alex Certify ದೇಹ ಶಕ್ತಿಯುತವಾಗಿ ಸದೃಢವಾಗಿಸಲು ಈ ಆಹಾರ ಸೇವಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಹ ಶಕ್ತಿಯುತವಾಗಿ ಸದೃಢವಾಗಿಸಲು ಈ ಆಹಾರ ಸೇವಿಸಿ

ದೇಹವು ಶಕ್ತಿಯುತವಾಗಿ ಆರೋಗ್ಯವಾಗಿರಲು ನಾವು ಹಲವು ಆಹಾರಗಳನ್ನು ಸೇವಿಸುತ್ತೇವೆ. ಸೊಪ್ಪು, ತರಕಾರಿ, ಹಣ್ಣುಗಳು ನಮ್ಮನ್ನು ಸದೃಢವಾಗಿಸಲು ಸಹಕಾರಿಯಾಗಿದೆ. ದೇಹದಲ್ಲಿ ರಕ್ತವನ್ನು ಕೂಡ ಹೆಚ್ಚಿಸುತ್ತವೆ. ಹಾಗಾಗಿ ದೇಹಕ್ಕೆ ಶಕ್ತಿ ಒದಗಿಸುವ ಆಹಾರಗಳು ಯಾವುದೆಂಬುದನ್ನು ತಿಳಿದುಕೊಳ್ಳಿ.

*ಹಾಲು ಮತ್ತು ಡ್ರೈ ಫ್ರುಟ್ಸ್ ಗಳು : ಇವುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಆಯಾಸ ಮತ್ತು ದೇಹದಲ್ಲಿ ನೋವಿನಂತಹ ಸಮಸ್ಯೆಗಳು ದೂರವಾಗುತ್ತದೆ.

*ಬಾಳೆಹಣ್ಣು : ಬಾಳೆಹಣ್ಣು ಜೀವಸತ್ವ ಮತ್ತು ಖನಿಜಗಳನ್ನು ಹೊಂದಿರುತ್ತದೆ. ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ, ಹಾಗೇ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ.

*ಸೇಬು : ದಿನಕ್ಕೆ ಒಂದು ಸೇಬು ತಿಂದರೆ ವೈದ್ಯರಿಂದ ದೂರವಿರಬಹುದು ಎನ್ನುತ್ತಾರೆ. ಇದು ಹೆಚ್ಚು ಫೈಬರ್ ಅನ್ನು ಹೊಂದಿದ್ದು, ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದು ದೇಹಕ್ಕೆ ಶಕ್ತಿ ನೀಡುತ್ತದೆ.

*ಮೊಟ್ಟೆ : ಇದರಲ್ಲಿ ಪ್ರೋಟೀನ್ ಮತ್ತು ಜೀವಸತ್ವ ಹೆಚ್ಚಾಗಿದ್ದು, ಇದು ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ದಿನಕ್ಕೊಂದು ಮೊಟ್ಟೆ ನಿಯಮಿತವಾಗಿ ಸೇವಿಸಿದರೆ ದೇಹದಲ್ಲಿ ಶಕ್ತಿ ಹೆಚ್ಚಾಗುತ್ತದೆ.

*ದಾಳಿಂಬೆ : ದಾಳಿಂಬೆ ಹಣ್ಣು ದೇಹದಲ್ಲಿ ರಕ್ತವನ್ನು ಹೆಚ್ಚಿಸುತ್ತದೆ. ಪ್ರತಿದಿನ ದಾಳಿಂಬೆ ಸೇವಿಸಿದರೆ ರಕ್ತ ಉತ್ಪತ್ತಿಯಾಗಿ ಶಕ್ತಿ ಹೆಚ್ಚುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...