alex Certify SHOCKING : ಮಗು ಗಂಡೋ ? ಹೆಣ್ಣೋ? ಎಂದು ತಿಳಿಯಲು ಗರ್ಭಿಣಿ ಹೆಂಡ್ತಿ ಹೊಟ್ಟೆ ಬಗೆದ ಪಾಪಿಗಂಡ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING : ಮಗು ಗಂಡೋ ? ಹೆಣ್ಣೋ? ಎಂದು ತಿಳಿಯಲು ಗರ್ಭಿಣಿ ಹೆಂಡ್ತಿ ಹೊಟ್ಟೆ ಬಗೆದ ಪಾಪಿಗಂಡ..!

ಪಾಪಿ ಗಂಡನೋರ್ವ ಮಗುವಿನ ಲಿಂಗವನ್ನು ಪರೀಕ್ಷಿಸಲು ಪತ್ನಿಯ ಹೊಟ್ಟೆಯನ್ನು ಕತ್ತರಿಸಿದ ಭೀಕರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

5 ಹೆಣ್ಣು ಮಕ್ಕಳ ತಂದೆಯಾದ ಪತಿ ಬದೌನ್ನ ಸಿವಿಲ್ ಲೈನ್ಸ್ ನಿವಾಸಿ ಪನ್ನಾ ಲಾಲ್ 2020 ರ ಸೆಪ್ಟೆಂಬರ್ನಲ್ಲಿ ತನ್ನ ಪತ್ನಿ ಅನಿತಾ ಮೇಲೆ ಹಲ್ಲೆ ನಡೆಸಿದ್ದರು. ಉತ್ತರ ಪ್ರದೇಶದ ಬದೌನ್ ನಲ್ಲಿ ಗರ್ಭಿಣಿ ಪತ್ನಿ ಗಂಡು ಅಥವಾ ಹೆಣ್ಣು ಮಗುವಿಗೆ ಜನ್ಮ ನೀಡಲಿದ್ದಾಳೆಯೇ ಎಂದು ಪರೀಕ್ಷಿಸಲು ಕುಡಗೋಲನ್ನು ಬಳಸಿ ಪತ್ನಿಯ ಹೊಟ್ಟೆ ಬಗೆದಿದ್ದನು. ಪಾಪಿ ಗಂಡನಿಗೆ ಕೋರ್ಟ್ ಈಗ ಜೀವಾವಧಿ ಶಿಕ್ಷೆ ವಿಧಿಸಿದೆ. ಬದೌನ್ನ ಸಿವಿಲ್ ಲೈನ್ಸ್ ನಿವಾಸಿ ಪನ್ನಾ ಲಾಲ್ 2020 ರ ಸೆಪ್ಟೆಂಬರ್ನಲ್ಲಿ ತನ್ನ ಪತ್ನಿ ಅನಿತಾ ಮೇಲೆ ಹಲ್ಲೆ ನಡೆಸಿದ್ದರು.

ನಿನ್ನ ಹೊಟ್ಟೆಯಲ್ಲಿರುವ ಮಗು ಗಂಡೋ ಅಥವಾ ಹೆಣ್ಣು ನೋಡೋಣ ಎಂದು ಗಂಡ ಗಲಾಟೆ ಮಾಡಿದ್ದಾನೆ. ಪತ್ನಿ ಎಷ್ಟೇ ಗೋಗರೆದ್ರೂ ಕೂಡ ಕಿಂಚಿತ್ತು ಕರುಣೆ ಇಲ್ಲದೇ ತನ್ನ ಕೈನಲ್ಲಿ ಇದ್ದ ಕುಡುಗೋಲನ್ನು ಪತ್ನಿ ಅನಿತಾ ಹೊಟ್ಟೆಗೆ ಬೀಸಿದ್ದಾನೆ. ಪರಿಣಾಮ ಧಾರಾಕಾರ ರಕ್ತ ಹರಿದಿದ್ದು, ಗರ್ಭಿಣಿಯ ಹೊಟ್ಟೆಯೊಳಗಿನಿಂದ ಕರುಳು ನೇತಾಡಿದೆ. ಇದನ್ನು ನೋಡಿದ ಅಕ್ಕಪಕ್ಕದ ಜನ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. . ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಕ್ಕಿದರೂ ಕೂಡ ಅತಿಯಾದ ರಕ್ತಸ್ರಾವದಿಂದಾಗಿ ಮಗು ಉಳಿಯಲಿಲ್ಲ. ತಾಯಿಯ ಜೀವ ಉಳಿಯಿತು. ಸತ್ತಿದ್ದ ಮಗು ಗಂಡು ಮಗುವಾಗಿತ್ತು. ಇದನ್ನು ನೋಡಿದ ತಾಯಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಗಂಡ ಜೈಲು ಸೇರಿದ್ದಾನೆ.

ಈ ದಂಪತಿಗೆ ಮದುವೆಯಾಗಿ 22 ವರ್ಷಗಳಾಗಿದ್ದು, ಐವರು ಹೆಣ್ಣು ಮಕ್ಕಳಿದ್ದರು. ಆದರೆ ಪನ್ನಾ ಲಾಲ್ ಅವಳು ಗಂಡು ಮಗುವಿಗೆ ಜನ್ಮ ನೀಡಬೇಕೆಂದು ಬಯಸಿದ್ದರಿಂದ ಅವರು ದಿನನಿತ್ಯ ಜಗಳವಾಡುತ್ತಿದ್ದರು. ದಂಪತಿಗಳ ವಿವಾದದ ಬಗ್ಗೆ ಅನಿತಾ ಅವರ ಕುಟುಂಬಕ್ಕೆ ತಿಳಿದಿತ್ತು ಮತ್ತು ಜಗಳವನ್ನು ನಿಲ್ಲಿಸುವಂತೆ ಪನ್ನಾ ಲಾಲ್ ಅವರನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೆ ಅವರು ಅನಿತಾಗೆ ವಿಚ್ಛೇದನ ನೀಡಿ ಮಗನಿಗೆ ತಂದೆಯಾಗಲು ಇನ್ನೊಬ್ಬ ಮಹಿಳೆಯನ್ನು ಮದುವೆಯಾಗುವುದಾಗಿ ಬೆದರಿಕೆ ಹಾಕಿದ್ದರು.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...