alex Certify ಯಂಗ್ ಆಗಿ ಕಾಣಲು ಪ್ರತಿ ವರ್ಷ 16 ಕೋಟಿ ಖರ್ಚು ಮಾಡ್ತಿದ್ದಾರೆ ಈ ಮಿಲಿಯನೇರ್‌; ಅದರ ಪರಿಣಾಮ ಹೇಗಿದೆ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಂಗ್ ಆಗಿ ಕಾಣಲು ಪ್ರತಿ ವರ್ಷ 16 ಕೋಟಿ ಖರ್ಚು ಮಾಡ್ತಿದ್ದಾರೆ ಈ ಮಿಲಿಯನೇರ್‌; ಅದರ ಪರಿಣಾಮ ಹೇಗಿದೆ ಗೊತ್ತಾ….?

ಯಾವಾಗಲೂ ಯಂಗ್‌ ಆಗಿಯೇ ಕಾಣಬೇಕು ಎಂಬ ಆಸೆ ಸಹಜ. ಆದರೆ ಇದು ಅಸಾಧ್ಯ ಅನ್ನೋದು ನಮಗೆಲ್ಲರಿಗೂ ಗೊತ್ತಿದೆ. ಅಮೆರಿಕದ ಟೆಕ್ ಮಿಲಿಯನೇರ್ ಬ್ರಿಯಾನ್ ಜಾನ್ಸನ್ ಕೂಡ ತಮಗೆ ವಯಸ್ಸಾಗದಂತೆ ತಡೆಯಲು ಹರಸಾಹಸ ಮಾಡ್ತಿದ್ದಾರೆ. ಯೌವ್ವನವನ್ನು ಉಳಿಸಿಕೊಳ್ಳಲು ಬ್ರಿಯಾನ್‌ ಜಾನ್ಸನ್ ಪ್ರತಿ ವರ್ಷ 16 ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡುತ್ತಿದ್ದಾರೆ.

ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಬದಲಾವಣೆಯ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ. ಬ್ರಿಯಾನ್ ಜಾನ್ಸನ್ ಕಳೆದ 6 ವರ್ಷಗಳಲ್ಲಿ ತಮ್ಮಲ್ಲಿ ಏನು ಬದಲಾವಣೆ ಆಗಿದೆ ಎಂಬುದರ ಫೋಟೋಗಳ ಕೊಲಾಜ್ ಅನ್ನು ಹಂಚಿಕೊಂಡಿದ್ದಾರೆ. ಈ ಚಿತ್ರಗಳು 2018, 2023 ಮತ್ತು 2024ರದ್ದು. ಆದರೆ ವಯಸ್ಸಾಗದಂತೆ ತಡೆಯುವ ಅವರ ಪ್ರಯತ್ನ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂಬುದು ಫೋಟೋಗಳಲ್ಲಿ ಗೋಚರಿಸುತ್ತಿದೆ.

46 ವರ್ಷದ ಬ್ರಿಯಾನ್ ಜಾನ್ಸನ್ ಸಿಲಿಕಾನ್ ವ್ಯಾಲಿಯ ಮಾಜಿ ಸಿಇಓ. ಯಂಗ್‌ ಆಗಿಯೇ ಇರಬೇಕೆಂಬ ಕಾರಣಕ್ಕೆ ಕಟ್ಟುನಿಟ್ಟಾದ ದಿನಚರಿಯನ್ನು ಅನುಸರಿಸುತ್ತಾರೆ. ಈ ಮೂಲಕ ಅವರು ತಮ್ಮ ಎಪಿಜೆನೆಟಿಕ್ ವಯಸ್ಸನ್ನು 5.1 ವರ್ಷಗಳಷ್ಟು ಕಡಿಮೆ ಮಾಡಿದ್ದಾರಂತೆ. ‘ಪ್ರಾಜೆಕ್ಟ್ ಬ್ಲೂಪ್ರಿಂಟ್’ ಹೆಸರಿನ ಈ ದಿನಚರಿಯಲ್ಲಿ, ಅವರು ಪ್ರತಿದಿನ 100 ಕ್ಕೂ ಹೆಚ್ಚು ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಕಟ್ಟುನಿಟ್ಟಾದ ಆಹಾರ ಕ್ರಮವನ್ನು ಅನುಸರಿಸುತ್ತಾರೆ, ಇದರಲ್ಲಿ ಪ್ರತಿ ಕ್ಯಾಲೊರಿಗಳನ್ನು ಎಣಿಸಲಾಗುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಹಂಚಿಕೊಳ್ಳುವಾಗ ತಮ್ಮ ಫೇಸ್ ಐಡಿ ಕೂಡ ಗೊಂದಲಕ್ಕೊಳಗಾಗಿದೆ ಎಂದು ಬ್ರಿಯಾನ್ ಜಾನ್ಸನ್ ಬರೆದುಕೊಂಡಿದ್ದಾರೆ. ಅವರ ಪೋಸ್ಟ್ ಅನ್ನು 40 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಕೆಲವರು ಅವರ ಲುಕ್‌ ಅನ್ನು ಗೇಲಿ ಮಾಡಿದರೆ, ಕೆಲವರು ಫಿಟ್ನೆಸ್‌ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

2018 ರಲ್ಲಿ ಬ್ರಿಯಾನ್‌ ಯಂಗ್‌ ಆಗಿ ಕಾಣುತ್ತಿದ್ದರು. ಆದರೆ ಈಗ ನಿಜವಾಗಲೂ ವಯಸ್ಸಾದಂತೆ ಕಾಣುತ್ತಿದ್ದಾರೆ ಎಂಬುದು ಅನೇಕರ ಅಭಿಪ್ರಾಯ. ಆದರೆ ಬ್ರಿಯಾನ್ ಜಾನ್ಸನ್ ತಮ್ಮ ವಯಸ್ಸನ್ನು ಮರಳಿ ತರುವ ಪ್ರಯತ್ನದಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದಾರೆ. ಅವರು ವಿಶೇಷ ಆಹಾರದೊಂದಿಗೆ ಕಟ್ಟುನಿಟ್ಟಾದ ಜೀವನಶೈಲಿಯನ್ನು ಅನುಸರಿಸುತ್ತಾರೆ. ಅವರ ಆರೋಗ್ಯವನ್ನು ಪ್ರತಿದಿನ ವೈದ್ಯರ ಸಮಿತಿಯು ಮೇಲ್ವಿಚಾರಣೆ ಮಾಡುತ್ತದೆ. ಆದರೆ ಹಣವು ನಿಜವಾಗಿಯೂ ವಯಸ್ಸನ್ನು ಸೋಲಿಸಬಹುದೇ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...