alex Certify ವಂದೇ ಭಾರತ್ ರೈಲ್ ನಲ್ಲಿಯೂ ನಂದಿನಿ ಉತ್ಪನ್ನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಂದೇ ಭಾರತ್ ರೈಲ್ ನಲ್ಲಿಯೂ ನಂದಿನಿ ಉತ್ಪನ್ನ

ಬೆಂಗಳೂರು: ಕೆಎಂಎಫ್ ನಂದಿನಿ ಬ್ರಾಂಡ್ ಉತ್ಪನ್ನಗಳು ವಂದೇ ಭಾರತ್ ರೈಲಿನಲ್ಲಿಯೂ ಮಾರಾಟವಾಗುತ್ತಿವೆ. ಹಾಲು, ಲಸ್ಸಿ, ಮಿಲ್ಕ್ ಶೇಕ್ ಪೆಟ್ ಬಾಟಲ್ ಸೇರಿದಂತೆ ನಂದಿನಿ ಹಾಲಿನ ಉತ್ಪನ್ನಗಳನ್ನು ವಿಮಾನ ಮತ್ತು ರೈಲುಗಳಲ್ಲಿಯೂ ಲಭ್ಯವಾಗುವಂತೆ ಮಾಡಲಾಗಿದೆ.

ಅದೇ ರೀತಿ ವಂದೇ ಭಾರತ್ ರೈಲ್ ನಲ್ಲಿಯೂ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಿಂದ ಹೊರಡುವ ವಂದೇ ಭಾರತ್ ರೈಲ್ ನಲ್ಲಿ ಕಳೆದ 15 ದಿನಗಳಿಂದ ಪ್ರತಿದಿನ 7ರಿಂದ 10 ಸಾವಿರದಷ್ಟು ಮಿಲ್ಕ್ ಶೇಕ್ ಪೆಟ್ ಪಾಟಲು ಮಾರಾಟವಾಗುತ್ತಿವೆ. ವಂದೇ ಭಾರತ್ ರೈಲ್ ನಲ್ಲಿ ಬೆಳಗಿನ ಉಪಹಾರದಲ್ಲಿ ನಂದಿನಿ ಬೆಣ್ಣೆ, ಲಸ್ಸಿ 200ಮಿ.ಲೀ. ವಿತರಣೆ ಮಾಡಲಾಗುತ್ತಿದೆ. ಇದರೊಂದಿಗೆ ಗುಡ್ ಲೈಫ್ ಸುವಾಸಿತ ಹಾಲು, ಚಾಕೋಲೇಟ್, ಮಿಲ್ಕ್ ಶೇಕ್ ಪೆಟ್ ಬಾಟಲ್ ಗಳನ್ನು ಮಾರಾಟ ಮಾಡಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...