alex Certify 60 ವರ್ಷಗಳ ನಂತ್ರ ಕೂಡಿ ಬಂದಿದೆ ʼಶುಭ ಯೋಗʼ….! ವಸ್ತುಗಳ ಖರೀದಿಗೆ ಅತ್ಯುತ್ತಮ ದಿನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

60 ವರ್ಷಗಳ ನಂತ್ರ ಕೂಡಿ ಬಂದಿದೆ ʼಶುಭ ಯೋಗʼ….! ವಸ್ತುಗಳ ಖರೀದಿಗೆ ಅತ್ಯುತ್ತಮ ದಿನ

ದೀಪಾವಳಿ ಹತ್ತಿರ ಬರ್ತಿದೆ. ಐದು ದಿನಗಳ ಕಾಲ ಅದ್ಧೂರಿ ದೀಪಾವಳಿ ಆಚರಣೆಗೆ ಜನರು ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಧನ್ ತೇರಸ್ ದಿನ ಹಬ್ಬಕ್ಕಾಗಿ ಜನರು, ವಾಹನ, ಬಂಗಾರ ಸೇರಿದಂತೆ ಮನೆಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡ್ತಾರೆ. ಆದ್ರೆ ಈ ಬಾರಿ ಧನ್ ತೇರಸ್ ಗಿಂತ ಮೊದಲೇ ಬಂಗಾರ ಖರೀದಿಗೆ ಶುಭ ಯೋಗ ಕೂಡಿ ಬಂದಿದೆ. 60 ವರ್ಷಗಳ ನಂತ್ರ ಶುಭಯೋಗ ಬಂದಿದೆ.

ದೀಪಾವಳಿಗೆ ಮೊದಲೇ ಆಭರಣ, ವಸ್ತು ಖರೀದಿಸಲು ಅಕ್ಟೋಬರ್ 28 ಅತ್ಯಂತ ಶುಭದಿನ. ಮಕರ ರಾಶಿಯಲ್ಲಿ ಶನಿ-ಗುರುಗಳ ಸಂಯೋಗದಿಂದಾಗಿ, ಪುಷ್ಯ ನಕ್ಷತ್ರವು ಅತ್ಯಂತ ಮಂಗಳಕರವಾಗಿರಲಿದೆ. ಸರ್ವಾರ್ಥಸಿದ್ಧಿ ಯೋಗವು ಅದೇ ದಿನ ಬೆಳಿಗ್ಗೆ 6.33 ರಿಂದ 9.42 ರವರೆಗೆ ಇರಲಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ದಿನ ಮಾಡಿದ ಖರೀದಿ ಮಂಗಳಕರವಾಗಿರಲಿದೆ. ಮನೆ-ಆಸ್ತಿ, ಚಿನ್ನ-ಬೆಳ್ಳಿ, ಕಾರು, ಎಲೆಕ್ಟ್ರಾನಿಕ್ಸ್ ವಸ್ತುಗಳು, ಪೀಠೋಪಕರಣ ಇತ್ಯಾದಿಗಳನ್ನು ಖರೀದಿಸಬಹುದು. ಪುಸ್ತಕ ಖರೀದಿಗೂ ಈ ದಿನ ಮಂಗಳಕರವಾಗಿದೆ.

ಖರೀದಿಗೆ ಮಾತ್ರವಲ್ಲದೆ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳಬಹುದು. ಕಬ್ಬಿಣ, ಸಿಮೆಂಟ್, ತೈಲ ಕಂಪನಿ, ಜವಳಿ, ಎಲೆಕ್ಟ್ರಾನಿಕ್ಸ್ ಗೆ ಸಂಬಂಧಿಸಿದ ಕಂಪನ ಷೇರುಗಳಲ್ಲಿ ಹೂಡಿಕೆ ಮಾಡುವುದು ಹೆಚ್ಚು ಉಪಯುಕ್ತವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...