alex Certify ಇಲ್ಲಿದೆ ರುಚಿ ರುಚಿ ಕೋಕೋನಟ್ ‘ಪ್ಯಾನ್ ಕೇಕ್’ ಮಾಡುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ರುಚಿ ರುಚಿ ಕೋಕೋನಟ್ ‘ಪ್ಯಾನ್ ಕೇಕ್’ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು :

100 ಗ್ರಾಂ ಗೋಧಿಹಿಟ್ಟು, 2 ಚಮಚ ಕಸ್ಟರ್ ಶುಗರ್, 2 ಚಿಟಕಿ ಉಪ್ಪು, 1 ಮೊಟ್ಟೆ, ಅರ್ಧ ಕಪ್ ತೆಂಗಿನ ಹಾಲು, 2 ಚಮಚ ಎಣ್ಣೆ, 1-2 ಹನಿ ವೆನಿಲಾ ಎಸೆನ್ಸ್, 1-2 ಚಮಚ ನಿಂಬೆ ರಸ, ಅಗತ್ಯವಿದ್ದಷ್ಟು ಎಣ್ಣೆ.

ಹೂರಣಕ್ಕಾಗಿ :

1 ಗಿಟಕು ತೆಂಗಿನ ತುರಿ, 75 ಗ್ರಾಂ ಬೆಲ್ಲದ ಪುಡಿ, 2-2 ಚಿಟಕಿ ಜಾಯಿಕಾಯಿ ಪುಡಿ – ಏಲಕ್ಕಿ ಪುಡಿ.

ತಯಾರಿಸುವ ವಿಧಾನ :

ಒಂದು ಬಟ್ಟಲಿಗೆ ಗೋಧಿಹಿಟ್ಟು, ಕಸ್ಟರ್ ಶುಗರ್, ಉಪ್ಪು ಹಾಕಿಡಿ. ಇದರ ಮಧ್ಯೆ ಹಳ್ಳ ಮಾಡಿಕೊಂಡು ಮೊಟ್ಟೆ, ತೆಂಗಿನ ಹಾಲು, ಬೆಣ್ಣೆ ಬೆರೆಸಿ ನಿಧಾನವಾಗಿ ಕಲೆಸಬೇಕು. ನಂತರ ವೆನಿಲಾ ಎಸೆನ್ಸ್, ನಿಂಬೆರಸ ಬೆರೆಸಿ ಚೆನ್ನಾಗಿ ಕಲೆಸಿ. ಇದು ದೋಸೆ ಹಿಟ್ಟಿನ ಹದಕ್ಕೆ ಇರಬೇಕು.

1 ತಾಸು ನೆನೆಯಲು ಬಿಡಿ. ಹೂರಣದ ಎಲ್ಲಾ ಸಾಮಗ್ರಿ ಬೆರೆಸಿಕೊಳ್ಳಿ. ಒಂದು ನಾನ್ ಸ್ಟಿಕ್ ಫ್ರೈಯಿಂಗ್ ಪ್ಯಾನ್ ಗೆ 1 ಚಮಚ ಎಣ್ಣೆ ಹಾಕಿ ಹರಡಿಕೊಳ್ಳಿ. ಒಂದು ಸೌಟು ಹಿಟ್ಟು ಹರಡಿ ದೋಸೆ ತರಹ ಎರಡೂ ಬದಿ ಬೇಯಿಸಿ. ಇದಕ್ಕೆ 2-2 ಚಮಚ ಹೂರಣ ಹರಡಿ, ಒಂದು ಬದಿ ಮಡಿಚಿ ಕೆಳಗಿಳಿಸಿ. ಇದರ ಮೇಲೆ ಬೆಣ್ಣೆ ಹಾಕಿ ಬಿಸಿಯಾಗಿ ಸವಿಯಲು ಕೊಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...