alex Certify ಪರ್ವತ ಮೇಕೆಯನ್ನು ಎಂದಾದರೂ ಕಂಡಿದ್ದೀರಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರ್ವತ ಮೇಕೆಯನ್ನು ಎಂದಾದರೂ ಕಂಡಿದ್ದೀರಾ….?

ಪರ್ವತ ಸಿಂಹದ ಬಗ್ಗೆ ನೀವೆಲ್ಲಾ ಬಹುತೇಕ ಕೇಳಿರುತ್ತೀರಿ. ಆದರೆ ಪರ್ವತ ಮೇಕೆ ಬಗ್ಗೆ? ಇಲ್ಲವಾದಲ್ಲಿ ಈ ವಿಡಿಯೋದಲ್ಲಿ ನೀವು ಈ ಜೀವಿಯನ್ನು ಕಾಣಬಹುದಾಗಿದೆ.

ಉತ್ತರ ಅಮೆರಿಕದ ಪರ್ವತ ಪ್ರದೇಶಗಳಲ್ಲಿ ಕಂಡು ಬರುವ ಈ ಪ್ರಾಣಿಯು ಇದೀಗ ನೆಟ್ಟಿಗರ ಗಮನ ಸೆಳೆಯುತ್ತಿದೆ. ಈ ವಿಡಿಯೋಗೆ ಅದಾಗಲೇ ಐದು ಮಿಲಿಯನ್‌ಗೂ ಹೆಚ್ಚಿನ ವೀಕ್ಷಣೆಗಳು ಸಿಕ್ಕಿವೆ.

ಪರ್ವತ ಮೇಕೆಯೊಂದು ಕಾಡಿನಲ್ಲಿ ಓಡಾಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಈ ಪರ್ವತಗಳ ಮೇಲೆ ಟ್ರೆಕ್ಕಿಂಗ್ ಮಾಡುತ್ತಿರುವ ಪರ್ವತಾರೋಹಿಗಳು ಈ ವಿಡಿಯೋ ಸೆರೆ ಹಿಡಿದಿದ್ದಾರೆ.

“ಭಾರೀ ಬಲಿಷ್ಠ ಪರ್ವತ ಮೇಕೆ ಇಲ್ಲಿ ನೋಡಿ,” ಎಂದು ಕ್ಯಾಪ್ಷನ್‌ನಲ್ಲಿ ಬರೆಯಲಾಗಿದೆ.

ಈ ವಿಡಿಯೋ ವೀಕ್ಷಿಸಿದ ಅನೇಕರು ಖುದ್ದು ತಾವು ರೆಕಾರ್ಡ್ ಮಾಡಿರುವ ಪರ್ವತ ಮೇಕೆಗಳ ವಿಡಿಯೋಗಳನ್ನು ಇದೇ ವೇಳೆ ಕಾಮೆಂಟ್ಸ್ ವಿಭಾಗದಲ್ಲಿ ಶೇರ್‌ ಮಾಡಿದ್ದಾರೆ.

ಪರ್ವತ ಮೇಕೆಯು ಒಂದೇ ನೆಗೆತದಲ್ಲಿ ನಾಲ್ಕು ಮೀಟರ್‌ನಷ್ಟು ಜಿಗಿಯಬಲ್ಲದು ಎಂದು ನೆಟ್ಟಿಗರೊಬ್ಬರು ಇದೇ ವೇಳೆ ಕಾಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...