alex Certify ONLINE ನಲ್ಲಿ ಸಂಚಲನ ಸೃಷ್ಟಿಸಿದ್ದಾಳೆ ಈ ಬಲೂನ್ ಬಾಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ONLINE ನಲ್ಲಿ ಸಂಚಲನ ಸೃಷ್ಟಿಸಿದ್ದಾಳೆ ಈ ಬಲೂನ್ ಬಾಲೆ

Meet Kisbu, a balloon seller in Kerala, who became an overnight Internet  sensation. Here's her story - Trending News News

ಭಾರೀ ಶಕ್ತಿಶಾಲಿ ಮಾಧ್ಯಮವಾದ ಅಂತರ್ಜಾಲದಲ್ಲಿ ಯಾವುದೇ ವ್ಯಕ್ತಿ ಆಹೋರಾತ್ರಿ ಸಂಚಲನ ಸೃಷ್ಟಿಸಬಹುದು ಎಂಬುದಕ್ಕೆ ರಾನು ಮೊಂಡಲ್‌ರಿಂದ ಹಿಡಿದು ಭುಬನ್ ಬಡ್ಯಾಕರ್‌‌ವರೆಗೂ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ. ಇದೀಗ ಈ ಪಟ್ಟಿಗೆ ಹೊಸದೊಂದು ಹೆಸರು ಸೇರ್ಪಡೆಗೊಂಡಿದೆ.

ಕೇರಳದ ಜನನಿಬಿಡ ಪ್ರದೇಶಗಳಲ್ಲಿ ಬಲೂನ್ ಮಾರಾಟ ಮಾಡುವ ಹುಡುಗಿಯೊಬ್ಬಳು ಆನ್ಲೈನ್‌ನಲ್ಲಿ ಹೆಸರು ಮಾಡಿದ್ದಾಳೆ. ವೆಡ್ಡಿಂಗ್ ಛಾಯಾಗ್ರಾಹಕರೊಬ್ಬರು ಈ ಹುಡುಗಿಯ ಖ್ಯಾತಿಗೆ ಕಾರಣರಾಗಿದ್ದಾರೆ.

ಹೀಲಿಯಂ ಅನಿಲ ಸೇವಿಸಿದ ವಿರಾಟ್​ ಕೊಹ್ಲಿ ಮಾಡಿದ್ದೇನು ನೋಡಿ..!

ಅರ್ಜುನ್ ಕೃಷ್ಣನ್ ಹೆಸರಿನ ಈ ಛಾಯಾಗ್ರಾಹಕ ಕೇರಳದ ಅಳಂದೂರ್‌ ಕಾವು ಉತ್ಸವದ ಸಂದರ್ಭದಲ್ಲಿ ಈ ಹುಡುಗಿಯನ್ನು ಪತ್ತೆ ಮಾಡಿದ್ದಾರೆ. ಆ ವೇಳೆ ಆಕೆ ಬಲೂನ್‌ಗಳೊಂದಿಗೆ ಕುಳಿತಿದ್ದ ರೀತಿ ಛಾಯಾಗ್ರಾಹಕರಿಗೆ ಒಂದೊಳ್ಳೇ ಚಿತ್ರ ಸೆರೆ ಹಿಡಿಯಲು ಪ್ರೇರೇಪಿಸಿದೆ. ಕೂಡಲೇ ಆಕೆಯ ಚಿತ್ರ ಸೆರೆ ಹಿಡಿದ ಅರ್ಜುನ್‌ ಅದನ್ನು ಆಕೆ ಮತ್ತು ಆಕೆಯ ತಾಯಿಯೊಂದಿಗೆ ಅಲ್ಲೇ ಹಂಚಿಕೊಂಡಿದ್ದಾರೆ.

ಕಿಸ್ಬು ಹೆಸರಿನ ರಾಜಸ್ಥಾನದ ಈ ಹುಡುಗಿ ಕೇರಳದಲ್ಲಿ ಬಲೂನ್ ಮಾರಾಟ ಮಾಡುತ್ತಾಳೆ. ತಾವು ಸೆರೆ ಹಿಡಿದ ಆಕೆಯ ಚಿತ್ರವನ್ನು ಕೃಷ್ಣನ್ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದು, ಅದೀಗ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...