alex Certify ಉದ್ಯೋಗಾಕಾಂಕ್ಷಿಗಳಿಗೆ ಗುಡ್​ ನ್ಯೂಸ್​: FSSAIನಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಾಕಾಂಕ್ಷಿಗಳಿಗೆ ಗುಡ್​ ನ್ಯೂಸ್​: FSSAIನಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ನಿರ್ದೇಶಕ, ಜಂಟಿ ನಿರ್ದೇಶಕ, ಉಪ ನಿರ್ದೇಶಕ, ಸಹಾಯಕ ನಿರ್ದೇಶಕ, ಹಿರಿಯ ಮ್ಯಾನೇಜರ್​, ಮ್ಯಾನೇಜರ್​, ಉಪ ವ್ಯವಸ್ಥಾಪಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಹುದ್ದೆಗಳಿಗೆ ಅರ್ಜಿ ಆಹ್ವಾನ ಕುರಿತಂತೆ ವಿವರಣಾತ್ಮಕ ಮಾಹಿತಿಗಳನ್ನು ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರದ ಅಧಿಕೃತ ವೆಬ್​ಸೈಟ್​ನಲ್ಲಿ ಮಾಹಿತಿ ನೀಡಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ವೆಬ್​ಸೈಟ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ

ನಿರ್ದೇಶಕ( ತಾಂತ್ರಿಕ) – 02 ಹುದ್ದೆ

ಜಂಟಿ ನಿರ್ದೇಶಕ (ತಾಂತ್ರಿಕ, ಕಾನೂನು, ನಿರ್ವಹಣೆ ಮತ್ತು ಹಣಕಾಸು) – 03

ಸೀನಿಯರ್​ ಮ್ಯಾನೇಜರ್​ – 01

ಸೀನಿಯರ್​ ಮ್ಯಾನೇಜರ್​ (ಐಟಿ) – 01

ಉಪ ನಿರ್ದೇಶಕ ( ತಾಂತ್ರಿಕ, ಕಾನೂನು, ನಿರ್ವಹಣೆ ಹಾಗೂ ಹಣಕಾಸು) – 07

ಮ್ಯಾನೇಜರ್​ – 02

ಮ್ಯಾನೇಜರ್​ (ಐಟಿ) – 01

ಸಹಾಯಕ ನಿರ್ದೇಶಕ (ತಾಂತ್ರಿಕ) – 11

ಸಹಾಯಕ ನಿರ್ದೇಶಕ (ಓಎಲ್​) – 01

ಉಪ ವ್ಯವಸ್ಥಾಪಕ – 04

ಉಪ ವ್ಯವಸ್ಥಾಪಕ (ಐಟಿ) – 02

ಆಡಳಿತಾಧಿಕಾರಿ – 10

ಸಹಾಯಕ – 02

ಸಿಬ್ಬಂದಿ ಕಾರ್ ಡ್ರೈವರ್ (ಸಾಮಾನ್ಯ ದರ್ಜೆ) – 02

ಅರ್ಜಿ ಸಲ್ಲಿಸುವ ವಿಧಾನ :

ಎಫ್​ಎಸ್​ಎಸ್​ಎಐನ ಅಧಿಕೃತ ವೆಬ್​ಸೈಟ್​ ಮೂಲಕವೇ ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಇದನ್ನು ಬಿಟ್ಟು ಹುದ್ದೆಗೆ ಅರ್ಜಿ ಸಲ್ಲಿಸಲು ಇನ್ಯಾವುದೇ ಮಾರ್ಗಗಳು ಇರುವುದಿಲ್ಲ. ಅರ್ಜಿದಾರರು ಆನ್​​ಲೈನ್ ಅಪ್ಲಿಕೇಶನ್​ನ ಹಾರ್ಡ್ ಕಾಪಿಯನ್ನು ಎಫ್​ಎಸ್​ಎಸ್​ಎಐಗೆ ವರ್ಗಾವಣೆ ಮಾಡಬೇಕು.

ಅರ್ಜಿ ಸಲ್ಲಿಸಲು ನವೆಂಬರ್​ 30 ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳ ವಿದ್ಯಾರ್ಹತೆ, ವಯಸ್ಸಿನ ಮಿತಿ, ಅನುಭವ ಈ ಎಲ್ಲರದ ಬಗ್ಗೆ ವಿವರಗಳನ್ನು ಎಫ್ಎಸ್​ಎಸ್​ಎಐನ ಅಧಿಕೃತ ವೆಬ್​ಸೈಟ್​ (www.fssai.gov.in) ನಲ್ಲಿ ನೀಡಲಾಗಿದ್ದು ಆಸಕ್ತ ಅಭ್ಯರ್ಥಿಗಳು ಈ ಲಿಂಕ್​ನ ಮೂಲಕ ಹುದ್ದೆಯ ಸಂಪೂರ್ಣ ವಿವರಣೆಯನ್ನು ಪಡೆಯಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...