alex Certify ತಲೆ ತಿರುಗಿಸುವಂತಿದೆ ಕೇಶ ವಿನ್ಯಾಸಕಿಯ ಬಿಲ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆ ತಿರುಗಿಸುವಂತಿದೆ ಕೇಶ ವಿನ್ಯಾಸಕಿಯ ಬಿಲ್….!

ಸಲೂನ್​ಗೆ ಹೋಗಿ ಕೂದಲನ್ನ ಕತ್ತರಿಸಿ ಅದಕ್ಕೆ ಬಣ್ಣ ಹಚ್ಚಿಸಿಕೊಳ್ಳಲು ಅಬ್ಬಬ್ಬಾ ಅಂದರೆ ನೀವು ಎಷ್ಟು ಹಣವನ್ನ ವ್ಯಯಿಸೋಕೆ ತಯಾರಿದ್ದೀರಿ..? ದೊಡ್ಡ ದೊಡ್ಡ ಸಲೂನ್​ಗಳಲ್ಲಿ ಈ ಹಣ ಹೆಚ್ಚೇ ಇರುತ್ತದೆ.

ಅದೇ ರೀತಿ ಕ್ಯಾಲಿಫೋರ್ನಿಯಾ ಮೂಲದ ಪ್ರಸಿದ್ಧ ಕೇಶ ವಿನ್ಯಾಸಕಿ ಜಾಸ್ಮಿನ್​ ಪೊಲಿಕಾರ್ಪೋ ಪ್ರತಿ ಗಂಟೆಗೆ ಗ್ರಾಹಕರಿಗೆ 11 ಸಾವಿರ ರೂಪಾಯಿ ಬಿಲ್​ ಮಾಡುತ್ತಾರೆ. ಇದೇ ಲೆಕ್ಕದಲ್ಲಿ ಬರೋಬ್ಬರಿ 13 ಗಂಟೆಗಳ ಕಾಲ ಕೂದಲಿನ ವಿನ್ಯಾಸ ಮಾಡಿಕೊಂಡ ಮಹಿಳೆಗೆ ಬರೋಬ್ಬರಿ 1.44 ಲಕ್ಷ ರೂಪಾಯಿ ಚಾರ್ಜ್ ವಿಧಿಸಲಾಗಿದೆ.

ಜಾಸ್ಮಿನ್​ ಕೆಲದಿನದ ಹಿಂದಷ್ಟೇ ಗ್ರಾಹಕರೊಬ್ಬರ ವಿಡಿಯೋವನ್ನ ಶೇರ್​ ಮಾಡಿದ್ದರು. ಈ ವಿಡಿಯೋದಲ್ಲಿ ಗ್ರಾಹಕಿಯ ಕೂದಲನ್ನ ಎಷ್ಟು ಚೆನ್ನಾಗಿ ಮಾರ್ಪಾಡು ಮಾಡಿದ್ದೇನೆ ಎಂಬುದನ್ನ ತೋರಿಸಿದ್ದರು. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಅಲ್ಲದೇ ಈಕೆ ಕೂದಲು ಕತ್ತರಿಸಿ ಬಣ್ಣ ಹಾಕಲು ವಿಧಿಸುವ ಬೆಲೆಯನ್ನ ಕೇಳಿ ನೆಟ್ಟಿಗರು ದಂಗಾಗಿ ಹೋಗಿದ್ದಾರೆ. ಕಮೆಂಟ್​ ಸೆಕ್ಷನ್​ನಲ್ಲಿ ಅನೇಕರು ಅಬ್ಬಾ ಐ ಫೋನ್​ಗಿಂತಲೂ ದುಬಾರಿ ಹಣವಿದು ಎಂದು ಮೂಗು ಮುರಿದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...