alex Certify ಜನ್ಮದಿನದಂದು ಸೋಶಿಯಲ್​ ಮೀಡಿಯಾದಲ್ಲಿ ಬಿಗ್​ ಬಿ ಯಡವಟ್ಟು: ತಂದೆಯ ತಪ್ಪನ್ನು ತಿದ್ದಿದ ಪುತ್ರಿ ಶ್ವೇತಾ ಬಚ್ಛನ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನ್ಮದಿನದಂದು ಸೋಶಿಯಲ್​ ಮೀಡಿಯಾದಲ್ಲಿ ಬಿಗ್​ ಬಿ ಯಡವಟ್ಟು: ತಂದೆಯ ತಪ್ಪನ್ನು ತಿದ್ದಿದ ಪುತ್ರಿ ಶ್ವೇತಾ ಬಚ್ಛನ್​

ಬಾಲಿವುಡ್​ ಹಿರಿಯ ನಟ ಅಮಿತಾಬ್​ ಬಚ್ಚನ್​​ ಇಂದು 79ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ತಮ್ಮ ಜನ್ಮ ದಿನಾಚರಣೆಯ ಪ್ರಯುಕ್ತ ಬಿಗ್​ ಬಿ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಶೇರ್​ ಮಾಡಿದ್ದಾರೆ. ನಡೆದುಕೊಂಡು ಹೋಗುತ್ತಿರುವ ಫೋಟೋವನ್ನು ಪೋಸ್ಟ್​ ಮಾಡಿರುವ ಅಮಿತಾಬ್​​ 80ನೇ ವರ್ಷಕ್ಕೆ ಕಾಲಿಡುತ್ತಿದ್ದೇನೆ ಎಂದು ಶೀರ್ಷಿಕೆ ನೀಡಿದ್ದರು. ಈ ಪೋಸ್ಟ್​ಗೆ ಕೂಡಲೇ ಕಮೆಂಟ್​ ಮಾಡಿದ ಅಮಿತಾಭ್​ ಪುತ್ರಿ ಶ್ವೇತಾ ಬಚ್ಚನ್​, ತಂದೆಗೆ ವಯಸ್ಸಿನ ಪಾಠ ಮಾಡಿದ್ದಾರೆ..!

ನವರಾತ್ರಿ ವಿಶೇಷ: ತರಕಾರಿ, ಹಣ್ಣು, ತೆಂಗಿನ ಕಾಯಿಯಿಂದಲೇ ಅಲಂಕಾರಗೊಳ್ತಾಳೆ ಈ ದೇವಿ

ಅಮಿತಾಬ್​ ಬಚ್ಚನ್​ ಕೆಲ ದಿನಗಳ ಹಿಂದಷ್ಟೇ ಬಾಲಿವುಡ್​​ಗೆ ಕಾಲಿಟ್ಟು 52 ವಸಂತಗಳನ್ನು ಪೂರೈಸಿದ್ದನ್ನು ಸಂಭ್ರಮಿಸಿದ್ದರು. ಅದೇ ರೀತಿ ತಮ್ಮ ಬರ್ತಡೇ ದಿನವೂ ಫೋಟೋ ಪೋಸ್ಟ್​ ಮಾಡಿರುವ ಅಮಿತಾಬ್​ ವಯಸ್ಸಿನ ಲೆಕ್ಕಾಚಾರದಲ್ಲಿ ಎಡವಿದ್ದಾರೆ.

ಅಮಿತಾಬ್​ ಬಚ್ಛನ್​ರ ಈ ಪೋಸ್ಟ್​​ಗೆ ಮೊಮ್ಮಗಳು ನವ್ಯಾ ನವೇಲಿ ನಂದಾ ನಮಸ್ಕಾರ ಮಾದರಿಯ ಎಮೋಜಿಯನ್ನು ಕಮೆಂಟ್​ನಲ್ಲಿ ಹಾಕಿದ್ದರೆ ಪುತ್ರಿ ಶ್ವೇತಾ ಇದು ನಿಮ್ಮ 79ನೇ ವರ್ಷದ ಬರ್ತಡೇ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...