alex Certify ಮಗು ಹುಟ್ಟುತ್ತಿದ್ದಂತೆ ಈ ದೇಶದಲ್ಲಿ ಏನ್ಮಾಡ್ತಾರೆ ಗೊತ್ತಾ ? ಅಚ್ಚರಿಗೊಳಿಸುತ್ತೆ ಈ ವಿಷಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗು ಹುಟ್ಟುತ್ತಿದ್ದಂತೆ ಈ ದೇಶದಲ್ಲಿ ಏನ್ಮಾಡ್ತಾರೆ ಗೊತ್ತಾ ? ಅಚ್ಚರಿಗೊಳಿಸುತ್ತೆ ಈ ವಿಷಯ

These baby name trends will be most popular in 2019ನವಜಾತ ಶಿಶುಗಳನ್ನು ನೋಡಿಕೊಳ್ಳುವ ರೀತಿ ದೇಶದಿಂದ ದೇಶಕ್ಕೆ ವಿಭಿನ್ನವಾಗಿರುತ್ತದೆ. ಅಂಥ ಕೆಲವು ದೇಶಗಳಲ್ಲಿ ‌ಮಕ್ಕಳನ್ನು ನೋಡಿಕೊಳ್ಳುವ ಪರಿ ಇಂತಿದೆ.

ಆಸ್ಟ್ರೇಲಿಯಾ: ಮಗು ಹುಟ್ಟುತ್ತಿದ್ದಂತೆ ನೀರಲ್ಲಿ‌ ಮುಳುಗಿಸುತ್ತಾರೆ.

ಅರ್ಮೆನಿಯಾ: ನವಜಾತ ಶಿಶುವನ್ನು ಆರಂಭದ 40 ದಿನ ಮನೆಯಿಂದ ಹೊರಗೆ ಕರೆದೊಯ್ಯುವುದೇ ಇಲ್ಲ.

ಗ್ರೀಸ್: ಒಂದು ಅವಧಿವರೆಗೆ ಮಗುವಿಗೆ ಕನ್ನಡಿ ನೋಡಲು ಬಿಡುವುದಿಲ್ಲ. ಕೆಲ ಕಾಲದವರೆಗೆ ತಾಯಿ, ಮಗುವಿನ‌ ಬಟ್ಟೆ ಒಗೆಯುವುದಿಲ್ಲ.

ಇಟಲಿ: ಮಗುವಿನ ಬಗ್ಗೆ ಇತರರ ಮೆಚ್ಚುಗೆಗೂ ಒಂದು ನಿಯಂತ್ರಣ ಇದೆ. ಕೆಟ್ಟದೃಷ್ಟಿ ಬೀರದೆ ಹೇಳ್ತಿದೀವಿ ಅಂತ ಮೆಚ್ಚುಗೆ ಸೂಚಿಸಬೇಕಂತ ತಾಯಂದಿರು ಬಯಸುತ್ತಾರೆ.

ಚೀನಾ: ಮಗುವಿಗೆ ಒಂದು ವರ್ಷ ಆಗುವ ಮುಂಚೆಯೇ ಕ್ಷುಲ್ಲಕ ತರಬೇತಿ ನೀಡುತ್ತಾರೆ.

ಐಸ್ಲ್ಯಾಂಡ್: ಮಗುವನ್ನು ಹೊರಗೆ ಮಲಗಿಸಿದರೆ ಆಯಸ್ಸು ಹೆಚ್ಚುತ್ತದೆ ಎಂದು ಹೊರಗೆ ಮಲಗಿಸುವ ಆಚರಣೆ ಇದೆ.

ಸ್ಪೇನ್: ಕಾರ್ಪಸ್ ಕ್ರಿಸ್ಟಿ ಹಬ್ಬದ ಸಂದರ್ಭದಲ್ಲಿ ಹುಟ್ಟಿದ ಮಕ್ಕಳನ್ನು ಸಾಲಾಗಿ ಬೀದಿಯಲ್ಲಿ ಮಲಗಿಸಲಾಗುತ್ತದೆ. ಬಳಿಕ ಒಬ್ಬ ಭೂತದ ವೇಷದಲ್ಲಿ ಈ ಮಕ್ಕಳ ಮೇಲೆ ಹಾರುತ್ತಾನೆ. ಅದನ್ನೇ ಆಶೀರ್ವಾದ ಎಂದು ಭಾವಿಸಲಾಗುತ್ತದೆ.

ಬ್ರೆಜಿಲ್: ಇಲ್ಲಿ ಮಕ್ಕಳನ್ನು ಚಿಕ್ಕವಯಸ್ಸಿನಲ್ಲೇ ಆಂತರಿಕ ಸೌಂದರ್ಯಕ್ಕೆ ಒತ್ತು ಕೊಡುವಂತೆ ಬೆಳೆಸಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...