alex Certify ಯುವಕನ ಮೇಲೆ ಕಾರು ಹತ್ತಿಸಿ 100 ಮೀಟರ್​ವರೆಗೆ ಎಳೆದೊಯ್ದ ಚಾಲಕ..! ವೈರಲ್​ ಆಯ್ತು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುವಕನ ಮೇಲೆ ಕಾರು ಹತ್ತಿಸಿ 100 ಮೀಟರ್​ವರೆಗೆ ಎಳೆದೊಯ್ದ ಚಾಲಕ..! ವೈರಲ್​ ಆಯ್ತು ವಿಡಿಯೋ

ಹಿಟ್​ & ರನ್​ ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬನನ್ನು ಕಾರು ಚಾಲಕ ಸುಮಾರು 100 ಮೀಟರ್​ಗಳಷ್ಟು ದೂರ ಎಳೆದೊಯ್ದ ಘಟನೆಯು ಹರಿಯಾಣದ ಪಂಚಕುಲ ರಸ್ತೆಯಲ್ಲಿ ನಡೆದಿದೆ. ಭಯಾನಕ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಮಂಗಳವಾರ ಮುಂಜಾನೆ ಈ ಘಟನೆ ಸಂಭವಿಸಿದ್ದು, ರಸ್ತೆಯಲ್ಲಿ ನೆರೆದಿದ್ದ ಜನ ಸಮೂಹದ ಸಮ್ಮುಖದಲ್ಲಿಯೇ ಈ ಘಟನೆ ಸಂಭವಿಸಿದೆ. ಕಾರು ಚಾಲಕ ಕಾರನ್ನು ನಿಲ್ಲಿಸದೇ ವ್ಯಕ್ತಿಯನ್ನು 100 ಮೀಟರ್ ದೂರದವರೆಗೆ ಎಳೆದೊಯ್ದಿದ್ದಾರೆ ಎನ್ನಲಾಗಿದೆ. ಅಲ್ಲದೇ ಕಾರು ಚಾಲಕ ಕಾರನ್ನು ನಿಲ್ಲಿಸದೇ ಸ್ಥಳದಿಂದ ಎಸ್ಕೇಪ್​ ಆಗಿದ್ದಾನೆ.

ಪಂಚಕುಲದ ಸೆಕ್ಟರ್​ 20ರ ಐಷಾರಾಮಿ ಕ್ಲಬ್​ನ ಹೊರಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಾರನ್ನು ನಿಲ್ಲಿಸುವ ಸಂದರ್ಭದಲ್ಲಿ ಕಾರು ಚಾಲಕ ಯುವಕನಿಗೆ ಡಿಕ್ಕಿ ಹೊಡೆದಿದ್ದು ಮಾತ್ರವಲ್ಲದೇ ಆತನನ್ನು 100 ಮೀಟರ್​ ದೂರ ಎಳೆದೊಯ್ದಿದ್ದಾನೆ. ಕೂಡಲೇ ಕಾರು ಚಾಲಕ ಸ್ಥಳದಿಂದ ಎಸ್ಕೇಪ್​ ಕೂಡ ಆಗಿದ್ದಾನೆ.

ಈ ಘಟನೆಯ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗ್ತಿದ್ದು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಪೊಲೀಸರಿಗೆ ಆಗ್ರಹಿಸಿದ್ದಾರೆ.

ವರದಿಗಳ ಪ್ರಕಾರ, ಪಂಚಕುಲದ ಸೆಕ್ಟರ್​ 20ರಲ್ಲಿ ಕ್ಲಬ್​ನ ಹೊರಗಡೆ ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ 2 ಗುಂಪುಗಳ ನಡುವೆ ಘರ್ಷಣೆ ಸಂಭವಿಸಿತ್ತು ಎನ್ನಲಾಗಿದೆ. ಇದಾದ ಬಳಿಕ ಎರಡು ಗುಂಪುಗಳ ನಡುವಿನ ವಾಗ್ವಾದ ವಿಕೋಪಕ್ಕೆ ತಿರುಗಿತ್ತು.

ಒಂದು ಗುಂಪಿನವರು ಸ್ಥಳದಿಂದ ಎಸ್ಕೇಪ್​ ಆಗಲು ಯತ್ನಿಸುತ್ತಿದ್ದರು. ಆದರೆ ಮತ್ತೊಂದು ಗುಂಪಿಗೆ ಸೇರಿದ್ದ ಯುವಕ ಕಾರನ್ನು ನಿಲ್ಲಿಸಲು ಯತ್ನಿಸುತ್ತಿದ್ದ ಎನ್ನಲಾಗಿದೆ. ಆಗ ಆರೋಪಿಯು ಯುವಕನ ಮೇಲೆಯೇ ಕಾರನ್ನು ಹತ್ತಿಸಿದ್ದಾನೆ ಎಂದು ತಿಳಿದು ಬಂದಿದೆ.

— Nikhil Choudhary (@NikhilCh_) November 7, 2023

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...