alex Certify ರೈತರಿಗೆ ಗುಡ್ ನ್ಯೂಸ್: ಕ್ವಿಂಟಾಲ್ ಗೆ 7 ಸಾವಿರ ರೂ.ವರೆಗೆ ಹೆಚ್ಚಳವಾಗಿ 50 ಸಾವಿರ ಗಡಿ ದಾಟಿದ ಅಡಿಕೆ ದರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಗುಡ್ ನ್ಯೂಸ್: ಕ್ವಿಂಟಾಲ್ ಗೆ 7 ಸಾವಿರ ರೂ.ವರೆಗೆ ಹೆಚ್ಚಳವಾಗಿ 50 ಸಾವಿರ ಗಡಿ ದಾಟಿದ ಅಡಿಕೆ ದರ

ದಾವಣಗೆರೆ: ಕಳೆದ ಎರಡು ತಿಂಗಳಿನಿಂದ ಕುಸಿತವಾಗಿದ್ದ ಅಡಿಕೆ ದರ ಮೂರು ದಿನಗಳಿಂದ ಏರುಗತಿಯಲ್ಲಿ ಸಾಗುತ್ತಿದೆ.

ಸೋಮವಾರ ದಾವಣಗೆರೆ ಜಿಲ್ಲೆಯ ಚನ್ನಗಿರಿ ಮಾರುಕಟ್ಟೆಯಲ್ಲಿ ಅಡಿಕೆ ದರ ಕ್ವಿಂಟಲ್ ಗೆ 50,000 ರೂ. ಗಡಿ ದಾಟಿದ್ದು, ಕ್ವಿಂಟಾಲ್ ಗೆ 6-7 ಸಾವಿರ ರೂ.ವರೆಗೆ ಹೆಚ್ಚಳವಾಗಿದೆ.

ಹತ್ತು ವರ್ಷಗಳ ಹಿಂದೆ ಒಂದು ಕ್ವಿಂಟಾಲ್ ಅಡಿಕೆ ದರ 80,000 ರೂ.ವರೆಗೆ ಏರಿಕೆ ಕಂಡಿತ್ತು. ಚನ್ನಗಿರಿ ತುಮ್ಕೋಸ್ ಮಾರುಕಟ್ಟೆಯಲ್ಲಿ ಸೋಮವಾರ ಪ್ರತಿ ಕ್ವಿಂಟಾಲ್ ಅಡಿಕೆ ದರ ಗರಿಷ್ಠ 50,539 ರೂ.ಗೆ ಮಾರಾಟವಾಗಿದೆ. ಸುಗ್ಗಿ ಶುರುವಾದ ನಂತರ 43 -44 ಸಾವಿರ ರೂ. ಗೆ ಇಳಿದಿದ್ದ ದರ ಈಗ ಮತ್ತೆ ಏರುಗತಿಯಲ್ಲಿ ಸಾಗಿದೆ. ಈ ದರ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಅಡಿಕೆ ಬೆಲೆ ಏರುಗತಿಯಲ್ಲಿ ಸಾಗುತ್ತಿರುವುದು ಬೆಳೆಗಾರರಲ್ಲಿ ಸಂತಸ ತಂದಿದೆ. ಈಗ ಹೆಚ್ಚಳವಾಗುತ್ತಿರುವ ದರ ಹೊಸ ಅಡಿಕೆ ಬರುವವರೆಗೂ ಮುಂದುವರೆಯಲಿದೆ. ಮೂರ್ನಾಲ್ಕು ವರ್ಷಗಳಿಂದ ಅಡಿಕೆ ದರದಲ್ಲಿ ಸ್ಥಿರತೆ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...