alex Certify 6 ವರ್ಷ ಬಾಲಕನ ದಿನಚರಿಯ ಟೈಂ ಟೇಬಲ್ ವೈರಲ್; ವೇಳಾಪಟ್ಟಿಯಲ್ಲಿ ಏನೇನಿದೆ ಗೊತ್ತಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

6 ವರ್ಷ ಬಾಲಕನ ದಿನಚರಿಯ ಟೈಂ ಟೇಬಲ್ ವೈರಲ್; ವೇಳಾಪಟ್ಟಿಯಲ್ಲಿ ಏನೇನಿದೆ ಗೊತ್ತಾ ?

ಬಾಲ್ಯವೆಂಬುದು ಪ್ರತಿಯೊಬ್ಬರಿಗೂ ವಿಶಿಷ್ಟವಾದ ಅನುಭವ. ಮುಗ್ಧತೆ ವಯಸ್ಸಿನ ಈ ಹಂತ ಮರಳಿ ಪಡೆಯಲಾಗದ ಅನುಭವ ನೀಡುತ್ತದೆ. ಕಡಿವಾಣವಿಲ್ಲದ ಆಟ ಮತ್ತು ವಿನೋದವನ್ನ ಅನುಭವಿಸುವ ಈ ವಯಸ್ಸಲ್ಲಿ ಯಾವುದೇ ಜವಾಬ್ದಾರಿಯ ತಲೆನೋವಿಲ್ಲದೇ ಆನಂದಿಸಬಹುದು.

ಆದರೆ ಇತ್ತೀಚೆಗೆ ಪುಟ್ಟ ವಯಸ್ಸಿನಲ್ಲೇ ಓದು ಮತ್ತು ಹೋಂವರ್ಕ್ ನ ಒತ್ತಡ ಮಕ್ಕಳ ಮೇಲೆ ಹಲವು ಪರಿಣಾಮ ಬೀರುತ್ತದೆ. ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು 6 ವರ್ಷ ವಯಸ್ಸಿನ ಮಗುವಿನ ಟೈಂ ಟೇಬಲ್ ಹಂಚಿಕೊಂಡಿದ್ದು ಅದು ನೆಟ್ಟಿಗರಲ್ಲಿ ನಗು ಮೂಡಿಸಿದೆ.

6 ವರ್ಷದ ಬಾಲಕನ ದಿನಚರಿಯನ್ನು ವೇಳಾಪಟ್ಟಿಯಲ್ಲಿ ಉತ್ತಮವಾಗಿ ವರ್ಗೀಕರಿಸಿದ್ದು ಸಮಯವನ್ನು ನಿರ್ವಹಿಸುವ ಪ್ರಯತ್ನವು ಶ್ಲಾಘನೀಯವಾಗಿದೆ. ಅಧ್ಯಯನದ ಸಮಯವನ್ನು ಕೇವಲ 15 ನಿಮಿಷಗಳು ಎಂದು ನಮೂದಿಸಿದರೆ, ಗಂಟೆಗಳಷ್ಟು ಕಾಲ ಆಟವಾಡಲು ಸಮಯ ಮೀಸಲಿಡಲಾಗಿದೆ.

ಅಜ್ಜಿಯರೊಂದಿಗೆ ಮಾವಿನ ಹಣ್ಣುಗಳನ್ನು ತಿನ್ನುವುದು , ಕೆಂಪು ಕಾರ್ ನೊಂದಿಗೆ ಆಡುವುದು ಸೇರಿದಂತೆ ಟಿವಿ ನೋಡುವ ಸಮಯವೂ ಟೈಂ ಟೇಬಲ್ ನಲ್ಲಿದೆ. ಈ ಪೋಸ್ಟ್ ಸಾಕಷ್ಟು ವೈರಲ್ ಆಗಿದ್ದು, ಕೆಲವರು ಕಾಮೆಂಟ್‌ಗಳ ವಿಭಾಗದಲ್ಲಿ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...