alex Certify ದಾಖಲೆ ನೇಮಕಾತಿಗಳಿಗೆ ಸಾಕ್ಷಿಯಾದ ಫೆಬ್ರವರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾಖಲೆ ನೇಮಕಾತಿಗಳಿಗೆ ಸಾಕ್ಷಿಯಾದ ಫೆಬ್ರವರಿ

ಹಿಂದಿನ ವಿತ್ತೀಯ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷದಲ್ಲಿ ಉತ್ತಮ ಪ್ರಗತಿ ಕಾಣುತ್ತಿರುವ ಕಂಪನಿಗಳು ಹೈರಿಂಗ್ ಪ್ರಕ್ರಿಯೆಗೆ ಚುರುಕು ಕೊಟ್ಟಿವೆ.

ನೌಕರಿ ಪ್ಲಾಟ್‌ಫಾರಂನಲ್ಲಿ ಫೆಬ್ರವರಿ 2022ರ ತಿಂಗಳಲ್ಲಿ ಪೋಸ್ಟಿಂಗ್ ಆದ ಕೆಲಸಗಳ ಸಂಖ್ಯೆ 3,074 ಇದ್ದು, ಕಳೆದ ವರ್ಷದ ಇದೇ ತಿಂಗಳು 2,356 ಪೋಸ್ಟಿಂಗ್‌ಗಳು ದಾಖಲಾಗಿದ್ದಾಗಿ ನೌಕರಿ ಸೂಚ್ಯಂಕದಿಂದ ತಿಳಿದು ಬಂದಿದೆ.

ONLINE ನಲ್ಲಿ ಸಂಚಲನ ಸೃಷ್ಟಿಸಿದ್ದಾಳೆ ಈ ಬಲೂನ್ ಬಾಲೆ

“ಆಟೋ ಹಾಗೂ ಸಂಬಂಧಿತ ಕ್ಷೇತ್ರಗಳಲ್ಲಿ ಸುದೀರ್ಘಾವಧಿ ಬಳಿಕ ಉತ್ತಮ ಚೇತರಿಕೆ ಕಂಡು ಬರುತ್ತಿದ್ದು, ಔಪಚಾರಿಕ ಕ್ಷೇತ್ರದಲ್ಲಿ ಸುಸ್ಥಿರ ಬೆಳವಣಿಗೆ ದಾಖಲಾಗುತ್ತಿರುವ ಕಾರಣ ಉದ್ಯೋಗಾಕಾಂಕ್ಷಿಗಳ ವಲಯದಲ್ಲಿ ವಿಶ್ವಾಸ ವರ್ಧನೆಯಾಗಿದೆ ಎಂದು ಹೇಳಬಹುದು,”ಎನ್ನುತ್ತಾರೆ ನೌಕರಿ ಡಾಟ್ ಕಾಮ್‌ನ ಮುಖ್ಯ ಬ್ಯುಸಿನೆಸ್ ಅಧಿಕಾರಿ ಪವನ್ ಗೋಯಲ್.

2022ರಲ್ಲಿ ಹೈರಿಂಗ್ ಪಕ್ರಿಯೆಯಲ್ಲಿ ಎರಡಂಕಿ ದರದಲ್ಲಿ ಪ್ರಗತಿ ಕಾಣಲಿದೆ ಎಂದು ಟೆಕ್ ಸಂಸ್ಥೆಗಳ ಸಿಇಓಗಳ ಪೈಕಿ 90% ಮಂದಿ ಅಭಿಪ್ರಾಯಪಟ್ಟಿದ್ದಾರೆ.

ಐಟಿ-ಸಾಫ್ಟ್‌ವೇರ್‌‌/ಸಾಫ್ಟ್‌ವೇರ್‌ ಸೇವೆಗಳು (41 ಪ್ರತಿಶತ), ಬ್ಯಾಂಕಿಂಗ್/ವಿತ್ತೀಯ ಸೇವೆಗಳು (35%), ಫಾರ್ಮಾ (34%), ಆತಿಥ್ಯ (41%) ಮತ್ತು ಟೆಲಿಕಾಂ (23%) ಕೋವಿಡ್-19ರ ಆತಂಕಗಳ ನಡುವೆಯೂ ಸ್ಥಿರ ಪ್ರಗತಿ ದರ ದಾಖಲಿಸಿಕೊಂಡು ಬಂದಿವೆ. ಇದೇ ಅವಧಿಯಲ್ಲಿ ವೈದ್ಯಕೀಯ/ಆರೋಗ್ಯ ಸೇವೆ (7%) ಮತ್ತು ಎಫ್‌ಎಂಸಿಜಿ (4%) ಕ್ಷೇತ್ರಗಳು ಹೈರಿಂಗ್ ಪ್ರಕ್ರಿಯೆಯಲ್ಲಿ ವರ್ಷದಿಂದ ವರ್ಷಕ್ಕೆ ತುಲನಾತ್ಮಕವಾಗಿ ಅಲ್ಪ ಮಟ್ಟದ ಪ್ರಗತಿ ದಾಖಲಿಸಿವೆ ಎಂದು ಹೇಳಲಾಗಿದೆ.

ನೌಕರಿಯ ಜಾಬ್‌ಸ್ಪೀಕ್ ಇಂಡೆಕ್ಸ್ ಮೂಲಕ ನೌಕರಿ ಡಾಟ್ ಕಾಮ್‌ ಜಾಲತಾಣದ ಮೂಲಕ ನಡೆಯುವ ಹೈರಿಂಗ್ ಪ್ರಕ್ರಿಯೆಗಳ ಮಾಸಿಕ ಸೂಚಂಕ ಕಾಪಾಡಿಕೊಂಡು ಬರಲಾಗುತ್ತಿದೆ.

ಇದೇ ವೇಳೆ ಹೈರಿಂಗ್ ಪ್ರಕ್ರಿಯೆಯಲ್ಲಿ ವರ್ಷದಿಂದ ವರ್ಷಕ್ಕೆ ಉತ್ತಮ ದರದಲ್ಲಿ ಪ್ರಗತಿ ಕಾಣುತ್ತಿರುವ ನಗರಗಳ ಪಟ್ಟಿಯನ್ನೂ ಕೊಡಲಾಗಿದೆ: ಬೆಂಗಳೂರು (49%), ಮುಂಬಯಿ (45%), ಚೆನ್ನೈ (45%), ಹೈದರಾಬಾದ್ (43%), ಪುಣೆ (41%) ಹಾಗೂ ದೆಹಲಿ (30%) ಈ ಹೈರಿಂಗ್ ಪ್ರಕ್ರಿಯೆಯಲ್ಲಿ ಉತ್ತಮ ಪ್ರಗತಿ ಸಾಧಿಸಿವೆ.

ಮಿಕ್ಕಂತೆ ಕೊಯಮತ್ತೂರು ಅಹಮದಾಬಾದ್, ಹಾಗೂ ಕೊಚ್ಚಿ ಹೈರಿಂಗ್ ವಿಚಾರದಲ್ಲಿ ಮೇಲ್ಮುಖ ಪ್ರಗತಿ ಕಂಡಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...