alex Certify ಮಾತು ಮಾತಿಗೂ ಮಗು ರೊಚ್ಚಿಗೇಳುತ್ತಿದೆಯೇ….? ಮಕ್ಕಳ ವರ್ತನೆ ಬದಲಾಯಿಸಲು ಸುಲಭದ ಟಿಪ್ಸ್‌….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾತು ಮಾತಿಗೂ ಮಗು ರೊಚ್ಚಿಗೇಳುತ್ತಿದೆಯೇ….? ಮಕ್ಕಳ ವರ್ತನೆ ಬದಲಾಯಿಸಲು ಸುಲಭದ ಟಿಪ್ಸ್‌….!

ಮಕ್ಕಳಲ್ಲಿ ಕೆಲವೊಮ್ಮೆ ಕೋಪ ಮತ್ತು ಆಕ್ರಮಣಶೀಲತೆ ಕಾಣಿಸಿಕೊಳ್ಳುವುದು ಸಹಜ. ಆದರೆ ಮಾತು ಮಾತಿಗೂ ಕೋಪಗೊಳ್ಳುವುದು, ರೊಚ್ಚಿಗೇಳುವುದು ಕಳವಳಕಾರಿ ಸಂಗತಿ. ಏಕೆಂದರೆ ಈ ವಯಸ್ಸಿನಲ್ಲಿ ಮಕ್ಕಳಿಗೆ ತಮ್ಮ ಭಾವನೆಗಳನ್ನು ಸರಿಯಾಗಿ ವ್ಯಕ್ತಪಡಿಸಲು ಕಲಿಸದಿದ್ದರೆ ನಂತರ ಅವರ ನಡವಳಿಕೆಯು ಇನ್ನಷ್ಟು ಆಕ್ರಮಣಕಾರಿಯಾಗಬಹುದು.

ಮಗು ಚಿಕ್ಕ ಪುಟ್ಟ ವಿಷಯಕ್ಕೆಲ್ಲ ವಿಪರೀತವಾಗಿ ವರ್ತಿಸುತ್ತಿದ್ದರೆ ಅದನ್ನು ಸರಿಪಡಿಸಲು ಪೋಷಕರು ಕೆಲವೊಂದು ತಂತ್ರಗಳನ್ನು ಅಳವಡಿಸಿಕೊಳ್ಳಬೇಕು. ಅದನ್ನು ಕಡಿಮೆ ಮಾಡಲು ಮತ್ತು ಸಕಾರಾತ್ಮಕ ನಡವಳಿಕೆಯನ್ನು ಉತ್ತೇಜಿಸಲು ಸುಲಭ ವಿಧಾನಗಳಿವೆ.

ಶಾಂತವಾಗಿರಿ ಮತ್ತು ಅರ್ಥಮಾಡಿಕೊಳ್ಳಿ

ಮಕ್ಕಳು ಕೋಪಗೊಂಡಾಗ ಕಿರುಚುತ್ತಾರೆ ಅಥವಾ ವಸ್ತುಗಳನ್ನು ಎಸೆಯುತ್ತಾರೆ. ಈ ಸಮಯದಲ್ಲಿ ಪೋಷಕರು ಕೋಪಗೊಳ್ಳುವುದು ಅಥವಾ ಅವರನ್ನು ನಿಂದಿಸುವುದು ಸರಿಯಲ್ಲ. ಶಾಂತವಾಗಿರಿ, ಮಗುವಿಗೆ ಶಾಂತವಾಗಲು ಸಮಯವನ್ನು ನೀಡಿ. ನಂತರ ಮಗು ಏಕೆ ಸಿಟ್ಟಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಅವರ ಭಾವನೆಗಳನ್ನು ಗುರುತಿಸಿ ಮತ್ತು ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡಿ.

ಸಕಾರಾತ್ಮಕ ನಡವಳಿಕೆಯನ್ನು ಉತ್ತೇಜಿಸಿ

ಮಕ್ಕಳು ಚೆನ್ನಾಗಿ ವರ್ತಿಸಿದಾಗ ಅವರನ್ನು ಹೊಗಳಿ. ಅವರ ಉತ್ತಮ ನಡವಳಿಕೆಯನ್ನು ನೀವು ಇಷ್ಟಪಟ್ಟಿದ್ದೀರಿ ಎಂದು ಹೇಳಿ. ಇದು ಅವರಲ್ಲಿ ಒಳ್ಳೆಯ ಭಾವನೆ ಮೂಡಿಸುತ್ತದೆ ಮತ್ತು ಉತ್ತಮವಾಗಿ ವರ್ತಿಸಲು ಪ್ರೇರೇಪಿಸುತ್ತದೆ.

ಮಕ್ಕಳು ತಮ್ಮ ಸುತ್ತಮುತ್ತಲಿನ ಜನರನ್ನು ಗಮನಿಸಿ ಕಲಿಯುತ್ತಾರೆ. ಆದ್ದರಿಂದ ಪೋಷಕರು ಮೊದಲು ತಮ್ಮ ಕೋಪವನ್ನು ನಿಯಂತ್ರಿಸಲು ಕಲಿಯಬೇಕು. ನೀವೇ ಕೋಪದಿಂದ ಮಾತನಾಡಿದರೆ ಅಥವಾ ವಸ್ತುಗಳನ್ನು ಎಸೆದರೆ ಮಕ್ಕಳು ಸಹ ಅದನ್ನೇ ಕಲಿಯುತ್ತಾರೆ.

ತಾಳ್ಮೆಯಿಂದಿರಿ

ಮಕ್ಕಳ ವರ್ತನೆಯನ್ನು ಬದಲಾಯಿಸಲು ಸಮಯ ಬೇಕು. ಆದ್ದರಿಂದ ತಾಳ್ಮೆಯಿಂದಿರಿ ಮತ್ತು ಪ್ರಯತ್ನವನ್ನು ಮುಂದುವರಿಸಿ. ಮೇಲೆ ತಿಳಿಸಿದ ಸಲಹೆಗಳನ್ನು ನಿಯಮಿತವಾಗಿ ಅಳವಡಿಸಿಕೊಳ್ಳಿ. ಕ್ರಮೇಣ ನಿಮ್ಮ ಮಗುವಿನ ನಡವಳಿಕೆಯಲ್ಲಿ ಧನಾತ್ಮಕ ಬದಲಾವಣೆಗಳನ್ನು ಕಾಣುತ್ತೀರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...