alex Certify ಬೇಸಿಗೆಯಲ್ಲಿ ತಂಪು ನೀಡುವ `ಫಲೂದಾ’ದ ಮೂಲ ಯಾವ ದೇಶ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ತಂಪು ನೀಡುವ `ಫಲೂದಾ’ದ ಮೂಲ ಯಾವ ದೇಶ ಗೊತ್ತಾ….?

ಬೇಸಿಗೆ ಶುರುವಾಗಿದೆ. ಈಗ್ಲೇ ಬಿಸಿ ತಾಪ ಹೆಚ್ಚಾಗಿದ್ದು, ಏಪ್ರಿಲ್ ಅಂತ್ಯದ ವೇಳೆಗೆ ಬಿಸಿಲ ಧಗೆ ಮತ್ತಷ್ಟು ಹೆಚ್ಚಾಗಲಿದೆ. ಬೇಸಿಗೆ ಶುರುವಾಗ್ತಿದ್ದಂತೆ ಜನರ ಆಹಾರ ಪದ್ಧತಿ ಬದಲಾಗುತ್ತದೆ.

ಟೀ-ಕಾಫಿ ಬದಲು ತಂಪು ಪಾನೀಯ, ಐಸ್ ಕ್ರೀಂ, ಫಲೂದಾ ಸೇವಿಸಲು ಇಷ್ಟಪಡ್ತಾರೆ. ಮಕ್ಕಳಿಂದ ಹಿರಿಯರವರೆಗೆ ಎಲ್ಲರಿಗೂ ಇಷ್ಟವಾಗುವ ಫಲೂದಾ ನಮ್ಮ ದೇಶದ ಖಾದ್ಯವಲ್ಲ.

ಇದು ಭಾರತದ ಸಾಂಪ್ರದಾಯಿಕ ಸಿಹಿ ತಿಂಡಿಯಲ್ಲ. ಸಾವಿರಾರು ಕಿಲೋಮೀಟರ್ ದೂರದಿಂದ ಇದು ಭಾರತಕ್ಕೆ ಬಂದಿದೆ. ರುಚಿಕರ ಫಲೂದಾ ನೀಡಿರುವ ದೇಶದ ಹೆಸರು ಪರ್ಷಿಯಾ. ಆಶ್ಚರ್ಯಪಡಬೇಡಿ, ಪರ್ಷಿಯಾ ಇರಾನ್‌ನ ಹಳೆಯ ಹೆಸರು. ಶಿರಾಜ್ ಇರಾನ್‌ನ ಅತ್ಯಂತ ಸುಂದರವಾದ ನಗರ. ಈ ಫಲೂದಾವನ್ನು ಶಿರಾಜ್ ನಗರ ನೀಡಿದೆ. ಇಂದಿಗೂ ನೂರಾರು ವರ್ಷಗಳಷ್ಟು ಹಳೆಯದಾದ ಫಲೂದಾ ಅಂಗಡಿಗಳು ಇಲ್ಲಿವೆ. ಈ ನಗರದಲ್ಲಿ ಇದನ್ನು ಫಾಲುದೇಹ ಎಂದು ಕರೆಯುತ್ತಾರೆ. ಫಲುದಾ ಗೆ ಇರಾನ್‌ನಲ್ಲಿ ವಿಶೇಷ ಮಹತ್ವವಿದೆ. ಅಲ್ಲಿನ ಪ್ರಮುಖ ಹಬ್ಬವಾದ ಜಮ್ಶೋದಿ ನವ್ರೋಜ್ ಸಂದರ್ಭದಲ್ಲಿ ಇದನ್ನು ಬಳಸಲಾಗುತ್ತದೆ. ಕ್ರಿ.ಪೂ 400 ರಿಂದಲೂ ಫಲೂದಾ ತಯಾರಿಸಲಾಗ್ತಿದೆ.

ಮೊಘಲರು ಆಹಾರ ಪ್ರಿಯರು. ಅವರು ಭಾರತಕ್ಕೆ ಬಂದಾಗ ಆಧುನಿಕ ಯುದ್ಧದ ಜೊತೆಗೆ ವಿವಿಧ ಪಾಕಪದ್ಧತಿಗಳನ್ನು ತಂದಿದ್ದರು. ಫಲೂದಾ 16 ಮತ್ತು 18 ನೇ ಶತಮಾನಗಳ ನಡುವೆ ಭಾರತಕ್ಕೆ ಬಂತು. ಮೊಘಲ್ ಚಕ್ರವರ್ತಿ ಜಹಾಂಗೀರ್ ಇದನ್ನು ಭಾರತಕ್ಕೆ ತಂದರು ಎಂದು ನಂಬಲಾಗಿದೆ. ಜಹಾಂಗೀರ್‌ ಭಕ್ಷ್ಯ ಪ್ರಿಯ. ಜಹಾಂಗೀರ್ ಗಾಗಿ ನಾಡಿರ್ ಷಾ ಅದನ್ನು ಭಾರತಕ್ಕೆ ತಂದರು ಎಂದು ಅನೇಕ ಜನರು ನಂಬುತ್ತಾರೆ.

ಬೇರೆ ಬೇರೆ ಪ್ರದೇಶಗಳಲ್ಲಿ ಫಲೂದಾ ತಯಾರಿಸುವ ರೀತಿ ಬೇರೆ ಬೇರೆ. ಆದ್ರೆ ರುಚಿ ಮಾತ್ರ ಅಧ್ಬುತವಾಗಿರುತ್ತದೆ. ಗುಲಾಬಿ ಸಿರಪ್, ತುಳಸಿ ಬೀಜಗಳಿಂದ ಇದನ್ನು ತಯಾರಿಸಲಾಗುತ್ತದೆ. ಫಲೂದಾವನ್ನು ಒಂದು ಗಂಟೆಯಲ್ಲಿ ಸುಲಭವಾಗಿ ತಯಾರಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...