alex Certify ಬಾಯಿ ಚಪ್ಪರಿಸಿಕೊಂಡು ಸವಿಯಿರಿ ಎಳನೀರಿನ ಪಾಯಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಯಿ ಚಪ್ಪರಿಸಿಕೊಂಡು ಸವಿಯಿರಿ ಎಳನೀರಿನ ಪಾಯಸ

Image result for ಎಳನೀರು ಪಾಯಸ

ಶ್ಯಾವಿಗೆ ಪಾಯಸ, ಹೆಸರುಬೇಳೆ ಪಾಯಸ ಮಾಡಿಕೊಂಡು ಆವಾಗವಾಗ ಸವಿಯುತ್ತಾ ಇರುತ್ತೇವೆ. ಒಮ್ಮೆ ಮನೆಯಲ್ಲಿ ಈ ಎಳನೀರು ಪಾಯಸವನ್ನು ಮಾಡಿಕೊಂಡು ಸವಿಯಿರಿ.

ಮಾಡುವುದಕ್ಕೂ ಸುಲಭ ಹಾಗೂ ತಿನ್ನುವುದಕ್ಕೂ ರುಚಿಕರವಾಗಿರುತ್ತದೆ. ಮಾಡುವ ವಿಧಾನ ಇಲ್ಲಿದೆ ನೋಡಿ.

ಬೇಕಾಗುವ ಸಾಮಾಗ್ರಿಗಳು:
ಹಾಲು-2 ಕಪ್, ಎಳನೀರು-1/2 ಕಪ್, ಎಳನೀರಿನ ಕಾಯಿ, , ತೆಂಗಿನಕಾಯಿ ಹಾಲು-3/4 ಕಪ್, ಸಕ್ಕರೆ-1/4 ಕಪ್, ಏಲಕ್ಕಿ ಪುಡಿ-1/4 ಟೀ ಸ್ಪೂನ್.

ಮಾಡುವ ವಿಧಾನ:

ಎರಡು ಕಪ್ ಹಾಲನ್ನು 1 ½ ಕಪ್ ಆಗುವಷ್ಟು ಕಾಯಿಸಿ. ಇದಕ್ಕೆ ¼ ಕಪ್ ಸಕ್ಕರೆ ಸೇರಿಸಿ. ಇದನ್ನು ತಣ್ಣಗಾಗುವುದಕ್ಕೆ ಬಿಡಿ. ¾ ಕಪ್ ಎಳನೀರಿನ ಕಾಯಿಗೆ ½ ಕಪ್ ಎಳನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.

ನಂತರ ತೆಂಗಿನಕಾಯಿ ತುರಿಯಿಂದ ಹಾಲು ತೆಗೆದುಕೊಳ್ಳಿ. ಇವಿಷ್ಟನ್ನು ತಣ್ಣಗಾಗಿಸಿದ ಹಾಲಿಗೆ ಸೇರಿಸಿ. 5 ಗಂಟೆ ಹೊತ್ತು ಇದನ್ನು ಫ್ರಿಡ್ಜ್ ನಲ್ಲಿಡಿ. ನಂತರ ರುಚಿಕರವಾದ ಎಳನೀರು ಪಾಯಸ ತಿನ್ನಲು ರೆಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...