alex Certify ಪರ್ಫೆಕ್ಟ್ ʼಬೇಕರ್‌ʼ ನೀವಾಗಬೇಕಾ…? ಹಾಗಿದ್ದರೆ ಈ ಟ್ರಿಕ್ಸ್ ಬಳಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರ್ಫೆಕ್ಟ್ ʼಬೇಕರ್‌ʼ ನೀವಾಗಬೇಕಾ…? ಹಾಗಿದ್ದರೆ ಈ ಟ್ರಿಕ್ಸ್ ಬಳಸಿ

ಕೇಕ್‌, ಕುಕೀಸ್‌, ಬಿಸ್ಕಿಟ್‌ ಇತ್ಯಾದಿಗಳನ್ನು ತಯಾರಿಸಬೇಕಿದ್ದರೆ ಬೇಕಿಂಗ್‌ ಅಡುಗೆ ವಿಧಾನದ ಬಗ್ಗೆ ಹೆಚ್ಚಿನ ಜ್ಞಾನವಿರಬೇಕು. ಇದರ ಬಗ್ಗೆ ಕೆಲವು ವಿಷಯಗಳನ್ನು ತಿಳಿದುಕೊಂಡರೆ ನೀವು ಪರ್ಫೆಕ್ಟ್ ಬೇಕರ್‌ ಆಗಬಹುದು. ಹೇಗೆ ಅಂತೀರಾ.

* ಓವನ್‌, ಮೈಕ್ರೊವೇವ್‌ ಇತ್ಯಾದಿಗಳಲ್ಲಿ ಬೇಯಿಸುವ ಖಾದ್ಯಗಳಿಗೆ ಬಳಸುವ ಸಾಮಗ್ರಿಗಳ ಉಷ್ಣತೆ ಬಹುಮುಖ್ಯವಾಗುತ್ತದೆ. ಉದಾಹರಣೆಗೆ ಬೆಚ್ಚನೆಯ ನೀರು ಅಗತ್ಯವಿರುವ ಕೇಕ್‌ಗೆ, ನೀವು ತಣ್ಣೀರು ಹಾಕಿದರೆ ಆ ಕೇಕ್‌ ಚೆನ್ನಾಗಿ ಆಗುವುದಿಲ್ಲ.

* ಬೇಕರಿ ತಿಂಡಿಗಳನ್ನು ಮಾಡಲು ಬಳಸುವ ಸಾಮಾಗ್ರಿಗಳು ಉತ್ತಮ ಗುಣಮಟ್ಟದ್ದಾಗಿರಬೇಕು ಹಾಗೂ ಸೂಕ್ತ ಅಳತೆಯಲ್ಲಿಯೇ ಸಾಮಗ್ರಿ ಹಾಕಬೇಕು. ಸಾಧ್ಯವಾದಷ್ಟು ಮೆಟ್ರಿಕ್‌ ತೂಕದ ಅಳತೆಯನ್ನು ಬಳಸಿ.

* ಕೇಕ್‌ ಮುಂತಾದ ಬೇಕರಿ ತಿನಿಸುಗಳಿಗೆ ಬೇಕಿಂಗ್‌ ಸೋಡಾ ಅತ್ಯಗತ್ಯ. ಹಾಗಂತ ತುಂಬಾ ಹಳೆಯದಾಗಿರುವ ಬೇಕಿಂಗ್‌ ಸೋಡಾ ಹಾಕಬೇಡಿ. ಆರು ತಿಂಗಳಿಗಿಂತ ಹೆಚ್ಚು ಹಳೆಯದಾಗಿರುವ ಬೇಕಿಂಗ್‌ ಸೋಡಾ ತನ್ನ ಸಾಮರ್ಥ್ಯ‌ ಕಳೆದುಕೊಂಡಿರುತ್ತದೆ.

* ಪೇಸ್ಟ್ರಿ ಷೆಫ್‌ಗಳು ಸಾಮಾನ್ಯವಾಗಿ ತಿಂಡಿಗಳಿಗೆ ಹಾಕುವ ಸಕ್ಕರೆಯ ಪ್ರಮಾಣದ ಬಗ್ಗೆ ತುಂಬಾ ಗಮನ ನೀಡುತ್ತಾರೆ. ಯಾಕೆಂದರೆ ಸಕ್ಕರೆಯ ಪ್ರಮಾಣ ಒಂಚೂರು ಹೆಚ್ಚುಕಮ್ಮಿಯಾದರೂ ಕೇಕ್‌, ಕುಕೀಸ್‌ ಇತ್ಯಾದಿಗಳ ಬಣ್ಣ ಮತ್ತು ರುಚಿ ಬದಲಾಗುತ್ತವೆ.

* ಬೇಕರಿ ತಿನಿಸುಗಳಿಗೆ ತಾಜಾ ಬೆಣ್ಣೆಯನ್ನೇ ಬಳಸಿ. ಹಳೆ ಬೆಣ್ಣೆಯಲ್ಲಿ ತೇವಾಂಶ ಕಡಿಮೆಯಾಗಿರುತ್ತದೆ. ಇದನ್ನು ಖಾದ್ಯಕ್ಕೆ ಬಳಸಿದರೆ ಆ ಖಾದ್ಯ ಒಣಗಿದಂತಾಗುತ್ತದೆ.

* ಬೇಕರಿ ಉತ್ಪನ್ನಗಳಿಗೆ ಬಳಸುವ ಮೊಟ್ಟೆಯ ಬಿಳಿ ಮತ್ತು ಹಳದಿ ಲೋಳೆಯನ್ನು ಪ್ರತ್ಯೇಕವಾಗಿ ತೆಗೆದು ಹಾಕಿ ಕಲಸಿ. ಒಟ್ಟಿಗೆ ಹಾಕಿದರೆ ನಿರೀಕ್ಷಿತ ರುಚಿ ಸಿಗುವುದಿಲ್ಲ.

* ಬೇಕಿಂಗ್‌ ವಿಧಾನದಲ್ಲಿ ಮಿಶ್ರಣವನ್ನು ಕಲಸುವ ರೀತಿ ಕೂಡಾ ಮುಖ್ಯವಾಗುತ್ತದೆ. ಇದರಲ್ಲಿ ಮೊದಲು ಒಣ ಸಾಮಗ್ರಿಗಳನ್ನು ಪ್ರತ್ಯೇಕವಾಗಿ ಚೆನ್ನಾಗಿ ಕಲಸಬೇಕು. ನಂತರ ತೇವಾಂಶವಿರುವ ಸಾಮಗ್ರಿಗಳನ್ನು ಪ್ರತ್ಯೇಕವಾಗಿ ಕಲಸಬೇಕು. ಆಮೇಲೆ ಇವೆರಡನ್ನೂ ಸೇರಿಸಿ ಕಲಸಬೇಕು. ಆಗ ಆ ಮಿಶ್ರಣ ಮೃದುವಾಗುತ್ತದೆ.

* ಪರ್ಪೆಕ್ಟ್ ಬೇಕರ್‌ ಆಗಬೇಕಿದ್ದರೆ ಮಿಶ್ರಣವನ್ನು ಬೀಟಿಂಗ್‌ ಮಾಡುವ ಕಲೆಯೂ ಗೊತ್ತಿರಬೇಕು. ಆಯಾ ಮಿಶ್ರಣವನ್ನು ಕಡಿಮೆ ಅಥವಾ ಹೆಚ್ಚು ಬೀಟ್‌ ಮಾಡಿದರೆ ಆ ಖಾದ್ಯದ ಸಾಂದ್ರತೆಯ ಮೇಲೆ ಪರಿಣಾಮ ಬೀರುತ್ತದೆ.

* ಬೇಕಿಂಗ್‌ಗೆ ಬಳಸುವ ಪಾತ್ರೆಗಳು ಉತ್ತಮ ಗುಣಮಟ್ಟದ್ದಾಗಿರಲಿ. ಕೇಕ್‌ ಮಾಡಲು ಬಳಸುವ ಟಿನ್‌ಗೆ ಹೆಚ್ಚಿನ ಪ್ರಮಾಣದ ಬೆಣ್ಣೆ ಸವರಿ. ಇದರಿಂದ ಕೇಕ್‌ ಮುರಿಯದೆ ಪೂರ್ಣವಾಗಿ ಬರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...