alex Certify ಹಾಸಿಗೆ ಮೇಲೆ ಮಲಗಿರುವಾಗಲೇ ಕರಗಿಸಬಹುದು ದೇಹದ ಕೊಬ್ಬು; ಇಲ್ಲಿದೆ ತೂಕ ಕಡಿಮೆ ಮಾಡಲು ಟಿಪ್ಸ್‌…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಸಿಗೆ ಮೇಲೆ ಮಲಗಿರುವಾಗಲೇ ಕರಗಿಸಬಹುದು ದೇಹದ ಕೊಬ್ಬು; ಇಲ್ಲಿದೆ ತೂಕ ಕಡಿಮೆ ಮಾಡಲು ಟಿಪ್ಸ್‌…!

ಅತಿಯಾದ ತೂಕ ಮತ್ತು ಬೊಜ್ಜು ಅಪಾಯಕಾರಿ ಅನ್ನೋದು ನಮಗೆಲ್ಲಾ ತಿಳಿದಿದೆ. ದೇಹದಲ್ಲಿ ಸಂಗ್ರಹವಾದ ಕೊಬ್ಬು ವಯಸ್ಸಾದಂತೆ ಅನೇಕ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಅನೇಕರು ತೂಕ ಇಳಿಸಿಕೊಳ್ಳಲು ಜಿಮ್‌ನಲ್ಲಿ ಬೆವರಿಳಿಸುತ್ತಾರೆ. ಕೆಲವರು ಆರೋಗ್ಯಕರ ಅಭ್ಯಾಸಗಳ ಸಹಾಯದಿಂದ ತಮ್ಮ ತೂಕವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಪೌಷ್ಟಿಕತಜ್ಞರ ಪ್ರಕಾರ ಕೆಲವು ಅಭ್ಯಾಸಗಳನ್ನು ಅಳವಡಿಸಿಕೊಂಡರೆ ಹಾಸಿಗೆಯ ಮೇಲೆ ಮಲಗಿರುವಾಗಲೂ ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಕರಗಿಸಬಹುದು.

ಆಳವಾದ ನಿದ್ರೆ

ಆಳವಾದ ನಿದ್ರೆಯ ಸಮಯದಲ್ಲಿ ದೇಹವು ಕ್ಯಾಲೊರಿಗಳನ್ನು ವೇಗವಾಗಿ ಸುಡುತ್ತದೆ. ಪ್ರತಿದಿನ 7 ರಿಂದ 8 ಗಂಟೆಗಳ ಉತ್ತಮ ನಿದ್ರೆ ಈ ಪ್ರಕ್ರಿಯೆಯನ್ನು ಹೆಚ್ಚಿಸುತ್ತದೆ. ಇದಕ್ಕಾಗಿ ಮಲಗುವ ಸಮಯವನ್ನು ದಿನಚರಿ ಮಾಡಿಕೊಳ್ಳಬೇಕು, ಪ್ರತಿದಿನ ಅದನ್ನು ಅನುಸರಿಸಬೇಕು. ಮಲಗುವ ಸುಮಾರು ಎರಡು ಗಂಟೆಗಳ ಮೊದಲು ಗ್ಯಾಜೆಟ್‌ಗಳನ್ನು ಸ್ವಿಚ್ ಆಫ್ ಮಾಡಬೇಕು. ಮಲಗುವ ಕೋಣೆಯನ್ನು ತಂಪಾಗಿರಿಸುವುದು ಆಳವಾದ ನಿದ್ರೆಗೆ ತುಂಬಾ ಸಹಾಯಕ.

ಪ್ರತಿದಿನ ಒಂದೇ ಸಮಯದಲ್ಲಿ ಮಲಗಿಕೊಳ್ಳಿ

ಪ್ರತಿದಿನ ಒಂದೇ ಸಮಯದಲ್ಲಿ ಮಲಗುವುದು ಮತ್ತು ಏಳುವುದು ಮಾಡುವುದರಿಂದ ದೇಹವು ಕೊಬ್ಬನ್ನು ಸುಡುವ ಹಾರ್ಮೋನ್‌ಗಳನ್ನು ಉತ್ತಮ ರೀತಿಯಲ್ಲಿ ಬಳಸಲು ಪ್ರಾರಂಭಿಸುತ್ತದೆ. ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ನಿಯಂತ್ರಿಸುತ್ತದೆ.

ರಾತ್ರಿಯ ಊಟ ಹೀಗಿರಲಿ

ಮಲಗುವ 2 ರಿಂದ 3 ಗಂಟೆಗಳ ಮೊದಲು ಆಹಾರವನ್ನು ಸೇವಿಸಿ. ಏಕೆಂದರೆ ಊಟವಾದ ತಕ್ಷಣ ಮಲಗುವುದರಿಂದ ದೇಹವು ಕೊಬ್ಬನ್ನು ಸುಡುವ ಕ್ರಮಕ್ಕೆ ಬರುವುದನ್ನು ತಡೆಯುತ್ತದೆ. ಇದಲ್ಲದೆ ರಾತ್ರಿಯ ಊಟದಲ್ಲಿ ಪ್ರೋಟೀನ್ ಪ್ರಮಾಣ ಸಾಕಷ್ಟಿರಬೇಕು. ಇದು ಚಯಾಪಚಯ ದರವನ್ನು ಹೆಚ್ಚಿಸುತ್ತದೆ. ಬೇಳೆಕಾಳುಗಳು, ಚಪಾತಿ, ಚೀಸ್, ಮೊಟ್ಟೆ ಇವುಗಳನ್ನು ಸೇವಿಸುವುದು ಸೂಕ್ತ.

ಇಂಟರ್‌ಮಿಟೆಂಟ್‌ ಫಾಸ್ಟಿಂಗ್‌

ಇಂಟರ್‌ಮಿಟೆಂಟ್‌ ಫಾಸ್ಟಿಂಗ್‌ ನಿದ್ರೆಯ ಸಮಯದಲ್ಲಿ ಕೊಬ್ಬನ್ನು ವೇಗವಾಗಿ ಸುಡುತ್ತದೆ. 12 ಗಂಟೆಗಳ ಕಾಲ ಉಪವಾಸವಿರಬೇಕು. ಅದನ್ನು 14 ರಿಂದ 16 ಗಂಟೆಗಳವರೆಗೆ ಹೆಚ್ಚಿಸಬಹುದು. ಈ ರೀತಿ ಮಾಡುವುದರಿಂದ ದೇಹವು ಈಗಾಗಲೇ ಸಂಗ್ರಹವಾಗಿರುವ ಕೊಬ್ಬನ್ನು ಶಕ್ತಿಗಾಗಿ ಬಳಸಲು ಪ್ರಾರಂಭಿಸುತ್ತದೆ, ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

ಪವರ್‌ ಟ್ರೇನಿಂಗ್‌ ಅಗತ್ಯ

ದಿನದಲ್ಲಿ ಪವರ್‌ ಟ್ರೇನಿಂಗ್‌ ಮಾಡುವುದರಿಂದ ಸ್ನಾಯುವಿನ ದ್ರವ್ಯರಾಶಿಯನ್ನು ಹೆಚ್ಚಿಸಬಹುದು. ಇದು ಚಯಾಪಚಯವನ್ನು ಹೆಚ್ಚಿಸುತ್ತದೆ, ನಿದ್ರೆಯ ಸಮಯದಲ್ಲಿ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ಜಿಮ್‌ಗೆ ಹೋಗಲು ಸಾಧ್ಯವಾಗದಿದ್ದರೆ ಮನೆಯಲ್ಲಿ ಪುಶ್‌ಅಪ್‌, ವೇಯ್ಟ್‌ ಲಿಫ್ಟಿಂಗ್‌ನಂತಹ ವ್ಯಾಯಾಮಗಳನ್ನು ಮಾಡಬಹುದು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...