alex Certify ಹುಬ್ಬಳ್ಳಿಯಲ್ಲಿ ನೇಹಾ ಪ್ರಕರಣ ಮಾಸುವ ಮೊದಲೇ ಮತ್ತೊಂದು ಪ್ರಕರಣ ಬೆಳಕಿಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಬ್ಬಳ್ಳಿಯಲ್ಲಿ ನೇಹಾ ಪ್ರಕರಣ ಮಾಸುವ ಮೊದಲೇ ಮತ್ತೊಂದು ಪ್ರಕರಣ ಬೆಳಕಿಗೆ

ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ ಮಾಸುವ ಮೊದಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಯುವತಿ ಮೇಲೆ ಮುಸ್ಲಿಂ ಯುವಕ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ.

ಹಿಂದೂ ಯುವತಿ ಮೇಲೆ ಅಫ್ತಾಬ್ ಎಂಬಾತ ಹಲ್ಲೆ ನಡೆಸಿದ್ದಾನೆ. ಕೆಲವು ದಿನಗಳಿಂದ ಆತನೊಂದಿಗೆ ಯುವತಿ ಸ್ನೇಹದಿಂದ ಇದ್ದಳು. ಈ ವೇಳೆ ಯುವತಿಗೆ ಕೆಲವು ಗಿಫ್ಟ್ ಗಳನ್ನು ಅಫ್ತಾಬ್ ನೀಡಿದ್ದ. ಅವುಗಳನ್ನು ವಾಪಸ್ ಮಾಡಿದ್ದಕ್ಕೆ ಗಿಫ್ಟ್ ಗಳನ್ನು ಸುಟ್ಟು ಹಾಕಿ ಹಲ್ಲೆ ಮಾಡಿದ್ದಾನೆ ಎನ್ನಲಾಗಿದ್ದು, ಹಲ್ಲೆ ಪ್ರಕರಣ ಕೇಶ್ವಾಪುರ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಹಣ್ಣಿನ ಅಂಗಡಿ ವ್ಯಾಪಾರಿ ಅಫ್ತಾಬ್ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹುಬ್ಬಳ್ಳಿ ನಗರದಲ್ಲಿ ಹಲ್ಲೆಗೊಳಗಾದ ಸಂತ್ರಸ್ತ ಯುವತಿ ತಿಳಿಸಿದ್ದಾರೆ. ಎರಡು ವರ್ಷಗಳಿಂದ ಪರಿಚಿತನಾಗಿದ್ದ ಅಫ್ತಾಬ್ ಗಿಫ್ಟ್ ಗಳನ್ನು ಕೊಟ್ಟಿದ್ದ. ಆತ ಹೇಳಿದಂತೆ ಭೇಟಿಯಾಗಿ ಗಿಫ್ಟ್ ಗಳನ್ನು ವಾಪಸ್ ಮಾಡಿದ್ದಕ್ಕೆ ಅವುಗಳನ್ನು ಸುಟ್ಟು ಹಲ್ಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...