alex Certify ಪ್ಯಾಂಟ್​ ಬೆಲ್ಟ್​ನಲ್ಲಿ ಚಿನ್ನ ಸಾಗಿಸುತ್ತಿದ್ದ ಖದೀಮ: ಆರೋಪಿಯನ್ನು ಖೆಡ್ಡಾಗೆ ಕೆಡವಿದ ಸಿಸಿಬಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ಯಾಂಟ್​ ಬೆಲ್ಟ್​ನಲ್ಲಿ ಚಿನ್ನ ಸಾಗಿಸುತ್ತಿದ್ದ ಖದೀಮ: ಆರೋಪಿಯನ್ನು ಖೆಡ್ಡಾಗೆ ಕೆಡವಿದ ಸಿಸಿಬಿ

ಸೊಂಟದ ಬೆಲ್ಟ್​ನಲ್ಲಿ ಚಿನ್ನದ ಬಿಸ್ಕಟ್​ ಸಾಗಿಸಲು ಯತ್ನಿಸಿದ ಖದೀಮನನ್ನು ಸಿಸಿಬಿ ಪೊಲೀಸರು ಖೆಡ್ಡಾಗೆ ಕೆಡವಿದ ಘಟನೆ ಹುಬ್ಬಳ್ಳಿ ನಗರದಲ್ಲಿ ನಡೆದಿದೆ.

ನಗರದ ಗಿರಣಿ ಚಾಳದ ಏಳು ಮಕ್ಕಳ ತಾಯಿ ದೇವಸ್ಥಾನದ ಬಳಿ ಪೊಲೀಸರು ಅಕ್ರಮ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿಯ ಚೇತನ್​ ದೇವೇಂದ್ರಪ್ಪ ಎಂದು ಗುರುತಿಸಲಾಗಿದ್ದು ಈತನಿಗೆ ಬರೋಬ್ಬರಿ 38 ಲಕ್ಷ ರೂಪಾಯಿ ಮೌಲ್ಯದ 804.1 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಧಾರವಾಡದ ಪೊಲೀಸ್​ ಕಮಿಷನರೇಟ್​ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಜನ್ಮದಿನದಂದು ಸೋಶಿಯಲ್​ ಮೀಡಿಯಾದಲ್ಲಿ ಬಿಗ್​ ಬಿ ಯಡವಟ್ಟು: ತಂದೆಯ ತಪ್ಪನ್ನು ತಿದ್ದಿದ ಪುತ್ರಿ ಶ್ವೇತಾ ಬಚ್ಛನ್​

ಹುಬ್ಬಳ್ಳಿಯ ಕೇಶ್ವಾಪುರ ನಿವಾಸಿಯಾಗಿರುವ ಬಂಧಿತ ಆರೋಪಿ ಚೇತನ್​ ದೇವೇಂದ್ರಪ್ಪ ಪ್ಯಾಂಟಿನ ಬೆಲ್ಟ್​ನಲ್ಲಿ ಚಿನ್ನವನ್ನು ಇಟ್ಟುಕೊಂಡಿದ್ದ. ಈತನನ್ನು ತಡೆದು ವಿಚಾರಣೆ ನಡೆಸಿದ ವೇಳೆ ಪೊಲೀಸರ ಎದುರು ಸತ್ಯವನ್ನು ಬಾಯ್ಬಿಟ್ಟಿದ್ದಾನೆ. ಪ್ರಕರಣ ಸಂಬಂಧ ಹುಬ್ಬಳ್ಳಿ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...