alex Certify ಶೋಕತಪ್ತ ಭಾವದಲ್ಲಿ ಮಾಡೆಲ್​ಗಳ ಫೋಟೋಶೂಟ್​; ಯಾರಾದ್ರೂ ಸತ್ತೋಗಿದ್ದಾರಾ ಎಂದು ನೆಟ್ಟಿಗರ ಲೇವಡಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೋಕತಪ್ತ ಭಾವದಲ್ಲಿ ಮಾಡೆಲ್​ಗಳ ಫೋಟೋಶೂಟ್​; ಯಾರಾದ್ರೂ ಸತ್ತೋಗಿದ್ದಾರಾ ಎಂದು ನೆಟ್ಟಿಗರ ಲೇವಡಿ…!

ಪ್ರಚಲಿತ ಡಿಸೈನರ್​ ಬ್ರ್ಯಾಂಡ್​ ಆಗಿರುವ ಸಬ್ಯಸಾಚಿ ಇತ್ತೀಚಿಗೆ ವಧುವಿನ ಕಲೆಕ್ಷನ್​ಗಳನ್ನು ಪರಿಚಯಿಸುವ ಮಾಡೆಲ್​ ಫೋಟೋಶೂಟ್​ನ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದು ಸಖತ್​ ಟ್ರೋಲ್​ಗೆ ಒಳಗಾಗಿದೆ.

ಮಾಡೆಲ್​ಗಳು ಧರಿಸಿದ ಉಡುಪುಗಳು ಉತ್ತಮವಾಗಿದ್ದರೂ ಸಹ ಮಾಡೆಲ್​ಗಳು ಶೋಕದಲ್ಲಿ ಇರುವಂತೆ ಪೋಸ್​ ನೀಡಿದ್ದು ಹಾಗೂ ಒಬ್ಬ ಮಾಡೆಲ್​ನ ಮುಖದಲ್ಲಿಯೂ ಬಿಂದಿ ಇಲ್ಲದೇ ಇರುವುದು ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ. ಹಿಂದೂ ವಧು ಹಣೆಯಲ್ಲಿ ಬಿಂದಿ ಇಲ್ಲದೇ ಇಷ್ಟು ದುಃಖದಲ್ಲಿ ಏಕೆ ಇರುತ್ತಾಳೆ..? ಈ ರೀತಿ ಇದ್ದರೆ ಆಕೆಯನ್ನು ವಧು ಅಂತಾ ಯಾರು ಕರೀತಾರೆ ಅಂತಾ ಸೋಶಿಯಲ್​ ಮೀಡಿಯಾದಲ್ಲಿ ಪ್ರಶ್ನೆ ಮಾಡಲಾಗ್ತಿದೆ.

ಅನೇಕರು ಸೋಶಿಯಲ್​ ಮೀಡಿಯಾದಲ್ಲಿ ಸಬ್ಯಸಾಚಿಯ ಈ ವೆಡ್ಡಿಂಗ್​ ಕಲೆಕ್ಷನ್​ ಫೋಟೋಶೂಟ್​ಗೆ ಕಮೆಂಟ್​ ಮಾಡಿದ್ದಾರೆ. ಅರ್ರೆ….. ಇಲ್ಲಿ ಯಾರಾದರೂ ಸತ್ತು ಹೋದರೇ..? ಮಾಡೆಲ್​ಗಳು ಇಷ್ಟು ದುಃಖದಲ್ಲಿ ಇರೋಕೆ ಕಾರಣವಾದ್ರೂ ಏನು ಅಂತಾ ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಮಧುವಣಗಿತ್ತಿಯಂತೆ ತಯಾರಾಗಿ ಇವರೆಲ್ಲ ಯಾರ ಅಂತ್ಯಕ್ರಿಯೆಗೆ ಹೋಗ್ತಿದ್ದಾರೆ ಅಂತಾ ಕೇಳ್ತಿದ್ದಾರೆ. ಇನ್ನೂ ಕೆಲವರು ಹಣವಿದ್ದರೆ ಸಭ್ಯಸಾಚಿ ಬಟ್ಟೆ ಕೊಂಡುಕೊಳ್ಳಬಹುದೇ ವಿನಃ ಖುಷಿಯನ್ನ ಅಲ್ಲ ಎನ್ನುವುದನ್ನ ಈ ಫೊಟೋ ಸಾರುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ .

ನಕಾರಾತ್ಮಕ ಕಮೆಂಟ್​ಗಳ ಹೊರತಾಗಿಯೂ, ಅನೇಕರು ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಟ್ರೆಂಡಿಂಗ್​ನಲ್ಲಿರುವ ಲುಕ್ಕಿಂಗ್​ ಲೈಕ್​ ಅ ವ್ಹಾವ್​​ ಅಂತಾ ಕಮೆಂಟ್​ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...