏಕಾಂಗಿಯಾಗಿರುವವರಲ್ಲಿ ಒತ್ತಡ ಮತ್ತು ಖಿನ್ನತೆಯ ಸಮಸ್ಯೆ ಹೆಚ್ಚು. ಹಾಗಾಗಿ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸಮಯ ಕಳೆಯಿರಿ. ಇದರಿಂದ ಒತ್ತಡ ನಿವಾರಣೆಯಾಗಿ ಮನಸ್ಸು ಉಲ್ಲಸಿತವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...