alex Certify ಮುದ್ರಿತ ಕಾಗದಗಳಲ್ಲಿ ಕಟ್ಟಿ ಕೊಟ್ಟ ಆಹಾರ ತಿನ್ನುವುದರಿಂದ ಗಂಭೀರ ಆರೋಗ್ಯ ಸಮಸ್ಯೆ: ವ್ಯಾಪಾರಿಗಳಿಗೆ FSSAI ಮಹತ್ವದ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುದ್ರಿತ ಕಾಗದಗಳಲ್ಲಿ ಕಟ್ಟಿ ಕೊಟ್ಟ ಆಹಾರ ತಿನ್ನುವುದರಿಂದ ಗಂಭೀರ ಆರೋಗ್ಯ ಸಮಸ್ಯೆ: ವ್ಯಾಪಾರಿಗಳಿಗೆ FSSAI ಮಹತ್ವದ ಸೂಚನೆ

ನವದೆಹಲಿ: ಮುದ್ರಿತ ಕಾಗದಗಳಲ್ಲಿ ಆಹಾರ ಕಟ್ಟಿಕೊಡುವುದು, ಸಂಗ್ರಹಿಸುವುದನ್ನು ಕೂಡಲೇ ನಿಲ್ಲಿಸುವಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(FSSAI) ಮಾರಾಟಗಾರರಿಗೆ ಸೂಚನೆ ನೀಡಿದೆ.

ಮುದ್ರಿತ ಕಾಗದಗಳಲ್ಲಿ ಆಹಾರ ಕೊಡುವುದು, ಸಂಗ್ರಹಿಸುವುದರಿಂದ ಅನೇಕ ಜನರಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಹೀಗಾಗಿ ಮಾರಾಟಗಾರರು ಆಹಾರವನ್ನು ಮುದ್ರಿತ ಕಾಗದಗಳಲ್ಲಿ ಕೊಡಬಾರದು. ಇದನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಇಲ್ಲವಾದಲ್ಲಿ ಭಾರಿ ದಂಡ ವಿಧಿಸುವುದಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಮಲಾ ವರ್ಧನ ರಾವ್ ಹೇಳಿದ್ದಾರೆ.

ನಿಯಮಾವಳಿಯನ್ನು ಜಾರಿ ಮಾಡಿದ ಬಗ್ಗೆ FSSAI ಮತ್ತು ರಾಜ್ಯ ಆಹಾರ ಸುರಕ್ಷತೆ ಸಕ್ಷಮ ಪ್ರಾಧಿಕಾರಗಳು ಜಂಟಿಯಾಗಿ ನಿಗಾ ವಹಿಸಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮುದ್ರಣಕ್ಕೆ ಬಳಸುವ ಶಾಯಿಗಳಲ್ಲಿ ಸೀಸ ಮತ್ತು ಇನ್ನಿತರೆ ರಾಸಾಯನಿಕಗಳು ಇರುವುದರಿಂದ ಆಹಾರಗಳ ಮೂಲಕ ಮಾನವನ ದೇಹವನ್ನು ಸೇರುತ್ತವೆ. ಇದರಿಂದ ಗಂಭೀರ ಅನಾರೋಗ್ಯ ಸಮಸ್ಯೆ ಉಂಟಾಗುತ್ತದೆ. ಆಹಾರದಲ್ಲಿನ ಎಣ್ಣೆಯ ಅಂಶ ಮುದ್ರಿತ ಕಾಗದಗಳಲ್ಲಿ ಬಳಸಿದ ಶಾಯಿ ಜೊತೆಗೆ ಸೇರಿ ರಾಸಾಯನಿಕಗಳನ್ನು ಇರುವ ಸಾಮರ್ಥ್ಯ ಹೊಂದಿರುವುದರಿಂದ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ

ಹೀಗಾಗಿ ಆಹಾರವನ್ನು ಮುದ್ರಿತ ಕಾಗದಗಳಲ್ಲಿ ಕೊಡಬಾರದು. ಆಹಾರ ಹಾಕಿ ಕೊಡಲು ಪತ್ರಿಕೆ ಬಳಸಬಾರದು. ಆರೋಗ್ಯಕರವಾದ ಇತರೆ ಉತ್ಪನ್ನಗಳನ್ನು ಬಳಸಬೇಕು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...