alex Certify ಕೊರೊನಾ ಲಸಿಕಾ ಕೇಂದ್ರದ ಕುರಿತ ಗೊಂದಲಕ್ಕೆ ಉತ್ತರ ನೀಡಲಿದೆ ಅಮೆಜಾನ್​ ಅಲೆಕ್ಸಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕಾ ಕೇಂದ್ರದ ಕುರಿತ ಗೊಂದಲಕ್ಕೆ ಉತ್ತರ ನೀಡಲಿದೆ ಅಮೆಜಾನ್​ ಅಲೆಕ್ಸಾ..!

ವಿಶ್ಯಾದ್ಯಂತ ಡೆಡ್ಲಿ ವೈರಸ್​ ಹಾವಳಿ ಶುರುವಾಗಿ ವರ್ಷಗಳೇ ಕಳೆದಿದೆ. ರೂಪಾಂತರಿ ವೈರಸ್​ಗಳು ಜನರನ್ನ ಹೈರಾಣಾಗಿಸಿವೆ. ಈಗಾಗಲೇ ವಿವಿಧ ದೇಶಗಳ ಸರ್ಕಾರಗಳು ಜನರಲ್ಲಿ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸಲು ಕೊರೊನಾ ಲಸಿಕೆ ಅಭಿಯಾನಗಳನ್ನ ನಡೆಸುತ್ತಿವೆ.

ಆದರೆ ನಮ್ಮ ಸಮೀಪದಲ್ಲಿ ಇರುವ ಲಸಿಕೆ ಕೇಂದ್ರ ಯಾವುದು ಎಂಬ ಪ್ರಶ್ನೆ ನಿಮ್ಮನ್ನು ಕಾಡಿದ್ದಿರಬಹುದು. ನಿಮ್ಮ ಈ ಗೊಂದಲಕ್ಕೆ ಉತ್ತರ ನೀಡಲು ಅಮೆಜಾನ್​ ಅಲೆಕ್ಸಾ ಸಜ್ಜಾಗಿದೆ.

ಅಮೆಜಾನ್​ ಅಲೆಕ್ಸಾ ಮೂಲಕ ನೀವು ಇನ್ಮುಂದೆ ನಿಮ್ಮ ಹತ್ತಿರದ ಕೊರೊನಾ ಲಸಿಕಾ ಕೇಂದ್ರಗಳು ಎಲ್ಲಿವೆ ಅನ್ನೋದನ್ನ ಪತ್ತೆ ಮಾಡಬಹುದಾಗಿದೆ.

ಅಮೆರಿಕದಲ್ಲಿರುವ ಅಮೆಜಾನ್​ ಅಲೆಕ್ಸಾ ಬಳಕೆದಾರರಿಗಾಗಿ Alexa, where can I get a COVID vaccine? (ಅಲೆಕ್ಸಾ, ನಾನು ಎಲ್ಲಿ ಕೋವಿಡ್​ ಲಸಿಕೆ ಪಡೆಯಬಹದು..?) ಎಂಬ ಆಯ್ಕೆಯನ್ನ ನೀಡಲಾಗಿದೆ. ಈ ಸೌಲಭ್ಯವನ್ನ ಭಾರತದಲ್ಲೂ ನೀಡುವಂತೆ ಅನೇಕರು ಒತ್ತಾಯಿಸುತ್ತಿದ್ದಾರೆ.

ಅಲೆಕ್ಸಾ ಸರಿ ಸುಮಾರು 85 ದೇಶಗಳಲ್ಲಿರುವ ಕೊರೊನಾ ಲಸಿಕೆಯ ಅರ್ಹತೆ ಬಗ್ಗೆ ಹಾಗೂ ಹತ್ತಿರದ ಕೊರೊನಾ ಪರೀಕ್ಷಾ ಕೇಂದ್ರದ ಬಗ್ಗೆ ಮಾಹಿತಿ ನೀಡಲಿದೆ. ಗ್ರಾಹಕರು ಕೇಳಿರುವ ಕೊರೊನಾ ಸಂಬಂಧಿ ಮಿಲಿಯನ್​ಗಟ್ಟಲೇ ಪ್ರಶ್ನೆಗಳಿಗೆ ಅಲೆಕ್ಸಾ ಸರಿಯಾದ ಉತ್ತರ ನೀಡಿದೆ ಎಂದು ಅಮೆಜಾನ್​ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...